ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಗಡಿ ಗ್ರಾಮವಾದ ಹೂಗ್ಯಂ ಗ್ರಾಮ ಪಂಚಾಯಿತಿ ವತಿಯಿಂದ ಮನರೇಗಾ ಉದ್ಯೋಗ ಖಾತ್ರಿ ಯೋಜನೆ ಅಡಿ ಎಡ ಮತ್ತು ಬಲದಂಡೆ ನಾಲೆಗಳನ್ನು ಆರು ದಿನಗಳ ಕಾಲ 35 ಲಕ್ಷದಲ್ಲಿ ಗಿಡಗಂಟಿಗಳು, ರಾಡಿ ಸ್ವಚ್ಛಗೊಳಿಸಿ ಜಲಾಶಯದಿಂದ ನೀರು ನಾಲೆಗೆ ಬಿಡಲಾಗಿದೆ. ಆದರೆ, ಸಣ್ಣ ನೀರಾವರಿ ಇಲಾಖೆ ಚಾನಲ್‌ಗಳ ಅವೈಜ್ಞಾನಿಕವಾಗಿ ಮಾಡಲಾಗಿರುವುದರಿಂದ ಅಪಾರ ಪ್ರಮಾಣದಲ್ಲಿ ರೈತರ ಜಮೀನುಗಳಿಗೆ ಹೋಗುವ ನೀರು ಪೋಲಾಗುತ್ತಿದೆ.
ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆ ಅಡಿ ನಡೆದಿರುವ ಕಾಮಗಾರಿಯಲ್ಲಿ ನಾಲೆಗಳನ್ನು ಕಾಟಾಚಾರಕ್ಕೆ ಸ್ವಚ್ಛಗೊಳಿಸಿರುವುದರಿಂದ ಅಪಾರ ಪ್ರಮಾಣದ ನೀರು ರೈತರ ಜಮೀನು ತಲುಪದೆ ಮಾರ್ಗ ಮಧ್ಯದಲ್ಲಿ ಗ್ರಾಮಗಳ ಬಳಿ ಹರಿದು ಪೋಲಾಗುತ್ತಿದೆ ಜೊತೆಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ನಾಲೆಗಳನ್ನು ತಗ್ಗು ಪ್ರದೇಶಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದರಿಂದ ನೀರು ಸಮತೋಲನವಾಗಿ ಹರಿಯದೇ ತಗ್ಗು ಪ್ರದೇಶಗಳಲ್ಲಿ ನೀರು ಹರಿದು ಪೋಲಾಗುತ್ತಿದೆ.ಗ್ರಾಪಂ ವತಿಯಿಂದ 6 ದಿನದಲ್ಲಿ ₹35 ಲಕ್ಷ ವೆಚ್ಚದಲ್ಲಿ ಚಾನಲ್‌ಗಳಲ್ಲಿನ ಹೂಳು ತೆಗೆದು ಗಿಡಗಂಟಿಗಳನ್ನು ತೆರವುಗೊಳಿಸಿದ್ದಾರೆ. ಉಳಿದಂತ ಕಾಮಗಾರಿ ಮಾಡಲು ನಮ್ಮ ಗ್ರಾಪಂ ಅಲ್ಲಿ ಅವಕಾಶ ಇರುವುದಿಲ್ಲ. ಹೀಗಾಗಿ ಸಣ್ಣ ನೀರಾವರಿ ಇಲಾಖೆ ಇದರ ಬಗ್ಗೆ ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು.ಪುಷ್ಪಲತಾ, ಹೂಗ್ಯಂ ಗ್ರಾಪಂ ಅಭಿವೃದ್ಧಿ ಅಧಿಕಾರಿ.