ಶಿರಹಟ್ಟಿ: ದೇಶಕ್ಕೆ ಮಹಾನ್ ಮುತ್ಸದ್ದಿ ನಾಯಕ ನರೇಂದ್ರ ಮೋದಿ ದೊರಕಿದ್ದು. ಅವರ ಅವಧಿಯಲ್ಲಿ ದೇಶದಲ್ಲಿನ ಭಯೋತ್ಪಾದನೆ ಮತ್ತು ಭ್ರಷ್ಟಾಚಾರ ಕಡಿಮೆಯಾಗಿದೆ. ಜತೆಗೆ ಅಭಿವೃದ್ಧಿ ಕಾರ್ಯಗಳು ಏರಿಕೆಯಾಗಿದೆ ಎಂದು ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಪ್ರತಿಯೊಬ್ಬ ಕಾರ್ಯಕರ್ತರು ತನ್ನ ಬೂತ್ ಮಟ್ಟದಲ್ಲಿ ಕಠಿಣ ಪರಿಶ್ರಮದಿಂದ ಪಕ್ಷ ಸಂಘಟಿಸಬೇಕು. ಮತದಾರರಲ್ಲಿ ದೇಶದ ಭವಿಷ್ಯ ನಿರ್ಮಾಣ ಮಾಡಲು ಪ್ರಧಾನಿ ಮೋದಿಗಳಿಗೆ ಮತ ನೀಡಲು ಮನವಿ ಮಾಡಿದರು. ದೇಶದ ಅಭಿವೃದ್ಧಿಗಾಗಿ, ಅರ್ಥಿಕ ಬೆಳವಣಿಗೆಗಾಗಿ, ಜನರ ರಕ್ಷಣೆಗಾಗಿ, ವಿಶ್ವಗುರು ದೇಶವನ್ನಾಗಿ ಮಾಡಲು ಮತದಾರರು ಬಿಜೆಪಿ ಪಕ್ಷಕ್ಕೆ ಈ ಬಾರಿ ಮತ ನೀಡಿ ಪ್ರಧಾನಿ ಮೋದಿಯರ ಕೈಬಲಪಡಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನನ್ನು ಶಾಸಕನಾಗಿ ಮಾಡಿದ್ದು ಬಿಜೆಪಿ ಪಕ್ಷ, ಕಟ್ಟಕಡೆಯ ವ್ಯಕ್ತಿಗೂ ಉನ್ನತ ಹುದ್ದೆ ನೀಡುವ ಏಕೈಕ ಪಕ್ಷ ಬಿಜೆಪಿವಾಗಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಂಸದರಾಗಿ ಆಯ್ಕೆ ಮಾಡಲು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಕೆಲಸ ಮಾಡಿ. ಅಲ್ಲದೆ ಅವರನ್ನು ಕೇಂದ್ರ ಮಂತ್ರಿ ಮಾಡಲು ಶ್ರಮವಹಿಸಿ ಎಂದು ಹೇಳಿದರು.ಇದೆ ವೇಳೆ ರಾಜ್ಯ ಎಸ್‌ಸಿ ಮೋರ್ಚಾ ಉಪಾಧ್ಯಕ್ಷರಾಗಿ ಆಯ್ಕೆಯಾದ ಶಾಸಕ ಡಾ.ಚಂದ್ರು ಲಮಾಣಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಅಧ್ಯಕ್ಷತೆಯನ್ನು ನಗರ ಘಟಕ ಅಧ್ಯಕ್ಷ ನಾಗರಾಜ ಲಕ್ಕುಂಡಿ ವಹಿಸಿದ್ದರು. ಕಾಯಕ್ರಮದ ಉದ್ಘಾಟನೆಯನ್ನು ಶಿರಹಟ್ಟಿ,ಲಕ್ಷ್ಮೇಶ್ವರ ಮಂಡಲದ ಅಧಯಕ್ಷ ಸುನೀಲ ಮಹಾಂತಶೆಟ್ಟರ ಮಾಡಿದರು. ಬಸವರಾಜ ವಡವಿ ನಿರೂಪಿಸಿದರು.
ಯುವ ಮೋರ್ಚಾದ ಅಧ್ಯಕ್ಷರಾಗಿ ಮಲ್ಲೇಶ ಕಬಾಡಿ ಪ್ರಧಾನ ಕಾರ್ಯದರ್ಶಿಗಳಾಗಿ ಮಂಜುನಾಥ ರಡ್ಡೇರ, ದೇವು ಪೂಜಾರ, ಒಬಿಸಿ ಮೋರ್ಚಾ ಅಧ್ಯಕ್ಷರಾಗಿ ಶಿವನಂದ ಬಟ್ಟೂರು ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀನಿವಾಸ ಕಪಟಕರ, ವಿನೋದಕುಮಾರ ಕಪ್ಪತ್ತನವರ, ರೈತ ಮೋರ್ಚಾದ ಅಧ್ಯಕ್ಷರಾಗಿ ಜಗದೀಶ ತೇಲಿ, ಪ್ರಧಾನ ಕಾರ್ಯದರ್ಶಿಗಳಾಗಿ ರವಿ ಬೇಂದ್ರೆ, ಶಿವಪ್ಪ ತಳವಾರ ಆಯ್ಕೆಯಾದರು.ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷರಾಗಿ ಅಷ್ಪಕ ನಗಾರಿ, ಪ್ರಧಾನ ಕಾರ್ಯದರ್ಶಿಗಳಾಗಿ ಇಸ್ಮಾಯಿಲ್ ಶಿಗ್ಲಿ, ಹಜರತಲಿ ಇಟಗಿ, ಎಸ್.ಸಿ. ಮೋರ್ಚಾದ ಅಧ್ಯಕ್ಷರಾಗಿ ಶರಣಪ್ಪ ಹರ್ತಿ, ಪ್ರಧಾನ ಕಾರ್ಯದರ್ಶಿಗಳಾಗಿ ರಾಜು ಗಾಮನಗಟ್ಟೆ, ಎಸ್.ಟಿ ಮೋರ್ಚಾ ಅಧ್ಯಕ್ಷರಾಗಿ ಬಸವರಾಜ ತಳವಾರ, ಪ್ರಧಾನ ಕಾರ್ಯದರ್ಶಿಗಳಾಗಿ ಮೌನೇಶ ತಳವಾರ, ಸೋಮಶೇಖರ ಕಲಘಟಗಿ ಆಯ್ಕೆಯಾದರು.
ಮಾಜಿ ತಾಪಂ ಅಧ್ಯಕ್ಷ ಜಾನು ಲಮಾಣಿ, ಶಿರಹಟ್ಟಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಜಿಲ್ಲಾ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಫಕ್ಕಿರೇಶ ರಟ್ಟಿಹಳ್ಳಿ, ಬಿ.ಡಿ.ಪಲ್ಲೇದ, ಮಹಿಳಾ ಮಂಡಲದ ಅಧ್ಯಕ್ಷೆ ನಂದಾ ಪಲ್ಲೇದ, ಯಲ್ಲಪ್ಪ ಇಂಗಳಗಿ, ಅಜ್ಜು ಕಪ್ಪತ್ತನವರ, ರೈತ ಮೋರ್ಚಾ ಮಂಡಲ ಅಧ್ಯಕ್ಷ ಶಿವಯ್ಯ ಮಠಪತಿ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರವೀಣ ಪಾಟೀಲ, ಅಲ್ಪ ಸಂಖ್ಯಾತರ ಘಟಕ ಅಧ್ಯಕ್ಷ ಅಕ್ಬರಸಾಬ್ ಯಾದಗೀರಿ, ಅಶೋಕ ವರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.