ಹೊಸಕೋಟೆ: ಹಿಂದೂ-ಮುಸ್ಲಿಂ ಯಾವುದೇ ಹಬ್ಬಗಳಲ್ಲಿ ಎಲ್ಲಾ ಕೋಮಿನವರು ಭಾವೈಕ್ಯತೆ, ಸಾಮರಸ್ಯ ಕಾಪಾಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಜಾಮಿಯಾ ಮಸೀದಿ ಸದಸ್ಯ ಸಯ್ಯದ್ ನವಾಜ್ ಮಾತನಾಡಿ, ಈದ್-ಮಿಲಾದ್ ಹಬ್ಬವನ್ನು ನಗರದಲ್ಲಿ ಎಲ್ಲರೂ ಸಾಮರಸ್ಯದಿಂದ ಆಚರಿಸಲಾಗುತ್ತಿದೆ. ಅಲ್ಪಸಂಖ್ಯಾತ ಸಮುದಾಯದ ಎಲ್ಲಾ ಪಂಗಡದವರು ಆಚರಣೆ ಮಾಡುವ ಹಬ್ಬ ಇದಾಗಿದೆ. ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ, ಮೆರವಣಿಗೆ ಜೊತೆಗೆ ಪೈಗಂಬರರ ಹುಟ್ಟಿದ ದಿನ ಯಾರೊಬ್ಬರು ಉಪವಾಸ ಇರಬಾರದು ಎಂಬ ದೃಷ್ಟಿಯಿಂದ ಸಾಮೂಹಿಕ ಭೋಜನದ ವ್ಯವಸ್ಥೆ ಮಾಡುವುದು ವಾಡಿಕೆ ಎಂದರು.
ಧರ್ಮಗುರುಗಳಾದ ಸಯ್ಯದ್ ರಹಮತ್ ಉಲ್ಲಾ, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಹೆಚ್.ಎಂ.ಸುಬ್ಬರಾಜ್, ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಭೈರೇಗೌಡ, ನಗರಸಭೆ ಸದಸ್ಯ ಗೌತಮ್, ಮುಖಂಡ ವಿಜಯ್ ಕುಮಾರ್, ಎಚ್.ಎಸ್.ಗೋಪಾಲ್, ಸದಸ್ಯ ಸಯ್ಯದ್ ನವಾಜ್, ವಕ್ತ್ ಬೋರ್ಡ್ ಮಾಜಿ ಅದ್ಯಕ್ಷ ನಿಸಾರ್ ಅಹಮದ್, ಮುಖಂಡರಾದ ಇಚಿತಿಯಾಜ್ ಪಾಷ, ಸಗೀರ್ ಅಹಮದ್, ಅಂಜಾದ್, ಸಿರಾಜ್, ಚಾಂದ್ ಪಾಷ, ಶಂಶೀರ್, ಅಫ್ಜಲ್, ರಾಗಿ ಬಾಬು, ಅಖಿಲ್ ಅಹಮದ್, ಅಜು, ಪರ್ವೆಜ್, ಇಮ್ರಾನ್, ಟಿಪ್ಪು ಇತರರು ಹಾಜರಿದ್ದರು.ಫೋಟೋ: 5 ಹೆಚ್‌ಎಸ್‌ಕೆ 2
ಹೊಸಕೋಟೆಯ ಹಳೆ ಬಸ್ ನಿಲ್ದಾಣದ ಆಯೋಜಿಸಿದ್ದ ಈದ್-ಮಿಲಾದ್ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ ಅವರನ್ನು ಮುಸ್ಲಂ ಮುಖಂಡರು ಅಭಿನಂದಿಸಿದರು.