ಅಜಾತಶತ್ರು ಡಾ.ಶಾಮನೂರು ಶಿವಶಂಕರಪ್ಪ: ವಾಮದೇವಪ್ಪ

KannadaprabhaNewsNetwork |  
Published : Dec 18, 2025, 01:45 AM IST
ಕ್ಯಾಪ್ಷನ17ಕೆಡಿವಿಜಿ33 ದಾವಣಗೆರೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಂದ ಡಾ.ಶಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಡಾ.ಶಾಮನೂರು ಶಿವಶಂಕರಪ್ಪ ಸುದೀರ್ಘ 94 ವರ್ಷಗಳ ಬದುಕಿನಲ್ಲಿ ರಾಜಕೀಯ, ಸಾಮಾಜಿಕ, ಔದ್ಯಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಯಾರೊಂದಿಗೂ ವೈರತ್ವ ಕಟ್ಟಿಕೊಳ್ಳದ, ಸರಳ ಸಜ್ಜನಿಕೆಯ ಮೃದುಭಾಷಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದ್ದಾರೆ.

- ಕುವೆಂಪು ಕನ್ನಡ ಭವನದಲ್ಲಿ ಕ.ಸಾ.ಪ.ದಿಂದ ಎಸ್‌ಎಸ್‌ಗೆ ನುಡಿನಮನ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಡಾ.ಶಾಮನೂರು ಶಿವಶಂಕರಪ್ಪ ಸುದೀರ್ಘ 94 ವರ್ಷಗಳ ಬದುಕಿನಲ್ಲಿ ರಾಜಕೀಯ, ಸಾಮಾಜಿಕ, ಔದ್ಯಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಯಾರೊಂದಿಗೂ ವೈರತ್ವ ಕಟ್ಟಿಕೊಳ್ಳದ, ಸರಳ ಸಜ್ಜನಿಕೆಯ ಮೃದುಭಾಷಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಮನೂರು ಅಪ್ಪಟ ಕನ್ನಡ ಅಭಿಮಾನಿ. ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಅವರ ಈ ಎಲ್ಲ ಸಾರ್ಥಕ ಸೇವೆಗಳಿಗೆ ಗೌರವ ಸಲ್ಲಿಸುವ ಹಾಗೂ ಅವರ ಹೆಸರು ಅಜರಾಮರವಾಗಿ ಉಳಿಯುವಂತಾಗಬೇಕು. ಅದಕ್ಕಾಗಿ ಅವರಿಗೆ "ಅನರ್ಘ್ಯ ವಿದ್ಯಾರತ್ನ ", "ಅನರ್ಘ್ಯ ದಾನರತ್ನ " ಎಂಬ ಎರಡು ಪ್ರಶಸ್ತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪ್ರತಿ ವರ್ಷ ಕೊಡಮಾಡಲು ಸರ್ಕಾರದ ಗಮನ ಸೆಳೆದು ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪ್ರೊ. ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಶಿವಶಂಕರಪ್ಪ ಅವರು ಸಜ್ಜನ ರಾಜಕಾರಣಿ. ಅವರು ವ್ಯಾಪಾರಿ, ಉದ್ಯಮಿ, ರಾಜಕಾರಿಣಿಯೂ ಹೌದು. ಶೈಕ್ಷಣಿಕ ಹರಿಕಾರರೂ ಆಗಿದ್ದಾರೆ. ಶ್ರೀಮಂತಿಕೆ ಇದ್ದರೂ ಹಮ್ಮುಬಿಮ್ಮು ತೋರದೇ ಬದುಕಿದವರು. ದಾವಣಗೆರೆಯ ಎಲ್ಲ ಸಮುದಾಯಗಳ ಜನರನ್ನು ಬೆಳೆಸಿದ ಉದಾತ್ತ ವ್ಯಕ್ತಿ ಎಂದರು.

ಸಭೆಯಲ್ಲಿ ಪ್ರೊ. ಕೆ.ಆರ್.ಸಿದ್ದಪ್ಪ, ಸುಮತಿ ಜಯಪ್ಪ, ಎನ್.ಎಸ್.ರಾಜು, ಗಣೇಶ ಶೆಣೈ, ಎ.ಮಹಾಲಿಂಗಪ್ಪ, ಪಿ.ಜಯರಾಮ್, ಆನೆಕೊಂಡದ ಲಿಂಗರಾಜ, ಜಿ.ಕೆ. ಕುಲಕರ್ಣಿ, ಮಲ್ಲಮ್ಮ ನಾಗರಾಜ, ಜಯರಾಮ್, ಶೈಲಜಾ, ಚಿದಾನಂದ, ಸಿದ್ದೇಶಪ್ಪ ಕುರ್ಕಿ ನುಡಿನಮನ ಸಲ್ಲಿಸಿದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಬಿ.ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಸಂಘಟನಾ ಕಾರ್ಯದರ್ಶಿ ಸಿ.ಜಿ. ಜಗದೀಶ್ ಕೂಲಂಬಿ, ಸಹ ಕಾರ್ಯದರ್ಶಿ ಕೆ.ಎಸ್. ವೀರೇಶ್ ಪ್ರಸಾದ್, ತಾಲೂಕು ಕ.ಸಾ.ಪ. ಅಧ್ಯಕ್ಷ ಸುಮತಿ ಜಯಪ್ಪ, ಕಸಾಪ ಚನ್ನಗಿರಿ ತಾಲೂಕು ಅಧ್ಯಕ್ಷ ಎಲ್.ಜಿ. ಮಧುಕುಮಾರ್, ಪದಾಧಿಕಾರಿಗಳಾದ ಬಿ.ಎಂ. ಭೈರವೇಶ, ಎಸ್.ಎಂ. ಮಲ್ಲಮ್ಮ, ಸಿ.ಕೆ. ರುದ್ರಾಕ್ಷಿ ಬಾಯಿ, ಸುದರ್ಶನ್ ಕುಮಾರ್, ದಾಗಿನಕಟ್ಟೆ ಪರಮೇಶಪ್ಪ, ಎಂ.ಷಡಕ್ಷರಪ್ಪ ಬೆತೂರು, ಎ.ಎಂ. ಸಿದ್ದೇಶ್ ಕುರ್ಕಿ, ಸಿದ್ದೇಶಪ್ಪ, ಅನ್ನಪೂರ್ಣ ಪಾಟೀಲ್, ಶೈಲಜಾ, ಅಣಬೇರು ತಾರೇಶ್, ಮತ್ತಿತರರು ಭಾಗವಹಿಸಿದ್ದರು.

- - -

-17ಕೆಡಿವಿಜಿ33: ದಾವಣಗೆರೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊನ್ನಾಳಿ ಸರ್ಕಾರಿ ಆಸ್ಪತ್ರೆ ಪರಿಶೀಲಿಸಿದ ಮಹಿಳಾ ಆಯೋಗ
ಮಂಡಕ್ಕಿ-ಅವಲಕ್ಕಿ ಭಟ್ಟಿಗಳಲ್ಲಿ ಮಕ್ಕಳ ದುಡಿಸಿದರೆ ಶಿಕ್ಷೆ