ಕನ್ನಡಪ್ರಭ ವಾರ್ತೆ ಘಟಪ್ರಭಾ
ಪಾಮಲದಿನ್ನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿಯಲ್ಲಿ ಜರುಗಿದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದರು. ಸಂಘ 3012 ಜನ ಸದಸ್ಯರನ್ನು ಹೊಂದಿದ್ದು, ವರ್ಷದ ಕೊನೆಗೆ ₹1,47,42,600ರಷ್ಟು ಷೇರು ಬಂಡವಾಳ ಹೊಂದಿದೆ ಎಂದರು. ವರದಿ ವಾಚನ ಮಾಡಿದ ಮುಖ್ಯಕಾರ್ಯನಿರ್ವಾಹಕ ಎ.ಎಂ. ಮದಿಹಳ್ಳಿ ಆರ್ಥಿಕ ವರ್ಷದಲ್ಲಿ ₹9,78,47000 ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ, ₹3,37,35,500 ಕೃಷಿಯೇತರ ಸಾಲ ಹೀಗೆ ಒಟ್ಟು ₹13,15,82500 ಸಾಲ ವಿತರಿಸಲಾಗಿದೆ ಎಂದರು.ಸಂಘದ ಅಧ್ಯಕ್ಷ ಬಸಪ್ಪ ಕಾವಲಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯರು, ತುಕ್ಕಾನಟ್ಟಿ ಕೃಷಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಸಂಘದ ಸದಸ್ಯರು ಇದ್ದರು. ವಿಠ್ಠಲ ಕೊಗನೂಳಿ ನಿರೂಪಿಸಿ ವಂದಿಸಿದರು.