ಪ್ರತಿಭಟನೆ ಭಯದಿಂದ ಎಚ್ಚೆತ್ತಿದ್ದಾರೆ । ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಆರೋಪ
ತಾಲೂಕು ಕಚೇರಿ ಸಮೀಪದ ತಡೆಗೋಡೆ ನಿರ್ಮಾಣ ಕಾಮಗಾರಿ ಅವೈಜ್ಞಾನಿಕ, ಕಳಪೆ ಯಾಗಿದ್ದರಿಂದ ಒಂದೆರೆಡು ಮಳೆಗೆ ಕುಸಿದು ಬೀಳುವ ಹಂತಕ್ಕೆ ತಲುಪಿದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಆರೋಪಿಸಿದರು.
ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಅವೈಜ್ಞಾನಿಕವಾಗಿ ತಡೆಗೋಡೆ ಕಟ್ಟಿ ಎಲ್ಲಿಂದಲೋ ಮಣ್ಣು ತಂದು ತುಂಬಿಸಿದ್ದಾರೆ.₹1.86 ಲಕ್ಷ ಮಂಜೂರಾಗಿದೆ. ಬಿರುಕು ಬಿಟ್ಟಿರುವ ತಡೆಗೋಡೆ, ತುಂಬಿರುವ ಮಣ್ಣು ಅಷ್ಟೇ. ಈಗ ಅದು ಕುಸಿಯುತ್ತಿದೆ. ಈಗಾಗಲೇ ಕುಸಿದು ಬೀಳಬೇಕಿತ್ತು.ಅದು ನಿಂತಿದ್ದು ಗುಡ್ಡದ ಕೆಳಗಿರುವ ಜನಗಳ ಪುಣ್ಯ ಎಂದು ಹೇಳಬೇಕು.ಬಿಜೆಪಿಯವರು ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿದ್ದರಿಂದ ಭಯದಿಂದ ಕೂಡಲೇ ಎಚ್ಚೆತ್ತು ಕೆಲಸ ಮಾಡುತ್ತಿದ್ದಾರೆ. ನನ್ನ ಅವಧಿಯಲ್ಲಿಯೇ ಅಲ್ಲಿ ತಡೆಗೋಡೆ ನಿರ್ಮಾಣ ಮಾಡುವ ಬಗ್ಗೆ ಕೆಲವರು ಗಮನಕ್ಕೆ ತಂದಿದ್ದರು. ಆದರೆ ಗುಡ್ಡದ ಕೆಳಭಾಗದಲ್ಲಿ ಮಣ್ಣು ಜರಿಯದಂತೆ ಮಾಡಿ ಬಿಡಲಾಯಿತು. ಈಗ ಮೇಲೆ ಜಾಗ ಮಾಡಿಕೊಡುವ ಉದ್ದೇಶದಿದಲೋ,ಕೆಳಗೆ ಜಾಗ ತೆಗೆಯುವ ಉದ್ದೇಶದಿಂದಲೋ ,ಯಾರದ್ದೋ ತೃಪ್ತಿಗಾಗಿ ಎತ್ತರದ ಅವೈಜ್ಞಾನಿಕ ತಡೆಗೋಡೆ ನಿರ್ಮಿಸಲು ಹೊರಟು ಅಪಾಯ ತಂದೊಡ್ಡಿದ್ದಾರೆ.
ಸುಪ್ರಿಂ ಕೋರ್ಟಿನಲ್ಲಿ 23ಕ್ಕೆ ಪ್ರಕರಣ ವಿಚಾರಣೆಗೆ ಇದೆ. ನ್ಯಾಯಾಲಯದಲ್ಲಿರುವ ಪ್ರಕರಣದ ಬಗ್ಗೆ ಮಾತನಾಡುವುದಿಲ್ಲ. ನ್ಯಾಯಾಂಗ, ಸಂವಿಧಾನದ ಮೇಲೆ ನಂಬಿಕೆಯಿದೆ. ಆದರೆ ಅವರು ಮಾತನಾಡುತ್ತಿದ್ದಾರೆ. ಸತ್ಯಕ್ಕೆ ಯಾವಾಗಲೂ ಜಯ ಸಿಗುತ್ತದೆ. ನ್ಯಾಯಾಲಯ ನಿರ್ದರಿಸುತ್ತದೆ.
ಸಭೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ತಲಗಾರು ಉಮೇಶ್ ಭಟ್,ಅರುಣ್ ಕುಮಾರ್, ಎಚ್.ಎಸ್. ವೇಣುಗೋಪಾಲ್, ಎಚ್.ಕೆ.ನೂತನ್ ಕುಮಾರ್,ಬಿ.ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ಶೃಂಗೇರಿ ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿದರು.