ಅವೈಜ್ಞಾನಿಕ ಚರಂಡಿ ನಿರ್ಮಾಣ

KannadaprabhaNewsNetwork |  
Published : Aug 13, 2025, 12:30 AM IST
೧೨ಕೆಎಲ್‌ಆರ್-೨ಕೋಲಾರದ ಹೊರವಲಯದ ವಿಜಯನಗರ ಬಡಾವಣೆಯಲ್ಲಿ ಅವೈಜ್ಞಾನಿಕವಾಗಿ ಚರಂಡಿಗಳನ್ನು ನಿರ್ಮಾಣ ಮಾಡಿರುವುದು. | Kannada Prabha

ಸಾರಾಂಶ

ಲೋಕೋಪಯೋಗಿ ಇಲಾಖೆಯಿಂದ ಗುತ್ತಿಗೆ ಪಡೆದಿರುವವರು ಕಾಮಗಾರಿ ಪೂರ್ಣಗೊಳಿಸದೆ ವಿಳಂಬ ಮಾಡುತ್ತಿದ್ದು, ಒಂದೇ ಸಮನೆ ರಸ್ತೆಪೂರ ಮನೆಗಳ ಬದಿಯಲ್ಲಿ ಚರಂಡಿ ನಿರ್ಮಿಸಲು ಹಳ್ಳ ಹಗೆದು ತಿಂಗಳುಗಟ್ಟಲೆ ಕಳೆದಿದೆ. ಮಳೆಗಾಲವಾದುದ್ದರಿಂದ ಹಳ್ಳದಲ್ಲಿ ನೀರು ನಿಂತು ಮನೆಗಳಿಗೆ ಹಾನಿಯಾಗುತ್ತಿದೆ. ಮನೆಗಳು ಬಿದ್ದು ಪ್ರಾಣಕ್ಕೆ ಕುತ್ತು ಬಂದರೆ ಯಾರು ಹೊಣೆ.

ಕನ್ನಡಪ್ರಭ ವಾರ್ತೆ ಕೋಲಾರಎಪಿಎಂಸಿ ಮಾರುಕಟ್ಟೆ ಬಳಿ ಇರುವ ವಿಜಯನಗರ ಬಡಾವಣೆಯಲ್ಲಿ ಅವೈಜ್ಞಾನಿಕವಾಗಿ ಚರಂಡಿಗಳನ್ನು ಮಾಡುತ್ತಿದ್ದು ಇಲ್ಲಿನ ನಿವಾಸಿಗಳು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಲೋಕೋಪಯೋಗಿ ಇಲಾಖೆಯಿಂದ ಗುತ್ತಿಗೆ ಪಡೆದಿರುವವರು ಕಾಮಗಾರಿ ಪೂರ್ಣಗೊಳಿಸದೆ ವಿಳಂಬ ಮಾಡುತ್ತಿದ್ದು, ಒಂದೇ ಸಮನೆ ರಸ್ತೆಪೂರ ಮನೆಗಳ ಬದಿಯಲ್ಲಿ ಚರಂಡಿ ನಿರ್ಮಿಸಲು ಹಳ್ಳ ಹಗೆದು ತಿಂಗಳುಗಟ್ಟಲೆ ಕಳೆದಿದೆ. ಮಳೆಗಾಲವಾದುದ್ದರಿಂದ ಹಳ್ಳದಲ್ಲಿ ನೀರು ನಿಂತು ಮನೆಗಳಿಗೆ ಹಾನಿಯಾಗುತ್ತಿದೆ. ಮನೆಗಳು ಬಿದ್ದು ಪ್ರಾಣಕ್ಕೆ ಕುತ್ತು ಬಂದರೆ ಯಾರು ಹೊಣೆ. ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಬಡಾವಣೆಯ ನಾಗರಿಕರು ಒತ್ತಾಯಿಸಿದ್ದಾರೆ.

ಕಾಮಗಾರಿ ಪೂರ್ಣಗೊಳಿಸಿ

ಕೊಂಡರಾಜನಹಳ್ಳಿ ಗ್ರಾಪಂ ಸದಸ್ಯೆ ಪುಷ್ಪ ಬಾಬು ಪ್ರತಿಕ್ರಿಯಿಸಿ, ಸರ್ಕಾರವು ಈ ಭಾಗದ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳು ದೊರಕಿಸಲು ಅನುದಾನ ಬಿಡುಗಡೆಗೊಳಿಸಿ ರಸ್ತೆ, ಚರಂಡಿ ನಿರ್ಮಿಸಲು ಶಾಸಕ ಕೊತ್ತೂರು ಮಂಜುನಾಥ್ ಗುದ್ದಲಿ ಪೂಜೆ ಸಹ ಮಾಡಿದರು. ಶಾಸಕರ ಮುತುವರ್ಜಿಯಿಂದ ಶೀಘ್ರವಾಗಿ ಅಭಿವೃದ್ಧಿಪಡಿಸಲು ಟೆಂಡರ್ ಕರೆದು ಗುತ್ತಿಗೆ ಸಹ ನೀಡಲಾಗಿದೆ. ಆದರೆ, ಗುತ್ತಿಗೆದಾರ ಚಂಬೆ ನಾರಾಯಣಸ್ವಾಮಿ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸದೆ ಇಲ್ಲಿನ ಜನಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವೈಜ್ಞಾನಿಕವಾಗಿ ಚರಂಡಿ ಕಾಮಗಾರಿ ನಡೆಸುತ್ತಿದ್ದು, ವಿರುದ್ಧ ದಿಕ್ಕಿಗೆ ನೀರು ಹರಿಯುವಂತೆ ಮಾಡಿದ್ದಾರೆ. ಜೊತೆಗೆ ಹಳ್ಳಗಳನ್ನು ಅಗೆದು ತಿಂಗಳುಗಳೇ ಕಳೆದಿದೆ. ಇದರಿಂದಾಗಿ ಮಳೆ ನೀರು ಹಳ್ಳದಲ್ಲಿ ತುಂಬಿ ಮನೆಗಳ ಅಡಿಪಾಯಕ್ಕೆ ತೊಂದರೆಯಾಗುತ್ತಿದ್ದು, ಮನೆಗಳು ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಶೌಚಾಲಯ ಗುಂಡಿಗೆ ಹಾನಿ

ಯುಜಿಡಿ ಇಲ್ಲದ ಈ ಬಡಾವಣೆಯಲ್ಲಿ ಪಿಟ್ಟುಗಳು ನಿರ್ಮಿಸಿ ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ಚರಂಡಿಗಾಗಿ ಹಳ್ಳ ಅಗೆದಿದ್ದರಿಂದ ಪಿಟ್ಟುಗಳಿಗೂ ಹಾನಿಯಾಗಿದೆ. ಹಾಗಾಗಿ ಬೇರೆ ಮನೆಗಳಿಗೆ ಹೋಗಿ ದಿನನಿತ್ಯ ಕರ್ಮಗಳನ್ನು ಮುಗಿಸುವ ಕರ್ಮ ಇಲ್ಲಿನ ಜನಗಳಿಗೆ ಒದಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!