ಹಿಂದೂ ಸನತಾನದ ಧರ್ಮದ ಅಧ್ಯಯನಕ್ಕೆ ಉಪನಿಷತ್ ಅತ್ಯಗತ್ಯ : ಡಾ. ರವಿಪ್ರಕಾಶ್

KannadaprabhaNewsNetwork |  
Published : Sep 13, 2024, 01:31 AM IST
ಫೋಟೋ: ೧೧ಪಿಟಿಆರ್-ಬುಕ್ ರಿಲೀಸ್ವಿಶ್ರಾಂತ ಪ್ರಾಧ್ಯಾಪಕ ಡಾ.ವಿಷ್ಣು ಭಟ್ ಎರಡು ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು | Kannada Prabha

ಸಾರಾಂಶ

ವಿಶ್ರಾಂತ ಪ್ರಾಂಶುಪಾಲ ಪ್ರೊ.ಡಾ.ಎನ್. ಪರಮೇಶ್ವರ ಭಟ್ ಅವರು ಅದ್ವೇತ ಮತ್ತು ಇತರ ಹತ್ತು ಲೇಖನಗಳು ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಉಪನಿಷತ್ತುಗಳನ್ನು ವೇದಾಂತ ಎಂದು ಕರೆಯುತ್ತಾರೆ. ಹಿಂದೂ ಸನತಾನದ ಧರ್ಮದ ಅಧ್ಯಯನಕ್ಕೆ ಉಪನಿಷತ್ ಬಹಳ ಅತ್ಯಗತ್ಯ. ಈ ನೆಲೆಯಲ್ಲಿ ಡಾ. ವಿಷ್ಣು ಭಟ್ ಅವರ ಕೃತಿಗಳು ಮೌಲಿಕವಾದದ್ದು ಎಂದು ವೈದ್ಯ ಡಾ. ರವಿಪ್ರಕಾಶ್ ಅವರು ಹೇಳಿದರು.

ಕನ್ನಡಕ್ಕೆ ಅನುವಾದಗೊಂಡ ಡಾ.ಕೆ ವಿಷ್ಣುಭಟ್ ಅವರ ಮಾಂಡೂಕ್ಯೋಪನಿಷದ್ - ಗೌಡಪಾದಕಾರಿಕಾ ಪುಸ್ತಕ ಮತ್ತು ಅದ್ವೈತ ಮತ್ತು ಇತರ ಹತ್ತು ಲೇಖನಗಳನ್ನೊಳಗೊಂಡ ಪುಸ್ತಕಗಳು ಸೋಮವಾರ ರೋಟರಿ ಮನೀಷಾ ಸಭಾಂಗಣದಲ್ಲಿ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ ನೇತೃತ್ವದಲ್ಲಿ ನಡೆದ ಬಿಡುಗಡೆ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿರಿಯ ಸಾಹಿತಿ ಪ್ರೊ.ವಿ.ಬಿ. ಅರ್ತಿಕಜೆ ಅವರು ಮಾಂಡೊಕ್ಯೋಪನಿಷದ್ - ಗೌಡಪಾದಕಾರಿಕಾ (ಕನ್ನಡ ಭಾಷಾಂತರ) ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ ಡಾ ವಿಷ್ಣು ಭಟ್ ಅವರು ಶೈಕ್ಷಣಿಕವಾಗಿ ಗಳಿಸಿದ ಪದವಿಗಳೇ ಸಾಕಷ್ಟಿರುವುದರಿಂದ ಅವರು ಕೇವಲ ವಿಷ್ಣುವಲ್ಲ ಮಹಾವಿಷ್ಣು, ಅವರೊಬ್ಬ ಅದ್ಭುತ ಶಕ್ತಿ ಎಂದು ಹೇಳಿ ಅವರ ಕೃತಿಯನ್ನು ಪದ್ಯದ ರೂಪದಲ್ಲಿ ವಿವರಣೆ ನೀಡಿದರು. ಪುಸ್ತಕ ಸಣ್ಣದು ಆದರೆ ಅದರ ಒಳಗಿರುವ ಮೌಲ್ಯ ಬಹಳ ದೊಡ್ಡದು ಎಂದರು.

ವಿಶ್ರಾಂತ ಪ್ರಾಂಶುಪಾಲ ಪ್ರೊ.ಡಾ.ಎನ್. ಪರಮೇಶ್ವರ ಭಟ್ ಅವರು ಅದ್ವೇತ ಮತ್ತು ಇತರ ಹತ್ತು ಲೇಖನಗಳು ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಪುಸ್ತಕದ ಅನುವಾದಕ ಮತ್ತು ಕೃತಿಕಾರ ಡಾ. ವಿಷ್ಣು ಭಟ್ ಮಾತನಾಡಿ ಮಾಂಡೂಕ್ಯೋಪನಿಷದ್ ಅಲೌಕಿಕ ಪುಸ್ತಕ. ಶಂಕರಾಚಾರ್ಯರ ಗುರುವಿನ ಗುರು ಗೌಡಪಾದೀಯಕಾರಿಕಾರು. ಓಂ ಕಾರದ ಮಹತ್ವ ಮಾಂಡೂಕ್ಯೋಪನಿಷದ್‌ನಿಂದ ತಿಳಿಯಬಹುದು. ಅದೇ ರೀತಿ ಅನೇಕ ಸಂದರ್ಭದಲ್ಲಿ ಗುರು ಹಿರಿಯರ ಮಾರ್ಗದರ್ಶನ ಮತ್ತು ಅನುಭವಗಳು ದಾರಿ ದೀಪವಾಗಬಲ್ಲದು ಎಂದು ಚಿಂತನೆಗಳನ್ನು ಸಮಾಜದೊಂದಿಗೆ ಹಂಚಿಕೊಳ್ಳಲು ಅದ್ವೈತ ಮತ್ತು ಹತ್ತು ಲೇಖನಗಳನ್ನು ಬರೆದಿದ್ದೇನೆ ಎಂದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಸೂರ್ಯನಾಥ ಆಳ್ವ, ಮುರಳಿಶ್ಯಾಮ್ ಮತ್ತು ಶಶಿಧರ್ ಕಿನ್ನಿಮಜಲು, ನ್ಯಾಯವಾದಿ ದಿವಾಕರ ನಿಡ್ವಣ್ಣಾಯ, ಭಾರವಿ ಭಟ್, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಕಾರ್ಯದರ್ಶಿ ವಸಂತ ಜಾಲಾಡಿ, ಕರ್ನಲ್ ಜಿ.ಡಿ. ಭಟ್, ಬೂಡಿಯಾರು ರಾಧಾಕೃಷ್ಣ ರೈ, ಕೆ.ಆರ್. ಶೆಣೈ, ಪ್ರೊ. ಹರಿನಾರಾಯಣ ಮಾಡಾವು, ರಾಜೇಶ್ ಪವರ್ ಪ್ರೆಸ್‌ನ ಎಂ.ಎಸ್. ರಘುನಾಥ ರಾವ್, ಡಾ.ಎಚ್.ಜಿ. ಶ್ರೀಧರ್, ಡಾ. ಶ್ರೀಶಕುಮಾರ್, ಮಧುರಕಾನ ಗಣಪತಿ ಭಟ್, ಮಲ್ಲಿಕಾ ಜೆ. ರೈ, ಜಯಂತ ನಡುಬೈಲು, ಅಬ್ಬಾಸ್ ಮುರ, ಉದಯ ನಾಯಕ್, ಉದ್ಯಮಿ ವಿಶ್ವನಾಥ ನಾಯಕ್, ಡಾ. ವಿಜಯಸರಸ್ವತಿ, ಕಜೆ ಗೋವಿಂದಪ್ರಸಾದ್ ಸಹಿತ ಕೃತಿಕಾರ ಡಾ. ವಿಷ್ಣು ಭಟ್ ಕುಟುಂಬಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ಬಡಾವಣೆಯ ಸಂತ್ರಸ್ತ 12 ಕುಟುಂಬಕ್ಕೆ ಮನೆ ಹಂಚಿದ ರಾಜ್ಯ ಸರ್ಕಾರ
ಹಾಲ್‌ ಟಿಕೆಟ್‌ ಸಿಗದೆ 25 ವಿದ್ಯಾರ್ಥಿಗಳು ಪರೀಕ್ಷೆ ವಂಚಿತ