ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಅನಧಿಕೃತ ವಾಸ:
ಕಾಲ ಕಳೆದಂತೆ ವಸತಿ ಗೃಹಗಳು ಶಿಥಿಲವಾಗಿ ಮೇಲ್ಚಾವಣಿ ಸಿಮೆಂಟ್ ಉದುರ ತೊಡಗಿತು. ಮೊದಲೇ ಕಿರಿದಾಗಿದ್ದ ಗೃಹಗಳಲ್ಲಿ ವಾಸ ಮಾಡಲು ನೌಕರರು ಹಿಂದೇಟು ಹಾಕಿದ್ದರಿಂದ ಪುರಸಭೆಗೆ ಸಂಬಂಧ ಇಲ್ಲದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದರು.ಶಿಥಿಲವಾಗಿದ್ದ ವಸತಿ ಗೃಹಗಳನ್ನು ಕೆಡವಿ ವಾಣಿಜ್ಯ ಸಂಕಿರಗಳನ್ನು ನಿರ್ಮಾಣ ಮಾಡಲೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ೮ ವರ್ಷಗಳ ಹಿಂದೆ ಒಂದು ಕಡೆ ಮಾತ್ರ ಕಡೆವಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿ ಹರಾಜು ಮೂಲಕ ಬಾಡಿಗೆಗೆ ನೀಡಿದ್ದಾರೆ. ಪುರಸಭೆ ನಿರೀಕ್ಷೆ ಮಾಡಿದಷ್ಟು ವಾಣಿಜ್ಯ ಮಳಿಗೆಗೆಳು ಉಪಯೋಗಕ್ಕೆ ಬಾರದ ಕಾರಣ, ಮತ್ತೊಂದು ಕಡೆ ಇರುವ ವಸತಿ ಗೃಹಗಳನ್ನು ಕಡೆವಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲು ಆಸಕ್ತಿ ತೋರಲಿಲ್ಲ.ಪಾಳುಬಿದ್ದ ವಸತಿ ಗೃಹಗಳುಇದರಿಂದ ವಸತಿ ಗೃಹಗಳು ಇತ್ತ ಬಳಕೆಗೂ ಬಾರದೆ ಮತ್ತೊಂದು ಕಡೆ ಕೆಡವಿ ಮಳಿಗೆಗಳನ್ನೂ ನಿರ್ಮಾಣ ಮಾಡದೆ ಬಿಟ್ಟಿರುವುದರಿಂದ ವಸತಿ ಗೃಹಗಳು ಇಂದೋ ನಾಳೆನೋ ನೆಲ ಕಚ್ಚುವ ಹಂತದಲ್ಲಿದೆ. ಮನೆ ಮೇಲೆ ಕಾಂಗ್ರೆಸ್ ಗಿಡಗಳು ದಟ್ಟವಾಗಿ ಬೆಳೆದಿದೆ. ಮನೆಗಳ ಸುತ್ತಲೂ ನೈರ್ಮಲ್ಯವಿಲ್ಲದೆ ಗಬ್ಬು ನಾರುತ್ತಿದೆ.
ರಾತ್ರಿ ವೇಳೆ ಕುಡುಕರ ಅಡ್ಡ
ಈ ವಸತಿಗೃಹಗಳು ರಾತ್ರಿ ವೇಳೆ ಸಹ ಕುಡುಕರ ಅಡ್ಡವಾಗಿ ಬದಲಾಗಿದೆ ಎಂಬುದು ಸಾರ್ವಜನಿಕರ ದೂರಾಗಿದೆ. ಆದ್ದರಿಂದ ಪುರಸಭೆ ಬಳಕೆಗೆ ಬಾರದಿರುವ ಈ ವಸತಿ ಗೃಹಗಳನ್ನು ನೆಲಸಮ ಮಾಡಲಿ ಇಲ್ಲವೆ ವಾಣಿಜ್ಯ ಮಳಿಗೆಗಳ್ನಾದರೂ ನಿರ್ಮಾಣ ಮಾಡಿ ದಿನ ನಿತ್ಯ ಉಂಟಾಗುತ್ತಿರುವ ಕಿರಿಕಿರಿಯನ್ನು ತಪ್ಪಿಸಲಿ ಎಂದು ವಸತಿ ಪ್ರದೇಶದ ನಿವಾಸಿಗರು ಒತ್ತಾಯಿಸಿದ್ದಾರೆ.