ಕನ್ನಡಪ್ರಭ ವಾರ್ತೆ ಹಲಗೂರು
ವಿಶ್ವ ಭೂಮಿ ದಿನ ಅಂಗವಾಗಿ ಭೂಮಿ ರಕ್ಷಣೆ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಮಾನವನ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯ ಭೂಮಿ ತಾಯಿಗಿದೆಯೇ ಹೊರತು ಅವನ ದುರಾಸೆಗಳನ್ನಲ್ಲ. ಭೂತಾಯಿಯ ಮಹತ್ವವನ್ನು ಅರಿಯ ಬೇಕಾಗಿರುವ ನಾವು ಅವಳನ್ನು ರಕ್ಷಿಸುವ ಕಡೆಗೂ ಗಮನಹರಿಸಬೇಕು ಎಂದರು.
ಮಿತಿಮೀರಿದ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆಯಿಂದ ಹೆಚ್ಚುತ್ತಿರುವ ಅರಣ್ಯ ನಾಶ, ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿಯಿಂದ ಕಾಲ ಕ್ರಮೇಣ ಭೂಮಿ ತನ್ನ ಸತ್ವ ಕಳೆದುಕೊಳ್ಳುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.ಪ್ರತಿ ವರ್ಷ ಏ. 22ರಂದು ಜಗತ್ತಿನಾದ್ಯಂತ ವಿಶ್ವ ಭೂಮಿ ದಿನ ಎಂದು ಆಚರಣೆ ಮಾಡಲಾಗುತ್ತಿದೆ. ಹವಾಮಾನ ಬದಲಾವಣೆಯ ಬಗ್ಗೆ ತಿಳಿಯಲು ಮತ್ತು ಪ್ರಪಂಚದಾದ್ಯಂತ ಅದರ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಈ ದಿನವನ್ನು 1970 ರಿಂದ ವಿಶ್ವ ಭೂ ದಿನ ಎಂದು ಆಚರಿಸಲಾಗುತ್ತಿದೆ ಎಂದರು.
ದುರಾಸೆಯಿಂದ ಭೂಮಿ ಗರ್ಭ ಬಗೆದು ಚಿನ್ನ, ಬೆಳ್ಳಿ ಅದಿರುಗಳನ್ನು ಹೊರ ತೆಗೆಯುತ್ತಿದ್ದೇವೆ. ನೀರು ಮುಗಿಸುತ್ತಿದ್ದೇವೆ. ಭೂಮಿಯಿಂದ ಸರ್ವಸಂಗ ಪರೀ ತ್ಯಾಗ ನೀತಿಯುಕ್ತ ಬದುಕಿಗಾಗಿ ಭೂಮಿಯಿಂದ ಕ್ಷಮಾ ಗುಣವನ್ನು ಅರಿತುಕೋ ಎಂಬಂತೆ ಎಷ್ಟೇ ದೌರ್ಜನ್ಯ ನಡೆಸಿದರು ಕ್ಷಮಿಸುತ್ತಾ ಸಿಟ್ಟು ಬಂದರು ತನ್ನ ಮಡಿಲ ಮಕ್ಕಳನ್ನು ಸರ್ವನಾಶ ಮಾಡದೆ ಕ್ಷಮೆಯಾಧರಿತ್ರಿ ಎನಿಸಿಕೊಂಡಿದ್ದಾಳೆ. ಅಂತಹ ಕ್ಷಮಯಾಧರಿತ್ರಿಯ ಸ್ಮರಣೆಗೆ ಈ ದಿನವನ್ನು ಮುಡಿಪಾಗಿ ಇಡಲಾಗಿದೆ ಎಂದರು.
ಮರಗಳನ್ನು ಕಡಿಯುವ ಬದಲು ಹೆಚ್ಚು ಗಿಡಗಳನ್ನು ನೆಟ್ಟಿ ಮರ ಬೆಳೆಸುವುದರಿಂದ ಸಕಾಲಕ್ಕೆ ಮಳೆಯಾಗಿ ಸಾಕಷ್ಟು ಅನುಕೂಲವಾಗುತ್ತದೆ. ಮಳೆ ಸಮೃದ್ಧಿಯಾಗಿ ಆಗಿ ಭೂಮಿ ತಂಪಾಗಿದ್ದರೆ ಭೂಮಿ ಮೇಲೆ ವಾಸಿಸುವ ಸಕಲ ಜೀವಿಗಳು ತಂಪಾಗಿರುತ್ತವೆ. ಆದ್ದರಿಂದ ಮಾನವರಾದ ನಾವು ಪರಿಸರ ಉಳಿಸಿಕೊಂಡು ಸಮಾಜ ಸ್ವಾಸ್ಥ ಕಾಪಾಡಿಕೊಳ್ಳಬೇಕಾಗಿದೆ ಎಂದರು.