ಮಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗ, ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆ, ವಿವಿ ಕನ್ನಡ ಅಧ್ಯಾಪಕರ ಸಂಘ ವಿಕಾಸ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆದ ಪ್ರಸಾರಾಂಗ ಪ್ರಕಟಿಸಿದ 6 ಕನ್ನಡ ಪದವಿ ಪಠ್ಯ ಕೃತಿಗಳ ಲೋಕಾರ್ಪಣೆ
ಉಳ್ಳಾಲ: ಬರಹಗಾರರಿಗೆ ಸಾಮಾಜಿಕ ಜವಾಬ್ದಾರಿಯಿದೆ. ಸಮಾಜದ ಚಿಂತನೆಯನ್ನು ರೂಪಿಸುವ ಹೊಣೆಗಾರಿಕೆಯಿದೆ. ವಾಸ್ತವವನ್ನು ಮುಚ್ಚಿಡುವ ಪ್ರಯತ್ನ ಆಗಬಾರದು ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್ ಧರ್ಮ ಹೇಳಿದರು
ಅವರು ಸೋಮವಾರ ಮಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗ, ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆ, ವಿವಿ ಕನ್ನಡ ಅಧ್ಯಾಪಕರ ಸಂಘ ವಿಕಾಸ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆದ ಪ್ರಸಾರಾಂಗ ಪ್ರಕಟಿಸಿದ 6 ಕನ್ನಡ ಪದವಿ ಪಠ್ಯ ಕೃತಿಗಳ ಲೋಕಾರ್ಪಣೆ ಮತ್ತು ಪಠ್ಯ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಒಬ್ಬೊಬ್ಬ ವಿದ್ಯಾರ್ಥಿಯ ಹಿಂದೆ ಒಂದೊಂದು ಸಮುದಾಯವಿದೆ.ಅವರು ಆಲಸ್ಯ, ತಿರಸ್ಕಾರ ಭಾವದಿಂದ ಇರದಂತೆ ಮನಸುಗಳನ್ನು ಬೆಸೆಯುವ ಮೌಲ್ಯವನ್ನು ಆಕರ್ಷಕವಾಗಿ ಮಂಡಿಸುವ ಬೋಧನಾ ಕೌಶಲ್ಯವನ್ನು ಅಧ್ಯಾಪಕರು ರೂಢಿಸಿಕೊಳ್ಳಬೇಕೆಂದು ಹೇಳಿದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಕುಲಸಚಿವ ಸಂತೋಷ್ ಬಿ ಜಗಲಸಾರ ಮಾತನಾಡಿ ಕರಾವಳಿಯಲ್ಲಿ ತುಳು - ಕನ್ನಡದ ಬಾಂಧವ್ಯ ಅನುಪಮವಾದುದು. ತುಳುವಿಗೆ ರಾಜ್ಯದ ಎರಡನೇ ಭಾಷೆಯೆಂಬ ಮಾನ್ಯತೆ ಹಿನ್ನೆಲೆಯಿಂದ ವಿವಿಯ ಪ್ರಸಾರಾಂಗದಿಂದ ಕನ್ನಡದ ಮುಖ್ಯ ಕೆಲವು ಕೃತಿಗಳನ್ನು ತುಳುವಿಗೆ ಅನುವಾದಿಸಿ ಪ್ರಕಟಿಸಲಾಗುವುದು ಎಂದರು.ಸಮಾರಂಭದಲ್ಲಿ ವಿವಿಯ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ.ಧನಂಜಯ ಕುಂಬ್ಳೆ, ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಯವಂತ ನಾಯಕ್ ಉಪಸ್ಥಿತರಿದ್ದರು. ಅಧ್ಯಾಪಕರ ಸಂಘ ವಿಕಾಸ''''ದ ಅಧ್ಯಕ್ಷ ಡಾ. ಚಿನ್ನಸ್ವಾಮಿ ಎನ್ ಪ್ರಸ್ತಾವನೆ ಮಾಡಿದರು. ಪ್ರಸಾರಾಂಗದ ನಿರ್ದೇಶಕ ಪ್ರೊ.ಪ್ರಶಾಂತ ನಾಯ್ಕ್ ಸ್ವಾಗತಿಸಿದರು. ಡಾ.ಅನುರಾಧ ಕುರುಂಜಿ ವಂದಿಸಿದರು.ಉಪನ್ಯಾಸಕಿ ಮಲ್ಲಿಕಾ ನಿರೂಪಿಸಿದರು.ಸಮಾರಂಭದಲ್ಲಿ ಸಾಹಿತ್ಯ ಸಿರಿ, ವಾಣಿಜ್ಯ ಸಿರಿ, ವಿಜ್ಞಾನ ಸಿರಿ, ಗಣಕ ಸಿರಿ, ಕಲಾ ಸಿರಿ, ನಿರ್ವಹಣಾ ಸಿರಿ ಪಠ್ಯಗಳ ಬಿಡುಗಡೆ ಹಾಗೂ ಬಳಿಕ ಈ ಪಠ್ಯಗಳ ಕುರಿತು ಸಂವಾದ ವಿಶ್ಲೇಷಣೆ ನಡೆಯಿತು. ಮಂಗಳೂರು ವಿವಿ ವ್ಯಾಪ್ತಿಯ ವಿವಿಧ ಕಾಲೇಜುಗಳ ಕನ್ನಡ ಅಧ್ಯಾಪಕರು ಭಾಗವಹಿಸಿದ್ದರು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.