ಭದ್ರಾ ಮೇಲ್ದಂಡೆ :15 ದಿನದಲ್ಲಿ ರೈತರ ಸಮಸ್ಯೆಗೆ ಪರಿಹಾರ

KannadaprabhaNewsNetwork |  
Published : Oct 12, 2026, 01:30 AM IST
ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಕೆ.ಕಣಬೂರು ಕಾಲೋನಿ ದೇವಸ್ಥಾನದ ಸಮುದಾಯ ಭವನದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ವ್ಯಾಪ್ತಿಯ ರೈತರೊಂದಿಗೆ ಶಾಸಕ ಟಿ.ಡಿ.ರಾಜೇಗೌಡ ಸಭೆ ನಡೆಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯಿಂದ ಸ್ಥಳೀಯ ರೈತರಿಗೆ ಉಂಟಾಗಿರುವ ಸಮಸ್ಯೆಗೆ ಮುಂದಿನ 15 ದಿನಗಳಲ್ಲಿ ಸೂಕ್ತ ರೀತಿ ಪರಿಹಾರ ಮಾಡಲಾಗುವುದು ಎಂದು ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.

- ಶಾಸಕ ಟಿ.ಡಿ.ರಾಜೇಗೌಡ ಭರವಸೆ । ಕೆ.ಕಣಬೂರು ಕಾಲೋನಿಯ ರೈತರ ಸಭೆಯಲ್ಲಿ ಸಮಸ್ಯೆ ಬಿಚ್ಚಿಟ್ಟ ಗ್ರಾಮಸ್ಥರು

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯಿಂದ ಸ್ಥಳೀಯ ರೈತರಿಗೆ ಉಂಟಾಗಿರುವ ಸಮಸ್ಯೆಗೆ ಮುಂದಿನ 15 ದಿನಗಳಲ್ಲಿ ಸೂಕ್ತ ರೀತಿ ಪರಿಹಾರ ಮಾಡಲಾಗುವುದು ಎಂದು ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.

ಭಾನುವಾರ ಮುತ್ತಿನಕೊಪ್ಪ ಗ್ರಾಪಂ ಕೆ.ಕಣಬೂರು ಕಾಲೋನಿ ದೇವಸ್ಥಾನದ ಸಮುದಾಯ ಭವನದಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿ ವ್ಯಾಪ್ತಿಯಲ್ಲಿ ಬರುವ ಕೆ.ಕಣಬೂರು ಕಾಲೋನಿ ಹಾಗೂ ಕುಸುಬೂರು ಗ್ರಾಮದ ದೊಡ್ಡಿನತಲೆ, ಸಾತ್ಕೋಳಿ, ಹಿರೇಗದ್ದೆ, ಹೊಸಕೊಪ್ಪ, ಕುಸುಬೂರು ಕಾಲೋನಿ, ತಾವರೆ ಘಟ್ಟದ ಗ್ರಾಮಸ್ಥರ ಸಮಸ್ಯೆ ಆಲಿಸಿ ಮನವಿ ಸ್ವೀಕಾರ ಮಾಡಿದ ನಂತರ ಮಾತನಾಡಿ 2008-09 ನೇ ಸಾಲಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪ್ರಾರಂಭವಾಗಿದೆ. ತುಂಗಾ ನದಿಯಿಂದ ಭದ್ರಾ ಹಿನ್ನೀರಿಗೆ ನೀರು ಬಿಡುವ ಯೋಜನೆಗೆ ಪ್ರಾರಂಭದಲ್ಲಿ ₹324 ಕೋಟಿ ನಿಗದಿಯಾಗಿತ್ತು. ನಂತರ ಈ ಯೋಜನೆ ಬಯಲು ಸೀಮೆ ಮೂಲಕ ತುಮಕೂರು ಜಿಲ್ಲೆ, ಚಿಕ್ಕನಾಯಕನ ಹಳ್ಳಿ ಮುಂತಾದ ಊರುಗಳಿಗೆ ನೀರು ಕೊಂಡೊಯ್ಯಲು ₹21 ಸಾವಿರದ 167 ಕೋಟಿಗೆ ಅನುಮೋದನೆ ದೊರಕಿದೆ. ಈ ವರೆಗೆ 8ಸಾವಿರ ಕೋಟಿ ನೀಡಲಾಗಿದೆ. ಈಗಾಗಲೇ ಈ ಭಾಗಕ್ಕೆ ₹15 ಕೋಟಿ ಮಂಜೂರಾಗಿದ್ದು ಇದರಲ್ಲಿ 2 ಸೇತುವೆ ಪೂರ್ಣ ಆಗಿದೆ. 1 ಸೇತುವೆ ಆಗಬೇಕಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ಮಾಡಿದ ರಸ್ತೆ ಕಳಪೆ ಕಾಮಗಾರಿಯಾಗಿದೆ ಎಂಬ ದೂರು ಬಂದಿದ್ದು ಆ ಕಾಮಗಾರಿ ಬಿಲ್ ತಡೆ ಹಿಡಿಯಲು ಸೂಚನೆ ನೀಡಿದ್ದೇನೆ ಎಂದರು.

ರೈತರ ಬೇಡಿಕೆಯಂತೆ ಕೆರೆಗಳಿಗೆ ನೀರು ತುಂಬುವುದು. ಮನೆ ಹಾನಿಗೆ ಪರಿಹಾರ, ರಸ್ತೆ ದುರಸ್ಥಿ ಬಗ್ಗೆ ನಾನು ನೀರಾವರಿ ಸಚಿವ ಚೆಲುವರಾಯ ಸ್ವಾಮಿಯೊಂದಿಗೆ ಮಾತನಾಡುತ್ತೇನೆ. ಸದ್ಯಕ್ಕೆ ಪ್ರತಿಭಟನೆ ಕೈ ಬಿಡಿ ಎಂದರು. ಇದೇ ಸಂದರ್ಭದಲ್ಲಿ ರೈತರ ಪರವಾಗಿ ಸ್ಥಳೀಯ ಮುಖಂಡ ಎಚ್.ಎಸ್. ರವಿಕುಮಾರ್ ಶಾಸಕ ಟಿ.ಡಿ.ರಾಜೇಗೌಡರಿಗೆ ಮನವಿ ಅರ್ಪಿಸಿದರು.

ವೇದಿಕೆಯಲ್ಲಿ ಜಿಪಂ ಮಾಜಿ ಸದಸ್ಯರಾದ ಪಿ.ಆರ್.ಸದಾಶಿವ, ಬಿ.ಎಸ್.ಸುಬ್ರಮಣ್ಯ, ಕೊಪ್ಪ ಎಪಿಎಂಸಿ ಅಧ್ಯಕ್ಷ ಎಸ್.ಡಿ. ರಾಜೇಂದ್ರ,ಮುತ್ತಿನಕೊಪ್ಪ ಗ್ರಾಪಂ ಮಾಜಿ ಉಪಾಧ್ಯಕ್ಷ ನರೇಂದ್ರ, ಭದ್ರಾ ಮೇಲ್ದಂಡೆ ಯೋಜನೆ ಬಿ.ಆರ್.ಪಿ ಕಚೇರಿ ಅಧೀಕ್ಷಕ ಎಂಜಿನಿಯರ್ ಕವಿತ, ಎಕ್ಷ್ಯೂಟೀವ್ ಎಂಜಿನಿಯರ್ ಮಂಜುಳಾ, ಮುತ್ತಿನಕೊಪ್ಪ ಕಚೇರಿ ಸಹಾಯಕ ಕಾರ್ಯ ಪಾಲಕ ಶಿವಮೂರ್ತಿ, ಸಹಾಯಕ ಎಂಜಿನಿಯರ್ ಅಕ್ಷಯ್ ಇದ್ದರು.

-- ಬಾಕ್ಸ್--

ಭದ್ರಾ ಮೇಲ್ದಂಡೆ ಯೋಜನೆಯಿಂದ ಕೆ.ಕಣಬೂರು ಕಾಲೋನಿ ಹಾಗೂ ಕುಸುಬೂರು ಗ್ರಾಮದ ವಿವಿಧ ಹಳ್ಳಿಗಳಲ್ಲಿ ಉಂಟಾದ ಸಮಸ್ಯೆಗಳನ್ನು ಸಭೆಯಲ್ಲಿ ಗ್ರಾಮಸ್ಥರು ಅನಾವರಣಗೊಳಿಸಿದರು.

1. ತುಂಗಾ ನದಿಯಿಂದ ಭದ್ರಾ ಡ್ಯಾಂ ನೀರು ಬಿಡುವ ಭದ್ರಾ ಮೇಲ್ದಂಡೆ ಯೋಜನೆಯಡಿ ಮುತ್ತಿನಕೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿ ಅಂದಾಜು 8 ಕಿ.ಮೀ.ದೂರದವರೆಗೆ 60 ಅಡಿ ಆಳ, 120 ಅಡಿ ಅಗಲದ ಚಾನಲ್. ಇದರಿಂದ ಲಕ್ಷಾಂತರ ಮರಗಳು ಹಾಳಾಗಿದ್ದು ಜಲಮೂಲ ಕ್ಷೀಣ

2. ಬಂಡೆ ಬ್ಲಾಸ್ಟ್ ನಿಂದ ಹಾನಿಯಾಗಿದ್ದ 50 ಮನೆಗಳಿಗೆ ಈವರೆಗೂ ಪರಿಹಾರ ನೀಡಿಲ್ಲ. ತಕ್ಷಣ ಪರಿಹಾರಕ್ಕೆ ಒತ್ತಾಯ.

3. ತುಂಗಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ಬತ್ತಿ ಹೋದ 15 ಕೆರೆಗಳಿಗೆ ನೀರು ತುಂಬಿಸಬೇಕು. ಕೆರೆ ಹೂಳೆತ್ತಬೇಕು. 9 ಬೋರ್ ವೆಲ್ ಬತ್ತಿವೆ.

4. ಭದ್ರಾ ಮೇಂಲ್ದಂಡೆ ಯೋಜನೆ ಕಾಮಗಾರಿಗಾಗಿ ಸಂಚರಿಸಿದ ಬಾರೀ ಗಾತ್ರದ ವಾಹನಗಳಿಂದ ಸಂಪೂರ್ಣ ಹಾಳಾದ ರಸ್ತೆ ಕಾಂಕ್ರೀಟ್ ಹಾಕಿಸಲು ಆಗ್ರಹ.

5. ಕೆರೆಗೆ ನೀರು ತುಂಬಿಸಲು ಅಗತ್ಯವಾದ ಪೈಪ್‌ಲೈನ್ ಮಾಡಿಸಲು ಮನವಿ

6. ಭದ್ರಾ ಮೇಲ್ದಂಡೆ ಯೋಜನೆ ಕಾಲುವೆಯಿಂದ ಹಾಳಾದ ದೇವಸ್ಥಾನದ ಜೀರ್ಣೋದ್ದಾರಕ್ಕೆ ಅನುದಾನ ಬಿಡುಗಡೆ ಕೋರಿಕೆ

-- ಬಾಕ್ಸ್ --

ಧರಣಿಗೆ ಬೆಂಬಲ

ನಿಮ್ಮ ಬೇಡಿಕೆಗೆ ಸಂಬಂಧಪಟ್ಟವರು ಸ್ಪಂದಿಸದಿದ್ದರೆ ನಿಮ್ಮ ಜೊತೆ ನಾನು ಹಾಗೂ ಶೃಂಗೇರಿ ಕ್ಷೇತ್ರದ ಎಲ್ಲಾ ರೈತರನ್ನು ಕರೆದುಕೊಂಡು ಬಂದು ಚಾನಲ್ ಪಂಪ್ ಹೌಸ್ ಹತ್ತಿರ ಧರಣಿ ಕೂರುತ್ತೇನೆ ಎಂದು ಶಾಸಕ ಟಿ.ಡಿ.ರಾಜೇಗೌಡ ಘೋಷಣೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮ, ಸಂಸ್ಕೃತಿಯ ಏಕತೆ ಪರಂಪರೆಯೇ ದಸರಾ: ಸುರೇಶ್‌ ಋಗ್ವೇದಿ
ಜಿಪಂ ಚುನಾವಣೆ: ಶಿವರಾತ್ರೀಶ್ವರ ಜಯಂತಿಗೆ ಅಡ್ಡಿ