ಕಾರಟಗಿ: ನಾಡಿನ ಕಲೆ,ಸಾಹಿತ್ಯ,ನೃತ್ಯ, ಸಂಸ್ಕೃತಿ, ಇತಿಹಾಸ, ಪುರಾಣ, ಕವಾಲಿ ಮತ್ತು ಜಾನಪದ ಹೀಗೆ ಇದ್ದವು ಎನ್ನುವುದನ್ನು ರಾಜ್ಯ ವಿವಿಧ ಜಿಲ್ಲೆಗಳ ಮಕ್ಕಳ ತಮ್ಮ ಪ್ರತಿಭೆಯ ಮೂಲಕ ಆನಾವರಣಗೊಳಿಸಿ ನೆರೆದಿದ್ದ ಅಪಾರ ಸಂಖ್ಯೆ ಪ್ರೇಕ್ಷರನ್ನು ಹಿಡಿದಿಟ್ಟುಕೊಂಡು ಸುಪ್ತ ಪ್ರತಿಭೆ ಪ್ರದರ್ಶಿಸಿದರೆ ಕಲೆ ಸಂಸ್ಕೃತಿಯಗಳ ಕಾರಂಜಿ ನಿರಂತರ ಚಿಮ್ಮುತ್ತಿತ್ತು. ಪ್ರತಿಭಾ ಕಾರಂಜಿಗೆ ಎರಡು ದಿನಗಳ ಈ ಮಕ್ಕಳ ಕಲರವಕ್ಕೆ ಭತ್ತದ ಕಣಜ ವೇದಿಕೆಯಾಗಿ ಮಕ್ಕಳ ಪ್ರತಿಭೆ ಕಣ್ಮನ ತುಂಬಿಕೊಂಡು ಸಾಕ್ಷಿಯಾಯಿತು.
ಮೇಳೈಸಿದ ಕಲೆಗಳು: ಮುಖ್ಯ ವೇದಿಕೆ ಸೇರಿದಂತೆ ಒಟ್ಟು ಐದು ವೇದಿಕೆಗಳು ಮಕ್ಕಳ ಕಲರವಕ್ಕೆ ವೇದಿಕೆಯಾಗಿತ್ತು. ನಾಡಿನ ಸಾಂಸ್ಕೃತಿಕ ಪರಂಪರೆ ಸಾರುವ ಅನೇಕ ಜಾನಪದಗಳ ಕಲೆಗಳಾದ ಗೊರವರ ಕುಣಿತ, ಲಂಬಾಣಿ ನೃತ್ಯ ಸೋಮನ ಕುಣಿತ, ಮೋಹರಾಮ್ ಕುಣಿತ, ಪೂಜಾ ಕುಣಿತ, ನಂದಿಕೋಲು ಕುಣಿತ, ಸುಗ್ಗಿ ಹಬ್ಬದ ನೃತ್ಯಗಳು ಹೀಗೆ ವೈವಿಧ್ಯಮ ಜಾನಪದ ಕಲೆಗಳು ಅನಾವರಣಗೊಂಡವು. ಬೆಂಗಳೂರು, ಮೈಸೂರು, ಹಳೇ ಮೈಸೂರು, ಹಾಸನ, ಕರಾವಳಿ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಭಾಗ ಒಟ್ಟು 35 ಜಿಲ್ಲೆಗಳಿಂದ ಬಂದ ಮಕ್ಕಳು ಜನಮನ ಸೇರಿ ನಿರ್ಣಾಯಕರನ್ನು ಸೊರೆಗೊಳ್ಳುಸಿದರು.
ಪ್ರತಿ ನೃತ್ಯಕ್ಕೆ ವೇಷಭೂಷಣ, ಕಲೆ ಆಕಾರ ವಿಕಾರಗಳು, ಬೆಂಕಿ ಹಿಡಿದು ನೃತ್ಯಗಳು ಒಂದುಹಂತದಲ್ಲಿ ನೆರೆದಿದ್ದ ಜನರನ್ನು ಬಿಗಿಹಿಡಿದು ಕೂಡಿಸಿತ್ತು. ಉತ್ತರ ಕರ್ನಾಟಕದ ಭಾವೈಕತೆ ಸಾರುವ ಆಲಾಯಿ ಕುಣಿತ ಅಂದರೆ ಮೊಹರಂ ಕುಣಿತವು ಜನರನ್ನು ಆಕರ್ಷಿಸಿತು. ಇಂದಿನ ಯುವಪೀಳಿಗೆಯ ಮಕ್ಕಳಿಗೆ ಇಂತಹ ನೆಲಮೂಲದ ಜಾನಪದ ಕಲೆಗಳ ನೃತ್ಯ ಮಾಡಿದ್ದು ನಾಡಿನ ಸಾಂಸ್ಕೃತಿಕ ಹಿರಿಮೆ ಹೆಚ್ಚಿಸಿತು.ಕವ್ವಾಲಿ: ಇನ್ನು ಕೆಪಿಸಿ ಶಾಲೆ ಒಳಾಂಗಣದ ಸಭಾಂಗಣದಲ್ಲಿ ಸಮಾನಂತರ ವೇದಿಕೆಯಲ್ಲಿ ಜರುಗಿದ ಕವ್ವಾಲಿ ನೃತ್ಯವು ರಾಜ್ಯ ವಿವಿಧ ಜಿಲ್ಲೆಗಳ ತಂಡಗಳು ಪಾಲ್ಗೊಂಡು ಲಯ, ತಾಳ ಹಾಗೂ ವಾದ್ಯಗಳೊಂದಿಗೆ ಜನರನ್ನು ಆಕರ್ಷಿಸಿತು.
ರೊಟ್ಟಿ, ಕಾಳುಪಲ್ಲೆ: ಎರಡನೇ ದಿನವೂ ಸಹ ಎಲ್ಲ ಸ್ಪರ್ಧಾಗಳು, ಶಿಕ್ಷಕರು ಮತ್ತು ಮಕ್ಕಳೊಂದಿಗೆ ಬಂದ ಪಾಲಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಮರ್ಲಾನಹಳ್ಳಿಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿತ್ತು ಊಟಕ್ಕೆ ಭಾನುವಾರ ಬೆಳಗ್ಗೆ ರೈಸ್‌ಬಾತ್, ಲೆಮೆನ್ ರೈಸ್, ಮಧ್ಯಾಹ್ನದ ಊಟಕ್ಕೆ ರೊಟ್ಟಿ, ಹೆಸರು ಕಾಳು ಪಲ್ಲೆ, ಅನ್ನ, ಸಾಂಬರ್, ಹಣ್ಣುಮಿಶ್ರಿತ ಮೊಸರನ್ನ, ಪುಡಿ ಮತ್ತು ಉಪ್ಪಿನ ಕಾಯಿ ಬಡಿಸಲಾಯಿತು. ಬೆಂಗಳೂರು, ಮೈಸೂರು ಕರಾವಳಿ ಭಾಗದವರು ಊಟದ ಮತ್ತು ವ್ಯವಸ್ಥೆ ನೆನೆದರು.