ಉಪ್ಪಿನಂಗಡಿ: ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ೮ನೇ ತರಗತಿಯ ವಿದ್ಯಾರ್ಥಿ ಗವಿನ್ ರೇಶಿಮೆ ಯವರು ವಿಜ್ಞಾನ ಮಾದರಿ ತಯಾರಿಯಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಡಾ. ಪಲ್ಲತ್ತಡ್ಜ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ (ರಿ) ಮಣಿಪಾಲ ಇವರು ನೀಡುವ ಪ್ರಮ ಅವಾರ್ಡ್ ೨೦೨೬ ಪ್ರಶಸ್ತಿಯನ್ನಿತ್ತು ಗೌರವಿಸಲಾಯಿತು. ಮಣಿಪಾಲ ಡಾಟ್ ನೆಟ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಜೇನುಗೂಡಿನೊಳಗಿನ ವಿದ್ಯಾಮಾನವನ್ನು ತಿಳಿಯಲು ಪರಿಸರ ಸ್ನೇಹಿ ಸಾಧನವನ್ನು ಸಂಶೋಧಿಸಿರುವುದಲ್ಲದೆ, ಶಾಲಾ ಪರಿಸರದಲ್ಲಿನ ಜೇನುಗೂಡುಗಳನ್ನು ಯಾವುದೇ ಜೇನು ನೊಣಗಳಿಗೆ ಹಾನಿಯಾಗದಂತೆ ಸ್ಥಳಾಂತರಿಸಿದ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟ್ರಸ್ಟ್ ಮುಖ್ಯಸ್ಥರು ಉಪಸ್ಥಿತರಿದ್ದರು.