ಪಾಂಡವಪುರ:
ಸಂಘದ ಹಿಂದಿನ ಅಧ್ಯಕ್ಷ ರಾಮೇಗೌಡ, ಉಪಾಧ್ಯಕ್ಷೆ ಸುಜಾತ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಸಂಘದಲ್ಲಿ ನಡೆದ ಚುನಾವಣೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಮಗೂಳೀಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನರಸಿಂಹೇಗೌಡ ಹೊರತುಪಡಿಸಿ ಉಳಿದ ನಿರ್ದೇಶಕರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷ - ಉಪಾಧ್ಯಕ್ಷರಾಗಿ ನರಸಿಂಹೇಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯೂ ಆದ ಡೇರಿ ಕಾರ್ಯದರ್ಶಿ ಶಂಕರ ಎನ್ ಘೋಷಿಸಿದರು.
ಸಂಘದ ಅಧ್ಯಕ್ಷರಾಗಿ ರಾಮಗೂಳೀಗೌಡ, ಉಪಾಧ್ಯಕ್ಷರಾಗಿ ನರಸಿಂಹೇಗೌಡ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆಯೇ ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷ ರಾಮಗೂಳೀಗೌಡ, ಉಪಾಧ್ಯಕ್ಷ ನರಸಿಂಹೇಗೌಡ ಅವರನ್ನು ಎಲ್ಲಾ ನಿರ್ದೇಶಕರು ಅಭಿನಂದಿಸಿದರು.ಈ ವೇಳೆ ಡೇರಿ ನಿರ್ದೇಶಕರಾದ ಕುಮಾರ್ ಕೆ., ಸ್ವಾಮೀಗೌಡ ಕೆ., ದೇವರಾಜು, ಕುಮಾರ, ರಾಮೇಗೌಡ, ಸುಜಾತ, ಲೋಕೇಶ್ ಕೆ.ಎನ್., ದಳವಾಯಿಗೌಡ, ಶಿವರಾಜು ಮುಖಂಡರಾದ ಗ್ರಾಪಂ ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ, ಪ್ರಕಾಶ್ ಕೆ.ಕೆ., ಮರೀಗೌಡ, ವೆಂಕಟರಾಮೇಗೌಡ, ಕರೀಗೌಡ, ಪುಟ್ಟೇಗೌಡ, ಸುಧಾರಕ, ರವಿ ಸೇರಿದಂತೆ ಡೇರಿ ಸಿಬ್ಬಂದಿಗಳು, ಮುಖಂಡರು ಹಾಜರಿದ್ದರು.
ಕನ್ನಡಪ್ರಭ ವಾರ್ತೆ ಮಂಡ್ಯಕನ್ನಡ ಸೇನೆ ಕರ್ನಾಟಕ ಸಂಘಟನೆಯಿಂದ ಜುಲೈ 2ರಂದು ನಗರದ ಗಾಂಧಿ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಇಂದಿನ ಶಿಕ್ಷಣದಲ್ಲಿ ದೇಶದ ಪ್ರಗತಿಯ ಒಂದು ಚಿಂತನೆ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಸಂಘಟನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ತಿಳಿಸಿದರು.
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಮನೋಜವಂ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಡಿ.ಆರ್.ಸುಮನ್, ಕನ್ನಡ ಸೇನೆಯ ರಾಜ್ಯಾ ಉಪಾಧ್ಯಕ್ಷ ಎನ್.ಮುನಿರಾಜೇಗೌಡ, ಕಾರ್ಯಾಧ್ಯಕ್ಷ ಮುನಿಕೃಷ್ಣ, ಮಹಿಳಾ ಜಿಲ್ಲಾಧ್ಯಕ್ಷೆ ಸೌಭಾಗ್ಯ ಶಿವಲಿಂಗು, ಜಿಲ್ಲಾ ಕಾರ್ಯಾಧ್ಯಕ್ಷ ಮಂಡಿಬೆಟ್ಟಹಳ್ಳಿ ಮಂಜುನಾಥ್ ಅತಿಥಿಗಳಾಗಿ ಭಾಗವಹಿಸುವ ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಚಾಲಕಿ ದೇವಮ್ಮ, ಮಹಿಳಾ ಜಿಧ್ಯಕ್ಷೆ ಸೌಭಾಗ್ಯ ಶಿವಲಿಂಗು, ಕಾರ್ಯಾಧ್ಯಕ್ಷ ಮಂಡಿಬೆಟ್ಟಹಳ್ಳಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಕಮ್ಮನಾಯಕನಹಳ್ಳಿ ಮಂಜುನಾಥ್, ಮುಖಂಡ ಸತೀಶ್ ಇದ್ದರು.