ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ನಗರದ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಶನಿವಾರ ಲಿಯೋ ಕ್ಲಬ್ ಆಫ್ ಕಿರಣ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿ ವರ್ಷ ಅಸಂಖ್ಯಾತ ಪದವೀಧರರು ಪದವಿ ಮುಗಿಸಿ ಹೊರ ಬರುತ್ತಿದ್ದಾರೆ. ಆದರೆ ಎಲ್ಲರಿಗೂ ಉದ್ಯೋಗದ ಭದ್ರತೆ ಸಿಗುತ್ತಿದೆ ಎಂಬುದರ ಪ್ರಶ್ನೆಗೆ ನಾವು ಉತ್ತರ ಹುಡುಕಿ ಕೊಳ್ಳಬೇಕಿದೆ ಎಂದರು.
ಸರ್ಕಾರದ ಇಲಾಖೆಗಳಲ್ಲಿ ಸೀಮಿತವಾದ ಉದ್ಯೋಗ ಅವಕಾಶಗಳು ಇವೆ. ಜೊತೆಗೆ ಯಾವುದೇ ದೇಶದಲ್ಲಿ ಎಲ್ಲರಿಗೂ ಸರ್ಕಾರಗಳು ಉದ್ಯೋಗ ಅವಕಾಶಗಳು ನೀಡಲು ಸಾಧ್ಯವಿಲ್ಲ ಎಂದರು. ಉದ್ಯೋಗ ಮೇಳ ಆಯೋಜಿಸುವುದು ತುಂಬಾ ಕಷ್ಟದ ಕೆಲಸ. ಎಲ್ಲರಿಂದಲೂ ಉದ್ಯೋಗ ಮೇಳ ಆಯೋಜನೆ ಸಾಧ್ಯವಾಗಿಲ್ಲ. ಯಾರಿಗೆ ಸಮಾಜದ ಮೇಲೆ ಕಾಳಜಿ ಇರುತ್ತದೆಯೋ ಅವರು ಮಾತ್ರ ಇಂತಹ ಉದ್ಯೋಗ ಮೇಳಗಳನ್ನು ನಡೆಸಲು ಸಾಧ್ಯ. ಈ ನಿಟ್ಟಿನಲ್ಲಿ ಲಿಯೋ ಕ್ಲಬ್ನ ಶ್ರೀಕಾಂತ್ ಉತ್ತಮವಾಗಿ ಯುವ ಜನರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಲಿ ಎಂದರು.ಬಿ.ಪಿ. ಲೋಕೇಶ್ ಕೈಚಳಕದಲ್ಲಿ ಅರಳಿದ ಚಕ್ರವರ್ತಿ: ಕಾರ್ಯಕ್ರಮದ ವೇದಿಕೆಯಲ್ಲಿ ಚಿಕ್ಕಬಳ್ಳಾಪುರದ ಖ್ಯಾತ ಕುಂಚ ಕಲಾವಿದ ಬಿಪಿ ಲೋಕೇಶ್ ಅವರ ಕೈಚಳಕದಲ್ಲಿ ಐಪಿಎಸ್ ಹಿರಿಯ ಅಧಿಕಾರಿ ಅರುಣ್ ಚಕ್ರವರ್ತಿ ಅವರ ಭಾವಚಿತ್ರವನ್ನು ಆಕರ್ಷಕವಾಗಿ ಬಿಡಿಸುವ ಮೂಲಕ ಲೋಕೇಶ್ ಗಮನಸೆಳೆದರು.
-----
ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಯುವುದರ ಜೊತೆಗೆ ದೌರ್ಜನ್ಯವೆಸಗಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಠಾಣೆಗಳನ್ನು ಸ್ಥಾಪಿಸಲಾಗಿದೆ ಎಂದರು, ಉನ್ನತ ಹುದ್ದೆಗಳಿಗೆ ಹೋಗಲು ಸಾಕಷ್ಟು ಅವಕಾಶಗಳು ಇವೆ. 1993ರಲ್ಲಿ ನಾನು ಐಪಿಎಸ್ ಉತ್ತೀರ್ಣ ಮಾಡಿದೆ. ಪ್ರತಿಯೊಬ್ಬರೂ ಅಂಬೇಡ್ಕರ್ ಅವರನ್ನು ಸ್ಫೂರ್ತಿಯಾಗಿ ಪಡೆದುಕೊಂಡು ಓದಬೇಕೆಂದರು. ಯುಪಿಎಸ್ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶ ಇದೆ. ಆಂಗ್ಲ ಭಾಷಾ ಜ್ಞಾನದ ಕೊರತೆ ಇದೆ ಎಂದು ಕುಗ್ಗುವುದು ಬೇಡ. ಕನ್ನಡದಲ್ಲಿಯೂ ಪರೀಕ್ಷೆ ಬರೆಯಬಹುದೆಂದು ಸಲಹೆ ನೀಡಿದರು.