ಸಮಾಜದ ಎಲ್ಲ ಒಳಪಂಗಡಗಳ ಒಗ್ಗೂಡಿಸುವಿಕೆ ಮೊದಲ ಆದ್ಯತೆ: ನಿರಾಣಿ

KannadaprabhaNewsNetwork |  
Published : Oct 03, 2026, 02:15 AM IST
ಅಖಿಲ ಭಾರತ ವೀರಶೈವ ಮಹಾಸಭಾದ ನೂತನ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಪ್ರಪ್ರಥಮ ಬಾರಿಗೆ ಗದುಗಿಗೆ ಆಗಮಿಸಿದ ಮುರುಗೇಶ ನೀರಾಣಿ ಅವರಿಗೆ ಗದಗ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆನಂದಗೌಡ ಪಾಟೀಲ‌ ಸನ್ಮಾನಿಸಿ‌, ಸ್ವಾಗತಿದರು. | Kannada Prabha

ಸಾರಾಂಶ

ಸಮಾಜದಲ್ಲಿ ಯಾವುದೇ ಹೊಸ ಯೋಜನೆಗಳನ್ನು ಆರಂಭಿಸುವುದಕ್ಕಿಂತ ಮುನ್ನ, ಹರಿದು ಹಂಚಿಹೋಗಿರುವ ಎಲ್ಲ ಸಣ್ಣಪುಟ್ಟ ಒಳಪಂಗಡಗಳನ್ನು ಒಂದೇ ಸೂರಿನಡಿ ಒಗ್ಗೂಡಿಸುವುದು ಅತ್ಯಂತ ಮುಖ್ಯವಾಗಿದೆ.

ಗದಗ: ಅಖಿಲ ಭಾರತ ವೀರಶೈವ ಮಹಾಸಭಾದ ನೂತನ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ, ಸಮಾಜದ ಸರ್ವತೋಮುಖ ಏಳಿಗೆ ಮತ್ತು ಒಗ್ಗಟ್ಟಿಗಾಗಿ ತಾವು ಶ್ರಮಿಸುವುದಾಗಿ ಮುರುಗೇಶ ನಿರಾಣಿ ಹೇಳಿದರು.

ಅವರು ಅಖಿಲ ಭಾರತ ವೀರಶೈವ ಮಹಾಸಭಾದ ನೂತನ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಶುಕ್ರವಾರ ಪ್ರಪ್ರಥಮ ಬಾರಿಗೆ ಗದಗ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಗದಗ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆನಂದಗೌಡ ಪಾಟೀಲ ಹಾಗೂ ಅಭಿಮಾನಿ ಬಳಗ ಸ್ವಾಗತಿಸಿ ಬರಮಾಡಿಕೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಕುರಿತು ವಿವರಿಸಿ, ನಮ್ಮ ಸಮಾಜದಲ್ಲಿ ಯಾವುದೇ ಹೊಸ ಯೋಜನೆಗಳನ್ನು ಆರಂಭಿಸುವುದಕ್ಕಿಂತ ಮುನ್ನ, ಹರಿದು ಹಂಚಿಹೋಗಿರುವ ಎಲ್ಲ ಸಣ್ಣಪುಟ್ಟ ಒಳಪಂಗಡಗಳನ್ನು ಒಂದೇ ಸೂರಿನಡಿ ಒಗ್ಗೂಡಿಸುವುದು ಅತ್ಯಂತ ಮುಖ್ಯವಾಗಿದೆ ಎಂದರು.

ಹಿಂದೆ ವೀರೇಂದ್ರ ಪಾಟೀಲರ ಕಾಲದಲ್ಲಿ ಸಮಾಜ ಒಗ್ಗಟ್ಟಾಗಿದ್ದ ಕಾರಣ ಮೂರನೇ ಎರಡು ಭಾಗದಷ್ಟು ಬಹುಮತದೊಂದಿಗೆ ಸರ್ಕಾರ ರಚನೆಯಾಗುತ್ತಿತ್ತು. ಇಂದು ಸಮಾಜವು ಪ್ರಜ್ಞಾವಂತ ಹಾಗೂ ದೂರದೃಷ್ಟಿ ಹೊಂದಿದ್ದರೂ ಒಗ್ಗಟ್ಟಿನ ಕೊರತೆಯಿಂದಾಗಿ ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕ ಶಕ್ತಿ ಕುಂಠಿತಗೊಂಡಿದೆ ಎಂದರು.

‌‌‌ಸಮಾಜದ ಎಲ್ಲಾ ವರ್ಗಗಳನ್ನು ಜೊತೆಗೆ ಕರೆದೊಯ್ದರೆ ಮಾತ್ರ ಶೈಕ್ಷಣಿಕ ಮತ್ತು ರಾಜಕೀಯವಾಗಿ ಮುನ್ನಡೆಯಲು ಸಾಧ್ಯ. ಬೆಂಗಳೂರಿನಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ ಎಲ್ಲರೂ ಒಟ್ಟಾಗಿ ಸಮಾಲೋಚನೆ ನಡೆಸಿ, ಸಮಾಜದಿಂದ ಒಂದೇ ಬಲವಾದ ಧ್ವನಿ ಹೊರಹೊಮ್ಮುವಂತೆ ಯೋಜನೆ ರೂಪಿಸಲಾಗುವುದು. ಹಾನಗಲ್ಲ ಕುಮಾರ ಶಿವಯೋಗಿಗಳು ಸಮಾಜದ ಏಳಿಗೆಗಾಗಿ ಬುನಾದಿ ಹಾಕಿಕೊಟ್ಟ ಈ ಐತಿಹಾಸಿಕ ಸಂಸ್ಥೆಯ ಘನತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಸಮಾಜವನ್ನು ಸಮರ್ಥವಾಗಿ ಮುನ್ನಡೆಸಲು ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆನಂದಗೌಡ ಪಾಟೀಲ ಹಾಗೂ ಬೆಂಬಲಿಗರು ನೂತನ ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ, ಸನ್ಮಾನಿಸಿ ಗೌರವಿಸಿದರು.

ಧಾರವಾಡ ಕೆ.ಎಂ.ಎಫ್ ನಿರ್ದೇಶಕ ಲಿಂಗರಾಜಗೌಡ ಪಾಟೀಲ, ಬಿಜೆಪಿ ಮುಖಂಡರಾದ ಮಂಜುನಾಥಗೌಡ ಪಾಟೀಲ, ಶರಣು ಅಂಗಡಿ, ಆರ್.ಎಂ.ತಪ್ಪಡಿ, ವೀರಣ್ಣ ತುಪ್ಪದ, ಸಿಂಗಟಾಲೂರು ಗ್ರಾಪಂ ಮಾಜಿ ಅಧ್ಯಕ್ಷ ಸುನಿಲರಡ್ಡಿ ನೀರಲಗಿ, ದೇವು ಹಡಪದ, ಆನಂದ ನಾಡಗೌಡ್ರ, ಶಿವಕುಮಾರ ಡೊಳ್ಳಿನ, ಮಂಜುನಾಥ ಮಾಳೆಕೊಪ್ಪ ಸೇರಿ ‌ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈದ್ಯಕೀಯ ಕ್ಷೇತ್ರದಲ್ಲಿ ದೇಶಕ್ಕೆ ಜಿಲ್ಲೆ ಮಾದರಿ: ಡಾ. ಬೊಮ್ಮನಹಳ್ಳಿ
ಗಾಂಧೀಜಿ, ಶಾಸ್ತ್ರೀಜಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಡಿಸಿ ಶ್ರೀಧರ್‌