ಹುಲಗೂರ ವಿದ್ಯುತ್‌ ಸಂಪರ್ಕ ಮಾರ್ಗ ಉನ್ನತೀಕರಣ-ಅಜ್ಜಂಪೀರ ಖಾದ್ರಿ

KannadaprabhaNewsNetwork |  
Published : Jan 25, 2026, 02:45 AM IST
ಶಿಗ್ಗಾಂವಿ ತಾಲೂಕಿನ ಹುಲಗೂರ ಗ್ರಾಮದ ೩೩ ಕೆವಿ ಗ್ರಿಡ್‌ ವಿದ್ಯುತ್ ಸಂಪರ್ಕ ಜಾಲದ ಉನ್ನತಿಕರಣದ ಕಾಮಗಾರಿಗೆ ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. | Kannada Prabha

ಸಾರಾಂಶ

ಹುಲಗೂರ ಭಾಗದ ಜನರಿಗೆ ಗುಣಮಟ್ಟದ ವಿದ್ಯುತ್ ನೀಡುವ ಉದ್ದೇಶದಿಂದ ಸುಮಾರು ೪ ಕೋಟಿ ವೆಚ್ಚದಲ್ಲಿ ಹುಲಗೂರಿನ ೩೩ ಕೆವಿ ಗ್ರಿಡ್‌ ವಿದ್ಯುತ್ ಸಂಪರ್ಕ ಮಾರ್ಗವನ್ನು ಉನ್ನತಿಕರಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಎಸ್. ಖಾದ್ರಿ ಹೇಳಿದರು.

ಶಿಗ್ಗಾಂವಿ: ಹುಲಗೂರ ಭಾಗದ ಜನರಿಗೆ ಗುಣಮಟ್ಟದ ವಿದ್ಯುತ್ ನೀಡುವ ಉದ್ದೇಶದಿಂದ ಸುಮಾರು ೪ ಕೋಟಿ ವೆಚ್ಚದಲ್ಲಿ ಹುಲಗೂರಿನ ೩೩ ಕೆವಿ ಗ್ರಿಡ್‌ ವಿದ್ಯುತ್ ಸಂಪರ್ಕ ಮಾರ್ಗವನ್ನು ಉನ್ನತಿಕರಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಎಸ್. ಖಾದ್ರಿ ಹೇಳಿದರು. ತಾಲೂಕಿನ ಹುಲಗೂರ ಗ್ರಾಮದಲ್ಲಿ ಸವಣೂರಿನ ೨೨೦ ಕೆ.ವಿ ಗ್ರಿಡ್‌ನಿಂದ ಹುಲಗೂರಿನ ೩೩ ಕೆ.ವಿ ಗ್ರಿಡ್‌ಗೆ ಇರುವ ವಿದ್ಯುತ್ ಅಂತರ ಸಂಪರ್ಕ ಜಾಲದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಾನು ಶಾಸಕನಾಗುವ ಪೂರ್ವದಲ್ಲಿ ಈ ಭಾಗದ ಜನ ವಿದ್ಯುತ್ ಕೊರತೆಯನ್ನು ಅನುಭವಿಸುತ್ತಿದ್ದರು. ೨೦೧೩ರಲ್ಲಿ ಶಾಸಕನಾದಾಗ ಹುಲಗೂರಿಗೆ ೩೩ ಕೆವಿ ಗ್ರಿಡ್ ಮಾಡಿ ಜನರ ಕತ್ತಲನ್ನು ಓಡಿಸಲಾಯಿತು. ಗ್ರಾಮಗಳು ಬೆಳೆದಂತೆ ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದು, ಈ ಹಳೆಯ ಸಂಪರ್ಕ ಜಾಲದ ಮೂಲಕ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಗಳು ಆಗುತ್ತಿರುವುದರಿಂದ ಈ ಕಾಮಗಾರಿ ಮಾಡಲಾಗುತ್ತಿದೆ ಎಂದರು.

ವಿದ್ಯುತ್ ಸಂಪರ್ಕ ಜಾಲದಿಂದ ೯ ಪಂಚಾಯಿತಿಯ ಸುಮಾರು ೨೫ಕ್ಕೂ ಹೆಚ್ಚಿನ ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸುವ ಮೂಲಕ ನಮ್ಮ ಪ್ರತಿಯೊಬ್ಬ ಗೃಹಜ್ಯೋತಿ ಬಳಕೆದಾರರಿಗೆ ನಿರಂತರ ವಿದ್ಯುತ್ ನೀಡಲಾಗುತ್ತದೆ. ಕಂಬಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಸಂಪರ್ಕ ಜಾಲದ ಎತ್ತರವನ್ನು ಹೆಚ್ಚಿಸಿ ಹೊಲಗಳಲ್ಲಿ ರೈತರಿಗಾಗುತ್ತಿದ್ದ ಸಮಸ್ಯೆಗಳನ್ನು ನಿವಾರಿಸಲಾಗುತ್ತಿದೆ. ಈ ಕಾಮಗಾರಿಯನ್ನು ೨೦ ದಿನಗಳಲ್ಲಿ ಮುಗಿಸುವ ಪ್ರಯತ್ನ ಮಾಡಲಾಗುತ್ತದೆ ಎಂದರು.ಹುಲಗೂರ ಭಾಗದಲ್ಲಿ ಶುದ್ಧನೀರಿನ ಘಟಕದಿಂದ ಹಿಡಿದು ಪೊಲೀಸ್ ಠಾಣೆ ಸ್ಥಾಪಿಸುವವರೆಗೆ ಅನೇಕ ಜನಪರ ಕೆಲಸಗಳನ್ನು ಅಧಿಕಾರ ಇದ್ದಾಗಲೂ ಇಲ್ಲದಿದ್ದಾಗಲು ಮಾಡುತ್ತಾ ಬಂದಿದ್ದೇನೆ. ಮಾಡಿದ ಕೆಲಸಗಳ ಬಗ್ಗೆ ನಾವೇ ಮಾತನಾಡಬಾರದು. ನಮ್ಮ ಕೆಲಸಗಳು ಮಾತನಾಡಬೇಕು ಎಂಬ ಸಿದ್ದಾಂತವನ್ನು ಪಾಲಿಸುವ ವ್ಯೆಕ್ತಿಯಾಗಿದ್ದೇನೆ ಎಂದರು.ಈ ಸಂದರ್ಭದಲ್ಲಿ ಅಬ್ದೂಲಖಾದರ ನೆರ್ತಿ, ಸಿರಾಜಹ್ಮದ ಗುಳೇದಗುಡ್ಡ, ಶಿವಾನಂದ ಸೊಬರದ, ಗುರುನಗೌಡ್ರ ಪಾಟೀಲ, ನಾಗನಗೌಡ್ರ ಪಾಟೀಲ, ನಾಗನಗೌಡ್ರ ಪೊಲೀಸಪಾಟೀಲ, ಆನಂದ ಕೆಳಗಿನಮನಿ, ರುದ್ರೇಶ ಗುಡಗೇರಿ, ಹಜರೆಸಾಬ ಕಾರಡಗಿ, ಮೌಲಾಲಿ ಶಿರಕೋಳ, ಹನುಮಂತಪ್ಪ ಬಾರಂಗಿ, ಮುಕ್ತಾರ ತಿಮ್ಮಾಪುರ ಇತರರಿದ್ದರು.ರೈತರನ್ನು ಗಮನದಲ್ಲಿ ಇಟ್ಟುಕೊಂಡು ನಮ್ಮ ಮುಖ್ಯಮಂತ್ರಿಗಳು ಮತ್ತು ಇಂಧನ ಸಚಿವರು ಹೆಸ್ಕಾಂ ವ್ಯಾಪ್ತಿಯಲ್ಲಿ ಶೀಘ್ರ ಸಂಪರ್ಕ ಯೋಜನೆಯಡಿ ೧ ಲಕ್ಷ ಉಚಿತ ಐಪಿ ಸೆಟ್‌ಗಳನ್ನು ನೀಡಲು ಮುಂದಾಗಿದ್ದಾರೆ. ಕುಸುಂ ಸಿ ಯೋಜನೆಯ ಮೂಲಕ ಸೋಲಾರ್‌ ವಿತರಿಸಲಾಗುತ್ತಿದೆ. ರೈತರು ಅಕ್ರಮ ವಿದ್ಯುತ್ ಸಂಪರ್ಕ ಪಡೆಯದೆ ಆರ್.ಆರ್ ನಂಬರ್ ಪಡೆದು ನಮ್ಮ ಸರ್ಕಾರದ ಯೋಜನೆಯ ಲಾಭ ಪಡೆಯಬೇಕು ಎಂದು ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಎಸ್‌. ಖಾದ್ರಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೆಹಲಿಯಲ್ಲಿ ಇಬ್ಬರು ಕೇಂದ್ರ ಮಂತ್ರಿಗಳ ಭೇಟಿಯಾದ ಸಿಎಂ - ಡಿಕೆ ಪಂಚ ಜಲ ಬೇಡಿಕೆ
ಶ್ಯಾಮಸುಂದರ ಹೆಗಡೆಗೆ ಸಾಧಕಶ್ರೀ ಪ್ರಶಸ್ತಿ ಪ್ರದಾನ