ಯೂನಿಯನ್ ಬ್ಯಾಂಕ್‌ನ ಆರ್ಥಿಕ ಸೇರ್ಪಡೆ ಶಿಬಿರ ಯಶಸ್ವಿ

KannadaprabhaNewsNetwork |  
Published : Nov 27, 2026, 02:45 AM IST
ಬ್ರಹ್ಮಾವರದಲ್ಲಿ ಯೂನಿಯನ್ ಬ್ಯಾಂಕ್‌ನ 'ಆರ್ಥಿಕ ಸೇರ್ಪಡೆ ಸಂತೃಪ್ತಿ ಶಿಬಿರ' ನಡೆಯಿತು | Kannada Prabha

ಸಾರಾಂಶ

ಜನರಿಗೆ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಲಭ್ಯತೆಯನ್ನು ಖಚಿತಪಡಿಸುವ ಉದ್ದೇಶದಿಂದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಉಡುಪಿ ಪ್ರಾದೇಶಿಕ ಕಚೇರಿ ವತಿಯಿಂದ ಆರ್ಥಿಕ ಸೇರ್ಪಡೆ ಸಂತೃಪ್ತಿ ಅಭಿಯಾನದಂಗವಾಗಿ ನ. 24ರಂದು ಇಲ್ಲಿನ ಆಶ್ರಯ ಹೋಟೆಲ್‌ನಲ್ಲಿ ಆರ್ಥಿಕ ಸೇರ್ಪಡೆ ಸಂತೃಪ್ತಿ ಶಿಬಿರವನ್ನು ಆಯೋಜಿಸಲಾಯಿತು.

ಬ್ರಹ್ಮಾವರ: ಜನರಿಗೆ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಲಭ್ಯತೆಯನ್ನು ಖಚಿತಪಡಿಸುವ ಉದ್ದೇಶದಿಂದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಉಡುಪಿ ಪ್ರಾದೇಶಿಕ ಕಚೇರಿ ವತಿಯಿಂದ ಆರ್ಥಿಕ ಸೇರ್ಪಡೆ ಸಂತೃಪ್ತಿ ಅಭಿಯಾನದಂಗವಾಗಿ ನ. 24ರಂದು ಇಲ್ಲಿನ ಆಶ್ರಯ ಹೋಟೆಲ್‌ನಲ್ಲಿ ಆರ್ಥಿಕ ಸೇರ್ಪಡೆ ಸಂತೃಪ್ತಿ ಶಿಬಿರವನ್ನು ಆಯೋಜಿಸಲಾಯಿತು.

​ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಬ್ಯಾಂಕಿನ ಮುಂಬೈ ಕೇಂದ್ರ ಕಚೇರಿಯ ಪ್ರಧಾನ ವ್ಯವಸ್ಥಾಪಕರಾದ ಅಖಿಲೇಶ್ ಕುಮಾರ್, ಮಂಗಳೂರು ವಲಯ ಕಚೇರಿಯ ಭರವಸೆ ಮುಖ್ಯಸ್ಥರಾದ ರಾಜಮಣಿ, ಉಡುಪಿ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾದ ಅಶೋಕ್ ಅಂಬಾಸಾ ಭಂಡಗೆ, ಜಿಲ್ಲಾ ಅಗ್ರಣಿ ಕೆನರಾ ಬ್ಯಾಂಕಿನ ವ್ಯವಸ್ಥಾಪಕರಾದ ಹರೀಶ್ ಜಿ. ಮಾತನಾಡಿದರು. ಆರ್ಥಿಕ ಸೇರ್ಪಡೆ ಯೋಜನೆಗಳು, ರಿಕೆವೈಸಿ, ಸಿಕೆವೈಸಿ, ನಾಮನಿರ್ದೇಶನ, ಡಿಜಿಟಲ್ ವಂಚನೆಗಳು, ಹಕ್ಕುದಾರರಿಲ್ಲದ ಠೇವಣಿಗಳು, ಕಿಸಾನ್ ಕ್ರೆಡಿಟ್ ಕಾರ್ಡ್, ಪಿಎಂ ಫಸಲ್ ಬಿಮಾ ಯೋಜನೆ, ಸ್ವಸಹಾಯ ಗುಂಪು ಮತ್ತು ಜಂಟಿ ಹೊಣೆಗಾರಿಕೆ ಗುಂಪುಗಳ ಸಾಲಗಳ ಕುರಿತು ಗ್ರಾಮಸ್ಥರಿಗೆ ಅರಿವು ಮೂಡಿಸಲಾಯಿತು.​

ಸಭೆಯಲ್ಲಿ ಪ್ರಾದೇಶಿಕ ಭರವಸೆ ಮುಖ್ಯಸ್ಥರಾದ ಈಶ್ವರ್ ನಾಯ್ಕ್, ಕೆನರಾ ಬ್ಯಾಂಕಿನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಸುಧಾಕರ್ ಕೊಠಾರಿ, ರುಡ್‌ಸೆಟ್ ನಿರ್ದೇಶಕ ಡಾ. ಬೊಮ್ಮಯ್ಯ ಎಂ., ನೀಲಾವರ ಪಂ.ಅ.ಅಧಿಕಾರಿ ಗೀತಾ, ವಾರಂಬಳ್ಳಿ ಗ್ರಾಪಂ ಕಾರ್ಯದರ್ಶಿ ಶೇಖರ್ ನಾಯ್ಕ್ ಉಪಸ್ಥಿತರಿದ್ದರು. ತಮ್ಮ ಸಂಗಾತಿಯ ಮರಣದ ನಂತರ ಪಿಎಂ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ ತಲಾ 2 ಲಕ್ಷ ರು. ವಿಮಾ ಪರಿಹಾರ ಪಡೆದ ವೀಣಾ, ವೆಂಕಟರಮಣ ಪ್ರಭು, ಅಶೋಕ್ ಅವರು ತಮ್ಮ ಅನಿಸಿಕೆ ಹಂಚಿಕೊಂಡು ಕೃತಜ್ಞತೆ ಸಲ್ಲಿಸಿದರು.​ ಇದೇ ಸಂದರ್ಭದಲ್ಲಿ ಬ್ಯಾಂಕ್‌ನ ಸಿಎಸ್‌ಆರ್ ಚಟುವಟಿಕೆಯಡಿ ವಾರಂಬಳ್ಳಿ ಗ್ರಾಮ ಪಂಚಾಯಿತಿಗೆ ಕಸ ಸಂಗ್ರಹಣಾ ವಾಹನವನ್ನು ಹಸ್ತಾಂತರಿಸಲಾಯಿತು.

ಬ್ಯಾಂಕಿನ ವಿವಿಧ ಹಣಕಾಸು ಯೋಜನೆಗಳ ಜಾಗೃತಿ ಕುರಿತು ಕೋಟತಟ್ಟು ಶಾಖೆಯ ವ್ಯವಸ್ಥಾಪಕ ಸಚಿನ್ ಹೆಬ್ಬಾರ್ ಪಿಪಿಟಿ ಮೂಲಕ ಮಾಹಿತಿ ನೀಡಿದರು. ಬ್ಯಾಂಕಿನ ಸಂತೆಕಟ್ಟೆ ಶಾಖೆಯ ಹಿರಿಯ ವ್ಯವಸ್ಥಾಪಕ ರಮೇಶ್ ನಾಯ್ಕ್ ಸ್ವಾಗತಿಸಿದರು, ಪ್ರಾದೇಶಿಕ ಕಚೇರಿಯ ಹಿರಿಯ ವ್ಯವಸ್ಥಾಪಕ ರಮೇಶ ಜಿ. ಕಾರ್ಯಕ್ರಮ ನಿರೂಪಿಸಿ, ಮಣೂರು ಶಾಖೆಯ ವ್ಯವಸ್ಥಾಪಕ ಪ್ರಶಾಂತ ಪಿ. ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಗುರಿ
ರೈತರಿಗೆ ಪ್ರತಿ ಟನ್‌ಗೆ ₹3,825 ರಂತೆ ಬಿಲ್ ಪಾವತಿ