ಯುವ ಪ್ರತಿಭೆಗಳ ಅನಾವರಣ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಗುರಿ: ಡಾ.ವಾಣಿಶ್ರೀ

KannadaprabhaNewsNetwork |  
Published : May 27, 2025, 12:11 AM ISTUpdated : May 27, 2025, 12:12 AM IST
ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. | Kannada Prabha

ಸಾರಾಂಶ

ಮಂಗಳೂರಿನಲ್ಲಿ ಭಾನುವಾರ, ಡಾ. ವಾಮನ್ ರಾವ್ ಬೇಕಲ್ ಸಾರಥ್ಯದ ಕಾಸರಗೋಡು ಕನ್ನಡ ಭವನದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉದ್ಘಾಟನೆ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಾಸರಗೋಡಿನ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಸ್ಥಾಪಕ ಅಧ್ಯಕ್ಷೆ ಡಾ. ವಾಣಿಶ್ರೀ ಕಾಸರಗೋಡು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಯುವ ಪ್ರತಿಭೆಗಳನ್ನು ಸಮಾಜದ ಮುಂದೆ ಅನಾವರಣ ಗೊಳಿಸುವುದೇ ಸಂಸ್ಥೆಯ ಯೋಜನೆ. ಯುವ ಪ್ರತಿಭೆಗಳಲ್ಲಿ ಕನ್ನಡತನ, ಕನ್ನಡ ಸಂಸ್ಕೃತಿ ಮೂಡಿಸುವುದೇ, ಸಂಸ್ಥೆಯ ಗುರಿ, ಇದಕ್ಕಾಗಿ ಸಂಸ್ಥೆಯು ಸರ್ವ ಸಮರ್ಪಣಾ ಭಾವದಲ್ಲಿ ಮುನ್ನಡೆಯಲಿದೆ ಎಂದು ಕಾಸರಗೋಡಿನ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಸ್ಥಾಪಕ ಅಧ್ಯಕ್ಷೆ ಡಾ. ವಾಣಿಶ್ರೀ ಕಾಸರಗೋಡು ಹೇಳಿದ್ದಾರೆ.

ಮಂಗಳೂರಿನಲ್ಲಿ ಭಾನುವಾರ, ಡಾ. ವಾಮನ್ ರಾವ್ ಬೇಕಲ್ ಸಾರಥ್ಯದ ಕಾಸರಗೋಡು ಕನ್ನಡ ಭವನದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉದ್ಘಾಟನೆ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕನ್ನಡ ಭುವನೇಶ್ವರಿ ಭಾವಚಿತ್ರಕ್ಕ ಹಾರಾರ್ಪಣೆ ಮಾಡಿ, ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭವನ ರೂವಾರಿ ಡಾ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ಭವನ ಪ್ರಕಾಶಾನದ, ರೂವಾರಿ ಸಂಧ್ಯಾರಾಣಿ ಟೀಚರ್, ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ರೇಖಾ ಸುದೇಶ್ ರಾವ್, ಕನ್ನಡ ಭವನ ಕಾಸರಗೋಡು ಗೌರವ ಅಧ್ಯಕ್ಷ ಪ್ರದೀಪ್ ಬೇಕಲ್, ದ.ಕ. ಜಿಲ್ಲಾ ಘಟಕ ಕಾರ್ಯಧ್ಯಕ್ಷ ಉಮೇಶ್ ರಾವ್ ಕುಂಬಳೆ, ದ. ಕ. ಜಿಲ್ಲಾ ಗೌರವ ಅಧ್ಯಕ್ಷ ಡಾ. ರವೀಂದ್ರ ಜೆಪ್ಪು, ಸಂಘಟನಾ ಕಾರ್ಯದರ್ಶಿ ರಾಜೇಶ್ ಕೋಟೆಕಣಿ, ಕಾರ್ಯದರ್ಶಿ ವಸಂತ್ ಕೆರೆಮನೆ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ನಾಯ್ಕ್ ನಾಗರಕಟ್ಟೆ, ಪ್ರಜ್ವಲ್ ನಾಯ್ಕ್, ಮುಂತಾದವರಿದ್ದರು. ನಂತರ ಜಿಲ್ಲಾ, ರಾಜ್ಯಮಟ್ಟದ ನುರಿತ ಕಲಾವಿದರ ಕೂಡುವಿಕೆಯಿಂದ ಸಾಹಿತ್ಯ ಗಾನ ನೃತ್ಯ ವೈಭವ ನಡೆಯಿತು. ಸಂಸ್ಥೆಯ ಅಧ್ಯಕ್ಷ ಡಾ. ವಾಣಿಶ್ರೀ ಅವರು ಸಾಹಿತ್ಯ ಪ್ರಸ್ತುತಿ ನೆರವೇರಿಸಿದರು. ವಿನೋದ್ ಆಚಾರ್ಯ ಪುತ್ತೂರು ಸಮಗ್ರ ನಿರೂಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಅಪ್ರತಿಮ ಕಲಾವಿದರಾದ ವಿನೋದ್ ಆಚಾರ್ಯ ಪುತ್ತೂರು, ಸಾಕ್ಷಿ ಗುರುಪುರ, ಸಾನ್ವಿ ಗುರುಪುರ, ಐಶ್ವರ್ಯ ಮಂಗಳೂರು, ನಕ್ಷತ್ರ ಮಂಗಳೂರು, ಸುಧೀಷ್ಣ ಕಟೀಲು,ಅಭೀಷ್ಣ ಕಟೀಲು, ನಿತ್ಯ, ಕೃತಿ, ಸಾದ್ವಿನಿ ಮುಂತಾದ ಕಲಾವಿದರು ಭಾಗವಹಿಸಿದರು. ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು.

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್