ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ಮುಖಂಡ ಹರೀಶ್ ಗೌಡ, ಹಳ್ಳಿಕಾರ್ ತಳಿಯ ರಾಸುಗಳು ಇಡೀ ಕರ್ನಾಟಕದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿರುವ ದೇಶಿ ತಳಿಯ ಹಸುಗಳು. ಜಮೀನಿನ ಉಳುಮೆ, ಎತ್ತಿನ ಗಾಡಿ, ಗಾಣದ ಕೆಲಸ ಇತ್ಯಾದಿ ಕಠಿಣ ಕೆಲಸಗಳೊಂದಿಗೆ ಉತ್ತಮ ಗುಣಮಟ್ಟದ ಹಾಲು ಕೊಡುವುದು ಹಳ್ಳಿಕಾರ್ ತಳಿಯ ವಿಶೇಷ. ಅದರ ಜೊತೆಜೊತೆಗೆ ಈ ತಳಿಯ ಎತ್ತುಗಳನ್ನು ಎತ್ತಿನ ಗಾಡಿ ಸ್ಪರ್ಧೆ, ಜಾತ್ರೆಗಳಲ್ಲಿ ಜೋಡೆತ್ತುಗಳ ಪ್ರದರ್ಶನದಲ್ಲಿ ಪ್ರತಿಷ್ಠೆಯಾಗಿ ಪರಿಗಣಿಸಿ ಸಾಕುವುದಕ್ಕೂ ಬಳಸುತ್ತಾರೆ ಎಂದರು.
ನವ ಕರ್ನಾಟಕ ಯುವಶಕ್ತಿ ವೇದಿಕೆ ಅಧ್ಯಕ್ಷ ಹಳ್ಳಿ ರೈತ ಅಂಬರೀಶ್ ಮಾತನಾಡಿ, ಹಳ್ಳಿಕಾರ್ ತಳಿ ದನಗಳು ಈಗೀಗ ಕಣ್ಮರೆಯಾಗುತ್ತಿವೆ. ವ್ಯವಸಾಯದ ಕೆಲಸಗಳು ಯಾಂತ್ರಿಕವಾಗಿ ದನಗಳನ್ನು ವ್ಯವಸಾಯಕ್ಕಾಗಿ ಸಾಕುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಹಾಲಿನ ಉತ್ಪಾದನೆಗಾಗಿ ಮಿಶ್ರತಳಿ ಹಸುಗಳನ್ನು ಸಾಕುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದ್ದರಿಂದ ಭಾರತದ ಪರಂಪರೆಯ ಸಂಪತ್ತಾಗಿರುವ ಹಳ್ಳಿಕಾರ್ ತಳಿಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.100ಕ್ಕೂ ಹೆಚ್ಚು ಹಳ್ಳಿಕಾರ್ ರಾಸುಗಳು ಭಾಗಿ:
ಇದೇ ಸಂದರ್ಭದಲ್ಲಿ ಬಾಲ ಕಲಾವಿದ ಸಂತೋಷ್ ರೆಡ್ಡಿ ನಾಯಕತ್ವದ ನೂತನ ಕನ್ನಡ ಚಲನಚಿತ್ರ ಮಾನ್ಸ್ಟರ್ ಪೋಸ್ಟರನ್ನು ನಿರ್ಮಾಪಕ ಪುಟ್ಟರಾಜು ರೆಡ್ಡಿ ಬಿಡುಗಡೆಗೊಳಿಸಿದರು.
ಹಳ್ಳಿಕಾರ್ ರಾಸುಗಳ ಸೌಂದರ್ಯ ಸ್ಪರ್ಧೆಯಲ್ಲಿ ದೊಡ್ಡಬಳ್ಳಾಪುರ ತೇರಿನ ಬೀದಿ ಬಾಬು ಮಾಲಿಕತ್ವದ ರಾಸುಗಳಿಗೆ ಪ್ರಥಮ ಬಹುಮಾನವಾಗಿ 20 ಸಾವಿರ ರುಪಾಯಿ ನಗದು ಮತ್ತು ಫಲಕ, ಕುಂಟನಹಳ್ಳಿ ರುದ್ರೇಗೌಡರ ರಾಸುಗಳಿಗೆ ದ್ವಿತೀಯ ಬಹುಮಾನವಾಗಿ 10 ಸಾವಿರ ರುಪಾಯಿ ನಗದು ಮತ್ತು ಫಲಕ, ನಾಗೇನಹಳ್ಳಿ ಅಶ್ವತ್ ನಾರಾಯಣ ಮಾಲೀಕತ್ವದ ರಾಸುಗಳಿಗೆ ತೃತೀಯ ಬಹುಮಾನವಾಗಿ 5 ಸಾವಿರ ರುಪಾಯಿ ನಗದು ಮತ್ತು ಫಲಕ ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ರಾಸುಗಳ ಮಾಲೀಕರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು.