ಅಮೋಘವರ್ಷ ಕನ್ನಡ ಭಾಷೆಗೆ ನೀಡಿದ ಕೊಡುಗೆ ಅನನ್ಯ: ಕನ್ನಡ ಉಪನ್ಯಾಸಕ ಎನ್.ಮೇಗೇಶ

KannadaprabhaNewsNetwork |  
Published : Nov 14, 2024, 12:58 AM IST
  ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 50 ದಿನಗಳವರೆಗೆ ಅಯೋಜಿಸಿರುವ ಕನ್ನಡ ರಾಜ್ಯೋತ್ಸವದ 12ನೇ  ದಿನದ ಕಾರ್ಯಕ್ರಮದಲ್ಲಿ  ಅಮೋಘವರ್ಷ ನೃಪತುಂಗ ಅವರ ಕುರಿತು  | Kannada Prabha

ಸಾರಾಂಶ

ಅಮೋಘವರ್ಷ ನೃಪತುಂಗ ಕನ್ನಡ ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ಉಪನ್ಯಾಸಕ ಎನ್.ಮೇಗೇಶ ಹೇಳಿದರು. ಚಾಮರಾಜನಗರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಅಮೋಘವರ್ಷ ನೃಪತುಂಗ ಕನ್ನಡ ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ಉಪನ್ಯಾಸಕ ಎನ್.ಮೇಗೇಶ ಹೇಳಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 50ದಿನಗಳವರೆಗೆ ಆಯೋಜಿಸಿರುವ ಕನ್ನಡ ರಾಜ್ಯೋತ್ಸವದ 12ನೇ ದಿನದ ಕಾರ್ಯಕ್ರಮದಲ್ಲಿ ಅಮೋಘವರ್ಷ ನೃಪತುಂಗ ಕುರಿತು ಮಾತನಾಡಿದರು. ಅಮೋಘವರ್ಷ ನೃಪತುಂಗ ಕ್ರಿ.ಶ. 814-878 ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ರಾಜರಲ್ಲಿ ಒಬ್ಬರು. ಅವರು ಕೇವಲ ಮಿಲಿಟರಿ ಪ್ರಯತ್ನಗಳಿಗೆ ಮಾತ್ರವಲ್ಲ, ಕರ್ನಾಟಕದ ಸಂಸ್ಕೃತಿಗೆ ನೀಡಿದ ಕೊಡುಗೆಗಳಿಗೆ ಮತ್ತು ಕನ್ನಡ ನೆಲದ ಪರಿಕಲ್ಪನೆಯನ್ನು ರೂಪಿಸುವಲ್ಲಿ ಹೆಸರುವಾಸಿ ಆಗಿದ್ದಾರೆ. ಇವರು ಪ್ರಸಿದ್ಧ ರಾಷ್ಟ್ರಕೂಟ ರಾಜವಂಶಕ್ಕೆ ಸೇರಿದವರು.‌ ಅಮೋಘವರ್ಷ ತನ್ನ ಎಲ್ಲಾ ನೆರೆಹೊರೆಯವರೊಂದಿಗೆ ಮತ್ತು ಸಾಮಂತರೊಂದಿಗೆ ಸ್ನೇಹದಿಂದ ಇರಲು ಆದ್ಯತೆ ನೀಡಿದವರು ಮತ್ತು ಅವರ ವಿರುದ್ಧ ಆಕ್ರಮಣಕಾರಿ ನಿಲುವು ತೆಗೆದುಕೊಳ್ಳುವುದನ್ನು ತಪ್ಪಿಸಿದ್ದರು. ಪ್ರಜೆಗಳಿಗಾಗಿ ಕೊಲ್ಲಾಪುರದ ಮಹಾಲಕ್ಷ್ಮಿಗೆ ತನ್ನ ಬೆರಳನ್ನು ಬಲಿಯಾಗಿ ಅರ್ಪಿಸಿದರು ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ ಮಾತನಾಡಿ, ಅಮೋಘವರ್ಷ ನೃಪತುಂಗರು 63 ವರ್ಷಗಳ ನಿರಂತರ ಆಳ್ವಿಕೆ ಮಾಡಿದರು. ನೂರಾರು ರಾಜಮನೆತನಗಳಿಂದ ಗೌರವಕ್ಕೆ ಪಾತ್ರರಾಗಿದ್ದರು. ಪದ್ಯ, ಗದ್ಯ, ಕಾವ್ಯ, ವ್ಯಾಕರಣ, ಅಲಂಕಾರ ಎಲ್ಲ ಕನ್ನಡದ ಸಾಹಿತ್ಯದ ಮಜಲುಗಳು ಇರುವ ಏಕೈಕ ಗ್ರಂಥವಾದ ಇವರ ಕವಿರಾಜಮಾರ್ಗವನ್ನು ಕನ್ನಡಿಗರು ಹೆಮ್ಮೆಯಿಂದ ಹೇಳಿಕೊಳ್ಳಬೇಕಾಗಿದೆ. ಸಾಹಿತ್ಯ. ಸಂಸ್ಕೃತಿ, ಧರ್ಮ, ಲಲಿತಕಲೆಗಳ ಮತ್ತು ವಾಸ್ತುಶಿಲ್ಪಕ್ಕೆ ಒತ್ತು ನೀಡಿದ್ದರು ಎಂದರು.

ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಕುವೆಂಪು ಕನ್ನಡ ಕಲಾ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಲಿಂಗರಾಜು, ಶಾ.ಮುರಳಿ, ಪಣ್ಯದಹುಂಡಿ ರಾಜು, ನಿಜಧ್ವನಿಗೋವಿಂದರರಾಜು, ಮಹದೇವಪ್ಪ, ಶಿವಲಿಂಗಮೂರ್ತಿ, ರಾಚಪ್ಪ, ಚಂದ್ರು, ತಾಂಡವಮೂರ್ತಿ, ವೀರಭದ್ರ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!