ಸುದ್ದಿಗೋಷ್ಠಿ । ಹಸಿರುಮನೆ ಪ್ರತಿಷ್ಠಾನದ ವೆಂಕಟೇಶ್ ಮೂರ್ತಿ
ಕನ್ನಡಪ್ರಭ ವಾರ್ತೆ ಹಾಸನ
ಏ.೨೬ ರಂದು ನಡೆಯುತ್ತಿರುವ ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಭ್ರಷ್ಟ ಬಿಜೆಪಿ ಮತ್ತು ಸ್ವಾರ್ಥಿ ಜೆಡಿಎಸ್ ಅಪವಿತ್ರ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣನ ಸೋಲಿಸುವಂತೆ ಹಾಸನ ಮತದಾರರಿಗೆ ಮನವಿ ಮಾಡಿಕೊಳ್ಳುತ್ತದೆ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ಮತ್ತು ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್.ಪಿ. ವೆಂಕಟೇಶ್ ಮೂರ್ತಿ ತಿಳಿಸಿದರು.ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ‘ಮಾ.೩೧ ರಂದು ಹಾಸನದಲ್ಲಿ ನಡೆದ ಹಾಸನ ಜಿಲ್ಲೆಯ ಕಮ್ಯೂನಿಸ್ಟ್, ದಲಿತ ಅಲ್ಪಸಂಖ್ಯಾತ ಮತ್ತಿತರೆ ಜನ ವಿಭಾಗಗಳ ಜನಪರ ಚಳವಳಿಗಳ ನಾಯಕರು ಮತ್ತು ಜಿಲ್ಲೆಯ ಜನಪರ ತೀರ್ಮಾನ ಕೈಗೊಳ್ಳಲಾಗಿದ್ದು, ಬಿಜೆಪಿ- ದಲಿತ, ರೈತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ವ್ಯಕ್ತಿಗಳ ಸಭೆಯಲ್ಲಿ ಒಮ್ಮತದ ಜೆಡಿಎಸ್ ಸೋಲಿಸಿ ಹಾಸನ ಉಳಿಸಿ ಎಂಬ ಅಭಿಯಾನವನ್ನು ಹಾಸನ ಲೋಕಸಭಾ ಕ್ಷೇತ್ರದಾದ್ಯಂತ ವ್ಯಾಪಕವಾಗಿ ನಡೆಸಲು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಬಿಜೆಪಿ, ಇತರ ಪಕ್ಷಗಳಿಗಿಂತ ಭಿನ್ನ ಪಕ್ಷ ನಮ್ಮದು. ಪ್ರಾಮಾಣಿಕ ಮತ್ತು ದೇಶಭಕ್ತರ ಪಕ್ಷ’ ಎಂದು ಹೇಳಿದರು.
‘ಈ ದೇಶದ ಜನ ಬೆಲೆ ಏರಿಕೆ, ನಿರುದ್ಯೋಗ, ಬಡತನ, ರೈತರ ಅತ್ಮಹತ್ಯೆ, ಭ್ರಷ್ಟಾಚಾರ ಇನ್ನಿತರ ಸ್ವಾತಂತ್ರ್ಯ ನಂತರದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದುವರೆಗೂ ಅಧಿಕಾರ ನಡೆಸಿದವರು ಸ್ವಿಸ್ ಬ್ಯಾಂಕ್‌ಗಳಲ್ಲಿ ಕಪ್ಪು ಹಣ ಕೂಡಿಟ್ಟಿದ್ದಾರೆ. ನಾವು ಅದನ್ನೆಲ್ಲಾ ದೇಶಕ್ಕೆ ಮರಳಿ ತರುತ್ತೇವೆ. ಜನರ ಹಣವನ್ನು ನಾನೂ ತಿನ್ನುವುದಿಲ್ಲ. ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ ಎಂದಿದ್ದರು. ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ರೈತರ ಸಾಲಮನ್ನಾ ಮಾಡಿ ಅವರು ಬೆಳೆದ ಬೆಳೆಗೆ ಡಾ. ಸ್ವಾಮಿನಾಥನ್ ಶಿಫಾರಸ್ಸಿನಂತೆ ಕನಿಷ್ಠ ಬೆಂಬಲ ಬೆಲೆ ನೀಡುತ್ತೇವೆ, ಮೊದಲಾದ ಭರವಸೆ ನೀಡಿದ್ದರು. ಆದರೆ ಹಸಿವು, ಆರೋಗ್ಯ, ನಿರುದ್ಯೋಗ, ಬಡತನ, ಅಪೌಷ್ಟಿಕತೆ, ಭ್ರಷ್ಟಾಚಾರ, ಮುಕ್ತ ಮಾಧ್ಯಮ ಸ್ವಾತಂತ್ಯ, ಶಿಕ್ಷಣ, ಆರ್ಥಿಕ ಮತ್ತಿತರೆ ಜಾಗತಿಕ ಸೂಚ್ಯಂಕಗಳ ಪಟ್ಟಿಯಲ್ಲಿ ದೇಶದ ಸ್ಥಾನ ವರ್ಷದಿಂದ ವರ್ಷಕ್ಕೆ ಅತ್ಯಂತ ಕೆಳಮಟ್ಟಕ್ಕೆ ಕುಸಿಯುತ್ತಲೇ ಇದೆ’ ಎಂದು ಲೇವಡಿ ಮಾಡಿದರು.‘ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಾಧಿಸಿದ್ದೇನು? ದೇಶದ ಸಾರ್ವಜನಿಕ ಆಸ್ತಿ ಸಂಪತ್ತನ್ನು ಮತ್ತು ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಲು ಅಂಬಾನಿ, ಅದಾನಿಯಂತಹ ಹತ್ತಾರು ಕಾರ್ಪೊರೇಟ್ ಕಂಪನಿಗಳಿಗೆ ಕಾನೂನಾತ್ಮಕವಾಗಿ ಮುಕ್ತ ಅವಕಾಶ ನೀಡಲಾಗಿದೆ. ಖಾಸಗೀಕರಣ ಮತ್ತು ಗುತ್ತಿಗೆ ನೀತಿಗಳು ಮತ್ತು ಕೈಗಾರಿಕಾ ಉತ್ಪಾದನಾ ವಲಯಗಳನ್ನು ಸಂಪೂರ್ಣ ಕಡೆಗಣಿಸಿದ ಪರಿಮಣಾಮವಾಗಿ ಕಾರ್ಮಿಕರ ದೇಶದಲ್ಲಿ ಕೋಟ್ಯಂತರ ಉದ್ಯೋಗಗಳು ನಾಶವಾಗಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಸಿರು ಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್.ಪಿ. ವೆಂಕಟೇಶ್ ಮೂರ್ತಿ, ಜಿಲ್ಲಾ ಜನಪರ ಚಳುವಳಿ ಒಕ್ಕೂಟದ ಎಚ್.ಕೆ. ಸಂದೇಶ್, ರಾಜಶೇಖರ್, ಇರ್ಷಾದ್ ಅಹಮದ್, ಎಂ.ಸಿ. ಡೋಂಗ್ರೆ, ರಾಜು ಗೊರೂರು ಇತರರು ಉಪಸ್ಥಿತರಿದ್ದರು.ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರು.