ವಿಭಿನ್ನತೆಯಲ್ಲಿಯೂ ಏಕತೆ ವಿಶೇಷ: ಶ್ರೀನಿವಾಸ್‌

KannadaprabhaNewsNetwork |  
Published : Jan 27, 2026, 02:15 AM IST
ಗುಬ್ಬಿಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ಆಡಳಿತ ಇವರುಗಳ ಸಂಯುಕ್ತಾಶ್ರಯದಲ್ಲಿ  ಏರ್ಪಡಿಸಿದ್ದ 77ನೇ ಗಣರಾಜ್ಯೋತ್ಸವ  ಧ್ವಜಾರೋಹಣ ನೆರವೇರಿಸಿದ ಶಾಸಕ ಎಸ್ ಆರ್.ಶ್ರೀನಿವಾಸ್ ತಿಳಿಸಿದರು  ಹಾಗೂ ತಹಸಿಲ್ದಾರ್ ಬಿ.ಆರತಿ. | Kannada Prabha

ಸಾರಾಂಶ

ಗುಬ್ಬಿ: ಧರ್ಮ, ಭಾಷೆ, ಲಿಂಗ, ಪ್ರದೇಶ, ಸಂಸ್ಕೃತಿ ಮೊದಲಾದ ಪರಸ್ಪರ ಭಿನ್ನಾಭಿಪ್ರಾಯ ಮರೆತು ಮುನ್ನಡೆಯುತ್ತಿರುವುದೇ ಗಣರಾಜ್ಯದ ವಿಶೇಷತೆ ಎಂದು ಶಾಸಕ ಎಸ್ ಆರ್.ಶ್ರೀನಿವಾಸ್ ತಿಳಿಸಿದರು.

ಗುಬ್ಬಿ: ಧರ್ಮ, ಭಾಷೆ, ಲಿಂಗ, ಪ್ರದೇಶ, ಸಂಸ್ಕೃತಿ ಮೊದಲಾದ ಪರಸ್ಪರ ಭಿನ್ನಾಭಿಪ್ರಾಯ ಮರೆತು ಮುನ್ನಡೆಯುತ್ತಿರುವುದೇ ಗಣರಾಜ್ಯದ ವಿಶೇಷತೆ ಎಂದು ಶಾಸಕ ಎಸ್ ಆರ್.ಶ್ರೀನಿವಾಸ್ ತಿಳಿಸಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ಆಡಳಿತ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 77ನೇ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು. ತಹಸಿಲ್ದಾರ್ ಆರತಿ.ಬಿ ಧ್ವಜಾರೋಹಣ ಮಾಡಿ ಮಾತನಾಡಿ ನಾವುಗಳು ಇಂದಿನ ಭಾರತದ ಸವಾಲುಗಳು ಹಾಗೂ ಯುವಜನತೆಯ ಪಾತ್ರದ ಮತ್ತು ಸವಾಲುಗಳ ಬಗ್ಗೆ ಚಿಂತಿಸಬೇಕಾಗಿದೆ. ನಾವು ಪ್ರತಿದಿನ ಉತ್ತಮ ನಾಗರಿಕರಾಗಿ ಪ್ರಯತ್ನಿಸಿದಾಗ ಮಾತ್ರ ಗಣರಾಜ್ಯದ ಆಚರಣೆಯ ಅರ್ಥ ಬರುತ್ತದೆ ಎಂದು ತಿಳಿಸಿದರು.ಉಪನ್ಯಾಸಕ ಪ್ರದೀಪ್ ಮಾತನಾಡಿದರು. ಕಾರ್ಯಕ್ರಮದಲ್ಲಿ ವೆಂಕಟೇಶ್, ತಾಪಂ ಇಒ ರಂಗನಾಥ್, ಪಪಂ ಮುಖ್ಯ ಅಧಿಕಾರಿ ಮಂಜುಳಾದೇವಿ, ಬಿಇಒ ಎಂ.ಎಸ್.ನಟರಾಜು, ವೈದ್ಯಾಧಿಕಾರಿ ಡಾ.ಬಿಂದು ಮಾಧವ, ಎಇಇಗಳಾದ ಚಂದ್ರಶೇಖರ್, ಯೋಗಿಶ್, ನಾಗೇಂದ್ರಪ್ಪ, ಸುರೇಶ್, ಪ್ರಾಂಶುಪಾಲರಾದ ಡಾ.ಪ್ರಸನ್ನ, ಚಂದ್ರಶೇಖರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಸಿ.ಗುರುಪ್ರಸಾದ್, ಡಿ ವೈ ಎಸ್ ಪಿ ಶೇಖರ್, ಸಿಪಿಐ ರಾಘವೇಂದ್ರ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಜಿ.ಆರ್.ಶಿವಕುಮಾರ್, ಕಸಾಪ ಅಧ್ಯಕ್ಷ ಎಸ್.ಸಿ ಯತೀಶ್, ತಾಲೂಕು ಮಟ್ಟದ ಅಧಿಕಾರಿಗಳಾದ ಸತೀಶ್ ಚಂದ್ರ, ಪವಿತ್ರ, ವೀಣಾ, ಕಾವ್ಯ,ಮೇಘನ, ಪುಷ್ಪಲತಾ, ಜಗನ್ನಾಥ್, ನಾರಾಯಣ್,ಸಿದ್ದೇಗೌಡ, ಮಧುಸೂದನ್, ಇಬ್ರಾಹಿಂ ಶೇಕ್, ಅಕ್ಷರದ ದಾಸೋಹ ನಿರ್ದೇಶಕ ಜಗದೀಶ್,ಹೆಚ್.ಡಿ.ಯಲ್ಲಪ್ಪ, ಕ್ರೀಡಾ ಪ್ರೋತ್ಸಾಹಕ ಶಂಕರ್ ಕುಮಾರ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

₹400 ಕೋಟಿ ದರೋಡೆ ಕೇಸ್‌ನ ಸಂಭಾಷಣೆ ಆಡಿಯೋ ವೈರಲ್‌!
ಇಂದಿನಿಂದ ಮತ್ತೆ ಕಲಾಪ : ಭಾರೀ ಕೋಲಾಹಲ ನಿರೀಕ್ಷೆ