ಹನೂರು: ಕಾವೇರಿ ನೀರಾವರಿ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದ ಪೈಪ್‌ಲೈನ್ ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿ ಫಸಲು ಹಾನಿಯಾಗಿದೆ ಎಂದು ರೈತರು ಅಕ್ರೋಶವನ್ನು ವ್ಯಕ್ತಪಡಿಸಿದರು.
ತೆಪ್ಪದಲ್ಲಿ ಜೋಳದ ತೆನೆ ಸಂಗ್ರಹ: ಕೆ.ಗುಂಡಾಪುರದ ರೈತ ತಿಪ್ಪುರಪ್ಪ ತಮಗೆ ಸೇರಿರುವ ಸರ್ವೆ ನಂಬರ್ 141/1ರಲ್ಲಿ 4.78 ಎಕರೆ ಜಮೀನಿನಲ್ಲಿ ಮುಸುಕಿನ ಜೋಳ ಬೆಳೆದಿದ್ದು ಕೆರೆಯ ನೀರು ನುಗ್ಗಿ ಪಸಲು ನೀರಿನಲ್ಲಿ ನೆನೆದು ಲಕ್ಷಾಂತರ ರುಪಾಯಿ ನಷ್ಟ ಉಂಟಾಗಿದೆ. ಕಳೆದ 20 ವರ್ಷಗಳಿಂದಲೂ ಇದು ಸಮಸ್ಯೆಯಾಗಿಯೇ ಕಾಡುತ್ತಿದೆ. ಅಂದಿನಿಂದಲೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಸಮಸ್ಯೆಗೆ ಪರಿಹಾರ ನೀಡದೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ. ಹೀಗಾಗಿ ಜೀವ ಜಲವನ್ನು ಸಂರಕ್ಷಿಸುವ ಅಧಿಕಾರಿಗಳು ನಿರ್ಲಕ್ಷತನದಿಂದ ಫಸಲಿಗೆ ನಷ್ಟ ಉಂಟಾಗುತ್ತಿದೆ ರೈತರು ಅಳಲು ತೋಡಿಕೊಂಡಿದ್ದಾರೆ.
15ಸಿಎಚ್ಎನ್11ಮತ್ತು 12ಹನೂರು ತಾಲೂಕಿನ ಕೆ ಗುಂಡಾಪುರದ ರೈತ ತಿಪುರಪ್ಪ ಜಮೀನಿಗೆ ಉಡುತೊರೆ ಜಲಾಶಯದ ನೀರನ್ನು ಕೆರೆಗೆ ಬಿಟ್ಟಿರುವುದರಿಂದ ತುಂಬಿ ಹರಿಯುವ ನೀರು ಜಮೀನಿಗೆ ನುಗ್ಗಿ ಜೋಳದ ಪಸಲು ಹಾನಿಯಾಗಿರುವುದು.