14 ವರ್ಷದೊಳಗಿನ ಕ್ರಿಕೆಟ್‌: ವಿಜಯಪುರದ ಪವನದೀಪ ಮಿಂಚು

KannadaprabhaNewsNetwork |  
Published : Feb 07, 2026, 04:00 AM IST
ಪವನದೀಪ ರವಿ ಭಾರದಖಾನೆ  | Kannada Prabha

ಸಾರಾಂಶ

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ದಕ್ಷಿಣ ಭಾರತ 14 ವರ್ಷದೊಳಗಿನ ಬಾಲಕರ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ತಂಡದಿಂದ ಪ್ರತಿನಿಧಿಸುತ್ತಿರುವ ವಿಜಯಪುರದ ಕ್ರಿಕೆಟಿಗ ಪವನದೀಪ ರವಿ ಭಾರದಖಾನೆ ತಮ್ಮ ಅಮೋಘ ಬ್ಯಾಟಿಂಗ್‌ನಿಂದ ಕರ್ನಾಟಕ ತಂಡವನ್ನು ಸುಸ್ಥಿತಿಗೆ ಕೊಂಡೊಯ್ದಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ದಕ್ಷಿಣ ಭಾರತ 14 ವರ್ಷದೊಳಗಿನ ಬಾಲಕರ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ತಂಡದಿಂದ ಪ್ರತಿನಿಧಿಸುತ್ತಿರುವ ವಿಜಯಪುರದ ಕ್ರಿಕೆಟಿಗ ಪವನದೀಪ ರವಿ ಭಾರದಖಾನೆ ತಮ್ಮ ಅಮೋಘ ಬ್ಯಾಟಿಂಗ್‌ನಿಂದ ಕರ್ನಾಟಕ ತಂಡವನ್ನು ಸುಸ್ಥಿತಿಗೆ ಕೊಂಡೊಯ್ದಿದ್ದಾರೆ.

ತಾನು ಆಡಿರುವ ಪ್ರತಿ ಪಂದ್ಯದಲ್ಲಿಯೂ ತಮ್ಮ ಅಮೋಘ ಬ್ಯಾಟಿಂಗ ಪ್ರದರ್ಶನ ನೀಡುತ್ತಿದ್ದು, ಪಂದ್ಯಾವಳಿಯಲ್ಲಿಯೇ ಇಲ್ಲಿಯವರೆಗೆ ಅತ್ಯಧಿಕ ಓಟಗಳನ್ಣು ಗಳಿಸಿದ್ದಾರೆ. ತಮಿಳುನಾಡಿನ ವಿರುಧ್ಧದ ಪ್ರಥಮ ಪಂದ್ಯದಲ್ಲೇ ಶತಕವನ್ನು ಸಿಡಿಸಿ ತನ್ನ ಪರಿಚಯವನ್ನು ಮಾಡಿಸಿದ್ದರು. ತಮಿಳುನಾಡಿನ ವಿರುದ್ಧ 196 ಎಸೆತಗಳಲ್ಲಿ 28 ಅದ್ಭುತ್‌ ಬೌಂಡರಿ ಮತ್ತು 2 ಸಿಕ್ಸರ್‌ಗಳುಳ್ಳ 152 ಓಟಗಳಿಸಿದರೇ, ಕೇರಳ ವಿರುದ್ಧ ನಡೆದ ಪಂದ್ಯದಲ್ಲಿ 66 ಎಸೆತಗಳಲ್ಲಿ 8 ಬೌಂಡರಿವುಳ್ಳ ಅಜೇಯ 54 ಓಟಗಳು, ಹೈದರಾಬಾದಿನ ವಿರುದ್ಧ 42 ಎಸೆತಗಳಲ್ಲಿ 10 ಬೌಂಡರಿ ಭಾರಿಸಿ 49 ಓಟಗಳನ್ನು ಗಳಿಸಿದರೇ, ಗೋವಾ ರಾಜ್ಯದ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಭಾರಿಸಿ ರಾಷ್ಟ್ರೀಯ ತಂಡದ ಆಯ್ಕೆದಾರರ ಗಮನ ಸೆಳೆದಿದ್ದಾರೆ. ಗೋವಾ ವಿರುದ್ಧ ಕೇವಲ 150 ಎಸೆತಗಳಲ್ಲಿ 42 ಬೌಂಡರಿ ಹಾಗೂ 3 ಸಿಕ್ಸರ್‌ವುಳ್ಳ ಅಜೇಯ 235 ಓಟಗಳನ್ನು ಭಾರಿಸಿ ಕರ್ನಾಟಕಕ್ಕೆ ಆಧಾರ ಸ್ತಂಭವಾಗಿದ್ದಾರೆ. ಇಲ್ಲಿಯವರೆಗೆ 4 ಪಂದ್ಯಗಳಿಂದ 88 ಬೌಂಡರಿಗಳಿಂದ 245ರ ಸರಾಸರಿಯಲ್ಲಿ 490 ಪಂದ್ಯಾವಳಿಯಲ್ಲಿಯೇ ಅತ್ಯಧಿಕ ಓಟಗಳಿಸಿದ್ದಾರೆ. ಕೆ.ಎಸ್‌.ಸಿ.ಎ ರಾಯಚೂರ ವಲಯದ ಸಂಚಾಲಕ ಕುಶಾಲ ಪಾಟೀಲ, ವಿಜಯಪುರ ಜಿಲ್ಲೆಯ ಸಂಯೋಜಕ ಎನ್‌.ಎಂ.ಹುಟಗಿ, ಮಹಿಳಾ ಕ್ರಿಕೆಟ್‌ ತರಬೇತುದಾರ ಡಾ.ಅಶೋಕಕುಮಾರ ರಾ.ಜಾಧವ, ಬುಲ್ಸ್‌ ರಿಂಗ್‌ ಕ್ರಿಕೆಟ್‌ ಅಕಾಡೆಮಿಯ ಅಬ್ಬಿವಕಾಸ್‌ ಪೀರಜಾದೆ, ಝಾಕೀರ್‌ ನಾಯ್ಕೋಡಿ ಅವರುಗಳಲ್ಲದೇ, ಜಿಲ್ಲೆಯ ಕ್ರಿಕೆಟ್‌ ಸಂಸ್ಥೆಯ ಹಲವು ಸಂಚಾಲಕರು, ಹಿರಿಯ ಆಟಗಾರರು, ವಿವಿಧ ಸಂಘ-ಸಂಸ್ಥೆಗಳು ಅಭಿನಂದಿಸಿ ಭವಿಷ್ಯದಲ್ಲಿ ಕರ್ನಾಟಕ ರಾಜ್ಯ, ರಾಯಚೂರ ವಲಯ ಮತ್ತು ವಿಜಯಪುರ ಜಿಲ್ಲೆಗೆ ಹೆಚ್ಚಿನ ಕೀರ್ತಿ ತರಲಿ ಎಂದು ಆಶಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ