ಅಭ್ಯರ್ಥಿ ಶಶೀಲ್‌ ನಮೋಶಿಗೆ ಅಭೂತಪೂರ್ವ ಬೆಂಬಲ: ರವೀಂದ್ರ ಶೆಟ್ಟಿ

KannadaprabhaNewsNetwork |  
Published : Oct 22, 2026, 01:15 AM IST
ಪೋಟೋ: ೨೧-೧೦ ಸಿಟಿಪಿಅರ್ ೧ಚಿತ್ತಾಪುರ ಪಟ್ಟಣದ ವರೂಣ ನಗರದಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಅಧ್ಯಕ್ಷತೆಯಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದ ವಿದಾನ ಪರಿಷತ್ ಚುನಾವಣೆ, ಹಾಗೂ ಮನ್‌ಕೀ ಬಾತ್ ಕಾರ್ಯಕ್ರಮದ ಕುರಿತು ಸುದ್ದಿಗೊಷ್ಟಿ ನಡೆಸಿದರು. | Kannada Prabha

ಸಾರಾಂಶ

ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಸೆ.23ರಂದು ನಡೆಯಲಿರುವ ಚುನಾವಣೆಗೆ ಪ್ರಬುದ್ಧ ಶಿಕ್ಷಕರು ನಮ್ಮ ಪಕ್ಷದ ಆಭ್ಯರ್ಥಿ ಶಶಿಲ್ ನಮೋಶಿ ಅವರಿಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ರವೀಂದ್ರ ಸಜ್ಜನ ಶೆಟ್ಟಿ ಹೇಳಿದರು.

ಕನ್ನಡ ಪ್ರಭ ವಾರ್ತೆ ಚಿತ್ತಾಪುರ

ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಸೆ.23ರಂದು ನಡೆಯಲಿರುವ ಚುನಾವಣೆಗೆ ಪ್ರಬುದ್ಧ ಶಿಕ್ಷಕರು ನಮ್ಮ ಪಕ್ಷದ ಆಭ್ಯರ್ಥಿ ಶಶಿಲ್ ನಮೋಶಿ ಅವರಿಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ರವೀಂದ್ರ ಸಜ್ಜನ ಶೆಟ್ಟಿ ಹೇಳಿದರು.

ಪಟ್ಟಣದ ವರೂಣ ನಗರದಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಶಿಲ್ ನಮೊಶಿ ಅವರು 4 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ತಮಗೆ ಬರುವ 6 ಜಿಲ್ಲೆಯಲ್ಲಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಬೇಡಿಕೆಗಳನ್ನು ಸರ್ಕಾರದ ಮಟ್ಟಕ್ಕೆ ತಲುಪಿಸಿ ಈಡೇರಿಸುತ್ತಿದ್ದಾರೆ. ಅವರಿಗೆ ಹೋದ ಕಡೆಗಳಲ್ಲಿ ಶಿಕ್ಷಕರಿಂದ ಬೆಂಬಲ ವ್ಯಕ್ತವಾಗಿದ್ದು, ಅವರು ಮತ್ತೊಮ್ಮೆ ಅತೀ ಹೆಚ್ಚಿನ ಮತ ಪಡೆದು ವಿಜೇತರಾಗಲಿದ್ದಾರೆ. ನಮ್ಮ ತಾಲೂಕಿನಲ್ಲಿ ಇರುವ ಪ್ರತಿ ಮತದಾರ ಶಿಕ್ಷಕರ ಮನೆ ಮನೆಗೆ ತೆರಳಿ ನಮ್ಮ ಪಕ್ಷದ ಅಭ್ಯರ್ಥಿಗೆ ಪ್ರಥಮ ಪ್ರಶಸ್ತ್ಯದ ಮತ ನೀಡುವಂತೆ ಮನವಿ ಮಾಡಲಾಗುತ್ತಿದೆ ಎಂದರು.

ಮುಖಂಡ ಧರ್ಮಣ್ಣ ಇಟಗಾ ಮಾತನಾಡಿದರು. ಮುಖಂಡರಾದ ಮಲ್ಲಿಕಾರ್ಜುನ ಎಮ್ಮೆನೋರ, ನಾಗರಾಜ ಬಂಕಲಗಾ, ಅಂಬಾರಾಯ ಅಷ್ಟಗಿ, ಅಣ್ಣಾರಾವ ಬಾಳಿ, ಭೀಮರೆಡ್ಡಿ ಕುರಾಳ, ವೀರಣ್ಣ ಯಾರಿ, ಆನಂದ ಪಾಟೀಲ್ ನರಬೋಳ, ಗಿರೀಶ ಭಜಂತ್ರಿ, ಶಾಂತಕುಮಾರ ಮಳಖೇಡ, ನಾಗರಾಜ ಹೂಗಾರ, ಶಿವರಾಮ ಚವ್ವಾಣ, ಸಂಘಮೇಶ ಪಾಟೀಲ, ಮಲ್ಲಿಕಾರ್ಜುನ ಇಟಗಿ ಇತರರು ಇದ್ದರು.

ಚಿತ್ತಾಪುರದಲ್ಲಿ ಮನ್‌ಕಿಬಾತ್‌ ಲೈವ್‌: ನರೇಂದ್ರ ಮೊದಿ ನಡೆಸುತ್ತಿರುವ ಮನ್ ಕೀ ಬಾತ್ ಕಾರ್ಯಕ್ರಮವು ಅತೀ ಯಶಸ್ವಿಯಾಗಿ ನಡೆದು 138ನೇ ಕಂತನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಿದ್ದು. 139ನೇ ಕಾರ್ಯಕ್ರಮ ಚಿತ್ತಾಪುರದಲ್ಲಿ ಲೈವ್ ಟೆಲಿಕಾಸ್ಟ್ ಆಗಲಿದೆ. ಇದು ನಮ್ಮ ತಾಲೂಕಿನ ಸುದೈವ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್ ಹೇಳಿದರು. ಮನ್ ಕೀ ಬಾತ್ ಕಾರ್ಯಕ್ರಮಗಳಿಂದ ದೇಶದಲ್ಲಿ ಬೆಳಕಿಗೆ ಬಾರದ ಅನೇಕ ವಿಷಯಗಳನ್ನು ಪ್ರಸ್ತಾಪಿಸುವುದರ ಮೂಲಕ ಅವುಗಳ ಮಹತ್ವವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಚಿತ್ತಾಪುರದಲ್ಲಿ ಲೈವ್‌ ಟೆಲಿಕಾಸ್ಟ್ ಮಾಡುತ್ತಿರುವುದು ಸಂತಸವಾಗಿದೆ. ಕಾರ್ಯಕ್ರಮವು ಶರಣಬಸವೇಶ್ವರ ದೇವಳದಲ್ಲಿ ನೇರಪ್ರಸಾರಗೊಳಿಸಲಾಗುವುದು ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರದ್ದಾ ಭಕ್ತಿಯಿಂದ ದೇವರನ್ನು ಆರಾಧಿಸಿದರೆ ಯಶಸ್ಸು ಸಿದ್ದಿ
ಅರಸೀಕೆರೆಯ ಪೌರ ಕಾರ್ಮಿಕರಿಗೆ ದಸರಾ ಗಿಫ್ಟ್