ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಮಲ್ಲೇಗೌಡನಹಳ್ಳಿಯಲ್ಲಿ ಒಡೆದು ಹೋದ ಕೆರೆಯನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವೀಕ್ಷಿಸಿದರು.ಈ ವೇಳೆ ರೈತರು, ಸ್ಥಳೀಯ ಜನರು ಕೆರೆ ಕಟ್ಟೆ ದುರಸ್ತಿ ಬಗ್ಗೆ ಅಧಿಕಾರಿಗಳು, ಗ್ರಾಮ ಲೆಕ್ಕಿಗನ ನಿರ್ಲಕ್ಷ್ಯವೇ ಕಾರಣ, ಕೆರೆ ವಿಷಯದಲ್ಲಿ ರಾಜಕೀಯ ನಡೆಯುತ್ತಿದೆ ಎಂದು ಕೇಂದ್ರ ಸಚಿವರ ಬಳಿ ದೂರಿದರು.
ಹಾಸನದ ಗೊರೂರು ಅಣೆಕಟ್ಟೆ ನೀರು, ಹೇಮಾವತಿ ನೀರು ಈ ಕೆರೆಗೆ ಬರುತ್ತದೆ. ಕೆರೆ ಒಡೆದು ಹೋಗಿರುವುದರಿಂದ ನೀರು ಪೋಲಾಗಿದೆ. ಇದರಿಂದ ರೈತರಿಗೆ ತೊಂದರೆಯಾಗಿದೆ. ಕೆರೆ ಒಡೆದು ಬೆಳೆ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಕೊಡಿಸಲು, ಕೆರೆ ಕಟ್ಟೆ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದರು.ಶಾಲಾ ಮಕ್ಕಳ ಮನವಿ:
ಮಲ್ಲೇಗೌಡನಹಳ್ಳಿಗೆ ಭೇಟಿ ನೀಡದ ಸಂದರ್ಭದಲ್ಲಿ ಶಾಲಾ ಮಕ್ಕಳು ಬಸ್ ಸೌಲಭ್ಯ ಬೇಕು ಎಂದು ಮನವಿ ಮಾಡಿದರು. ಮಕ್ಕಳ ಮನವಿಗೆ ಸ್ಪಂದಿಸಿದ ಸಚಿವರು, ಬಸ್ ಸೌಲಭ್ಯ ಕಳಿಸಿ ಕೊಡುವುದಾಗಿ ಭರವಸೆ ನೀಡಿದರು.ಈ ವೇಳೆ ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಮಾಜಿ ಸಚಿವ ಸಾರಾ ಮಹೇಶ್, ಮಾಜಿ ಶಾಸಕ ಸುರೇಶ್ ಗೌಡ ಸ್ಥಳೀಯ ಮುಖಂಡರು ಇದ್ದರು.
ಸಚಿವ ಚಲುವರಾಯಸ್ವಾಮಿಗೆ ಎಚ್ಡಿಕೆ ತಿರುಗೇಟುನಾಗಮಂಗಲನಾನು ರಾಜಕೀಯ ಮಾಡಲು ಅಥವಾ ಯಾವುದೇ ಕುಮ್ಮಕ್ಕು ಕೊಟ್ಟು ಬೆಂಕಿ ಹಚ್ಚಲು ನಾಗಮಂಗಲಕ್ಕೆ ಬಂದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಚಿವ ಚಲುವರಾಯಸ್ವಾಮಿ ತಿರುಗೇಟು ಕೊಟ್ಟರು.
ಸಂಸದರ ಕೆಲಸ ಬಿಟ್ಟು ಇಲ್ಲಿಗೆ ಬರ್‍ತಿದ್ದಾರೆಂಬ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಎಚ್ಡಿಕೆ, ಸಂಸದರಾದವರು ಆರಾಮವಾಗಿ ದೆಹಲಿಯಲ್ಲಿರಬೇಕಾ. ನಾನು ಮಂಡ್ಯ ಜಿಲ್ಲೆಯ ಜನಪ್ರತಿನಿಧಿ. ಜನರ ಕಷ್ಟ ಬಗೆಹರಿಯದಿದ್ದಾಗ ನಾನು ಬರಲೇಬೇಕು ಎಂದರು.ನಾನು ಕೇವಲ ಮಂಡ್ಯ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿಲ್ಲ. ಮೊನ್ನೆ ದೆಹಲಿಯಲ್ಲಿ ನಡೆದ ಕ್ಯಾಬಿನೆಟ್‌ನಲ್ಲಿ ಭಾಗವಹಿಸಿದ ನಂತರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಇಲಾಖೆಯಲ್ಲಿದ್ದ ಎರಡು ಪ್ರಮುಖ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆಯ ಬಳಿಕ ಛತ್ತೀಸ್‌ಘಟದಲ್ಲಿ ಇಲಾಖೆಗೆ ಸಂಬಂಧಿಸಿದ ಪುನರ್ ಪರಿಶೀಲನಾ ಸಭೆ ನಡೆಸಿದ್ದೇನೆ ಎಂದರು.ಬುಧವಾರವೂ ಕೆಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ. ಇಂದು ಬೆಳಗ್ಗೆ ಮುಂಬೈಗೆ ತೆರಳಿ ಸಭೆ ಮುಗಿಸಿಕೊಂಡು ಇಲ್ಲಿಗೆ ಬಂದಿದ್ದೇನೆ. ಜಿಲ್ಲೆಯಲ್ಲಿ ಯಾವುದೇ ಸಣ್ಣ ಪುಟ್ಟ ಘಟನೆಗಳು ಸಂಭವಿಸಿದಾಗ ಅದಕ್ಕೆ ಸ್ಪಂದಿಸಬೇಕಿರುವುದು ನನ್ನ ಜವಾಬ್ದಾರಿ ಮತ್ತು ಕರ್ತವ್ಯ ಎಂದು ತಿರುಗೇಟು ನೀಡಿದರು.