ಕ್ಷುಲ್ಲಕ ಕಾರಣಕ್ಕೆ ಮೇಲ್ಜಾತಿಯ ಯುವಕರಿಂದ ಥಳಿತ

KannadaprabhaNewsNetwork |  
Published : Oct 03, 2023, 06:06 PM IST
ಫೋಟೋ 2ಪಿವಿಡಿ1ಪಾವಗಡ,ತಾಲೂಕಿನ ಸಿಂಗರೆಡ್ಡಿಹಳ್ಳಿಯಲ್ಲಿ ಕ್ಷುಲಕ್ಕ ಕಾರಣಕ್ಕಾಗಿ ಗಲಾಟೆ,ಮೇಲ್ಜಾತಿಯ ಯುವಕರ ಗುಂಪು ಹೊಡೆದ ಪರಿಣಾಮ,ಪತಿ ಹನುಮಂತರಾಯಪ್ಪ ಹಾಗೂ ಪತ್ನಿ ಕಮಲಮ್ಮರಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು     | Kannada Prabha

ಸಾರಾಂಶ

ಕ್ಷುಲ್ಲಕ ಕಾರಣಕ್ಕೆ ಮೇಲ್ಜಾತಿಯ ಯುವಕರಿಂದ ಥಳಿತದಲಿತ ದಂಪತಿಗೆ ಗಂಭೀರ ಗಾಯ ವೈ.ಎನ್‌.ಹೊಸಕೋಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು

ದಲಿತ ದಂಪತಿಗೆ ಗಂಭೀರ ಗಾಯ ವೈ.ಎನ್‌.ಹೊಸಕೋಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಕನ್ನಡಪ್ರಭ ವಾರ್ತೆ ಪಾವಗಡ ಕ್ಷುಲಕ ಕಾರಣದ ಹಿನ್ನಲೆಯಲ್ಲಿ ಮೇಲ್ಜಾತಿಯ ಕೆಲ ಯುವಕರ ಗುಂಪು ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ದಲಿತ ಕುಟುಂಬಕ್ಕೆ ಸೇರಿದ್ದ ಪತಿ ಹಾಗೂ ಪತ್ನಿಗೆ ಗಂಭೀರ ಗಾಯಗಳಾಗಿ ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ತಾಲೂಕಿನ ಸಿಂಗರೆಡ್ಡಿ ಹಳ್ಳಿ ಗ್ರಾಮದಲ್ಲಿ ನಡೆದಿದೆ. ಪತಿ ಹನುಮಂತರಾಯಪ್ಪ ಹಾಗೂ ಇವರ ಪತ್ನಿ ಕಮಲಮ್ಮ ತೀವ್ರ ಥಳಿತದಿಂದ ಗಂಭೀರ ಗಾಯಗೊಂಡವರು. ಪಾವಗಡ ತಾಲೂಕು ವೈ.ಎನ್‌. ಹೊಸಕೋಟೆ ಹೋಬಳಿ ವ್ಯಾಪ್ತಿಯ ಸಿಂಗರೆಡ್ಡಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕ್ಷುಲ್ಲಕ ಕಾರಣದ ವಿಚಾರವಾಗಿ ಹನುಮಂತರಾಯಪ್ಪ ದಂಪತಿ ಮೇಲ್ಜಾತಿಯ ವ್ಯಕ್ತಿಯೊಬ್ಬರಿಗೆ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೆಂಡಮಂಡಲರಾದ ಆ ವ್ಯಕ್ತಿ, ಪಕ್ಕದ ಗ್ರಾಮದ ಯುವಕರ ಗುಂಪೊಂದಕ್ಕೆ ಪ್ರೇರೇಪಿಸಿದ್ದ ಹಿನ್ನಲೆಯಲ್ಲಿ ಭಾನುವಾರ ರಾತ್ರಿ ನಾಲೈದು ಮಂದಿ ಯುವಕರ ಗುಂಪು ಆ ಮನೆಗೆ ನುಗ್ಗಿ, ವಿನಾಕಾರಣ ಕ್ಯಾತೆ ತೆಗೆದು ಗಲಾಟೆ ಮಾಡಿದ್ದಾರೆನ್ನಲಾಗಿದೆ. ಈ ವೇಳೆ ದೌರ್ಜನ್ಯವೆಸಗಿ, ದೊಣ್ಣೆಗಳಿಂದ ಹೊಡೆದು ಹಲ್ಲೆ ನಡೆಸಿದ ಪರಿಣಾಮ ಹನುಮಂತರಾಯಪ್ಪ ಹಾಗೂ ಇವರ ಪತ್ನಿ ಕಮಲಮ್ಮರಿಗೆ ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಯುವಕರ ಗುಂಪಿನ ಹಲ್ಲೆ ತಾಳದೇ ನೋವಿನಿಂದ ಕಿರಾಡಿದಾಗ ಅಕ್ಕಪಕ್ಕದ ಕೆಲ ಸಾರ್ವಜನಿಕರು ಆಗಮಿಸಿ ಗಲಾಟೆ ತಿಳಿಗೊಳಿಸಿದ್ದು, ಗಂಭೀರ ಗಾಯದಿಂದ ನರಳಾಡುತ್ತಿದ್ದ ಪತಿಪತ್ನಿಯನ್ನು ಕೂಡಲೇ ತುರ್ತುವಾಹನದಲ್ಲಿ ಕರೆದ್ಯೂಯ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ದಲಿತ ಪರ ಸಂಘಟನೆಗಳ ಸಹಕಾರದ ಮೇರೆಗೆ ಹಲ್ಲೆ ಜಾತಿ ನಿಂಧನೆಗೆ ಸಂಬಂಧಪಟ್ಟಂತೆ ಘಟನೆ ಕುರಿತು ದಾಖಲೆ ಸಮೇತ, ವೈ.ಎನ್‌. ಹೊಸಕೋಟೆ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದು, ಘಟನೆ ಕುರಿತು ಸಮಗ್ರ ಮಾಹಿತಿ ಪಡೆದು ವೃತ್ತ ಇನ್ಸ್‌ಪೆಕ್ಟರ್‌ ಘಟನೆಯಲ್ಲಿ ಭಾಗಿಯಾಗಿ ಹಲ್ಲೆ ನಡೆಸಿದ ನಾಲ್ವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದರ ಬೆನ್ನಲೇ ಇಲ್ಲಿನ ದಲಿತ ಪರ ಸಂಘಟನೆಗಳ ಆನೇಕ ಮುಖಂಡರು ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿಸ್ಥರ ವಿರುದ್ಧ ಕಾನೂನು ರೀತ್ಯ ಕ್ರಮ ಜರಿಗಿಸಬೇಕು. ದಲಿತ ಮೇಲೆ ನಡೆಸುವ ದೌರ್ಜನ್ಯ ತಡೆಯಬೇಕು. ಕ್ಷುಲ್ಲಕ ಕಾರಣಕ್ಕಾಗಿ ಮಾರಣಾಂತಿಕ ಹಲ್ಲೆ ನಡೆಸಿದ್ದು ಸೂಕ್ತವಲ್ಲ. ಇಂತಹ ಘಟನೆಗಳ ತಾಲೂಕಿನಲ್ಲಿ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ, ಹೆಚ್ಚುವರಿ ಪೊಲೀಸ್‌ ಇಲಾಖೆಗೆ ಮನವಿ ಮಾಡಿದ್ದಾರೆ. ದಲಿತ ಸಂಘರ್ಷ ಸಮಿತಿ ತಾ. ಸಂಚಾಲಕ ಮೀನಗುಂಟೆನಹಳ್ಳಿ ನರಸಿಂಹಪ್ಪ, ಮುಖಂಡರಾದ ಕತಿಕ್ಯಾತನಹಳ್ಳಿಯ ನಾರಾಯಣಪ್ಪ, ದಳವಾಯಿಹಳ್ಳಿಯ ರಾಮಾಂಜಿನಪ್ಪ ಮತ್ತಿತರರು ಠಾಣೆಗೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದರು. - - - 2ಪಿವಿಡಿ1 ಪಾವಗಡ ತಾಲೂಕಿನ ಸಿಂಗರೆಡ್ಡಿಹಳ್ಳಿಯಲ್ಲಿ ಕ್ಷುಲಕ್ಕ ಕಾರಣಕ್ಕಾಗಿ ಗಲಾಟೆ, ಮೇಲ್ಜಾತಿಯ ಯುವಕರ ಗುಂಪು ಹೊಡೆದ ಪರಿಣಾಮ ಪತಿ ಹನುಮಂತರಾಯಪ್ಪ ಹಾಗೂ ಪತ್ನಿ ಕಮಲಮ್ಮರಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲಾಗಿರುವುದು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ