ಯುಪಿಎಂಸಿ: ಸೈಬರ್ ಕ್ರೈಂ ಜಾಗೃತಿ ಉಪನ್ಯಾಸ

KannadaprabhaNewsNetwork |  
Published : Oct 09, 2026, 02:45 AM IST
08ಯುಪಿಎಂಸಿ | Kannada Prabha

ಸಾರಾಂಶ

ಉಡುಪಿ: ಇಲ್ಲಿನ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಸೈಬರ್ ಕ್ರೈಂ, ಸೈಬರ್ ಸೆಕ್ಯುರಿಟಿಯ ಕುರಿತಾಗಿ ಜಾಗೃತಿ ಕಾರ್ಯಕ್ರಮ ನಡೆಯಿತು.

ಉಡುಪಿ: ಇಲ್ಲಿನ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಸೈಬರ್ ಕ್ರೈಂ, ಸೈಬರ್ ಸೆಕ್ಯುರಿಟಿಯ ಕುರಿತಾಗಿ ಜಾಗೃತಿ ಕಾರ್ಯಕ್ರಮ ನಡೆಯಿತು.

ಉಡುಪಿ ನಗರ ಪೊಲೀಸ್ ಠಾಣೆಯ ಸೈಬರ್ ಕ್ರೈಮ್ ವಿಭಾಗದ ಪೊಲೀಸ್ ಕಾನ್‌ಸ್ಟೆಬಲ್ ಪವನ್ ಕುಮಾರ್ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಸೈಬರ್ ಅಪರಾಧ, ಹೂಡಿಕೆ ವಂಚನೆ, ಆನ್ಲೈನ್ ಲೋನ್, ಲೈಂಗಿಕ ದೌರ್ಜನ್ಯ, ಫಿಶಿಂಗ್ ಅಟ್ಯಾಕ್, ಕೊರಿಯರ್ ವಂಚನೆ, ಮ್ಯಾಟ್ರಿಮೋನಿಯಲ್ ವಂಚನೆ ಮಾಹಿತಿ ನೀಡಿದರು. ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಪ್ರಭಾ ಕಾಮತ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಅನುಸರಣೆ ನಿರ್ದೇಶಕಿ ಪ್ರೊ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಉದ್ಯೋಗ, ಪ್ರವೇಶಾತಿ ನಿರ್ದೇಶಕಿ ಡಾ. ಪದ್ಮಲತಾ, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಪ್ರೊ. ರಾಜೇಶ್ ಕುಮಾರ್, ಪೊಲೀಸ್ ಸಿಬ್ಬಂದಿ ಜಯಲಕ್ಷ್ಮಿ ಉಪಸ್ಥಿತರಿದ್ದರು. ಸಹಯೋಜನಾಧಿಕಾರಿ ಪ್ರೊ. ಚಂದ್ರಶೇಖರ್ ಸಂಯೋಜಿಸಿದರು. ಪ್ರಥಮ ಬಿ.ಕಾಂ. ವಿದ್ಯಾರ್ಥಿಗಳಾದ ವೈಷ್ಣವಿ ಸ್ವಾಗತಿಸಿದರು, ಸ್ವಸ್ತಿಕ್ ವಂದಿಸಿದರು, ಹರ್ಷಿತಾ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಶಾ ಸೌಹಾರ್ದ ಸೊಸೈಟಿ ನಿವ್ವಳ ಲಾಭದಲ್ಲಿ ಶೇ.35ರಷ್ಟು ಏರಿಕೆ
10ರಂದು ಮಾ ‘ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ’