೨೦೨೫ರ ಮೇನಲ್ಲಿ ಊರಮ್ಮದೇವಿ ಜಾತ್ರೆ

KannadaprabhaNewsNetwork |  
Published : May 20, 2024, 01:30 AM IST
ಕೂಡ್ಲಿಗಿ ಪಟ್ಟಣದ ಗ್ರಾಮದೇವತೆ ಊರಮ್ಮ ದೇವಿ ದೇವಸ್ಥಾನದ ಬಳಿ ನೂತನ ದೇವಸ್ಥಾನ ಉದ್ಘಾಟನೆ ಹಾಗೂ ಜಾತ್ರೆಯ ಕುರಿತು  ನಡೆದ ಪೂರ್ವಭಾವಿ ಸಭೆಯಲ್ಲಿ ದೇವಸ್ಥಾನದ ಮುಖ್ಯಸ್ಥ ಕೆ.ಎಚ್.ವೀರನಗೌಡ ಮಾತನಾಡಿದರು. | Kannada Prabha

ಸಾರಾಂಶ

ಬಾಕಿ ಉಳಿದಿರುವ ಕಂಪೌಂಡ್ ನಿರ್ಮಾಣ ಸೇರಿ ನಾನಾ ಕಾಮಗಾರಿಗೆ ಸಂಪನ್ಮೂಲ ಕ್ರೋಡೀಕರಣವಾಗಬೇಕಿದೆ.

ಕೂಡ್ಲಿಗಿ: ಪಟ್ಟಣದ ಗ್ರಾಮದೇವತೆ ಊರಮ್ಮದೇವಿಯ ನೂತನ ದೇವಸ್ಥಾನ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದ್ದು, ಶ್ರಾವಣ ಮಾಸದಲ್ಲಿ ದೇವಸ್ಥಾನ ಉದ್ಘಾಟನೆ ಹಾಗೂ ಮುಂದಿನ ವರ್ಷದ ಮೇ ತಿಂಗಳಲ್ಲಿ ಅದ್ಧೂರಿಯಾಗಿ ಜಾತ್ರೆ ನಡೆಸಲು ದೈವಸ್ಥರು ತೀರ್ಮಾನಿಸಿದರು.ಪಟ್ಟಣದ ಊರಮ್ಮದೇವಿ ದೇವಸ್ಥಾನದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲೂ ಎಲ್ಲರಿಂದ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು. ಅಂದಾಜು ₹೨ಕೋಟಿಗೂ ಹೆಚ್ಚಿನ ವೆಚ್ಚದಲ್ಲಿ ನೂತನ ದೇವಸ್ಥಾನ ನಿರ್ಮಾಣಗೊಳ್ಳುತ್ತಿದೆ. ಬಾಕಿ ಉಳಿದಿರುವ ಕಂಪೌಂಡ್ ನಿರ್ಮಾಣ ಸೇರಿ ನಾನಾ ಕಾಮಗಾರಿಗೆ ಸಂಪನ್ಮೂಲ ಕ್ರೋಡೀಕರಣವಾಗಬೇಕಿದೆ ಎಂದು ದೇವಸ್ಥಾನ ಮುಖ್ಯಸ್ಥ ಕೆ.ಎಚ್. ವೀರನಗೌಡ ಹೇಳಿದರು.

ಮುಂದಿನ ವರ್ಷ ನಡೆಯುವ ಜಾತ್ರೆಯ ಖರ್ಚಿಗೆ ಎಲ್ಲ ವಾರ್ಡ್ ಗಳಲ್ಲೂ ದೇಣಿಗೆ ಸಂಗ್ರಹಿಸುವ ಕಾರ್ಯ ಮಾಡಬೇಕು ಎಂದರು.

ಜಾತ್ರೆಯ ಖರ್ಚುಗಳಿಗೆ ಕೆಲವರು ತಮ್ಮ ಕೈಲಾದ ಸೇವೆ ಮಾಡುವುದಾಗಿ ಸಭೆಯಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಕೆ.ಎಂ. ಚಿದಾನಂದಸ್ವಾಮಿ, ಸಣ್ಣ ಕೊತ್ಲಪ್ಪ, ಬಣಕಾರ ಮಂಜುನಾಥ, ಹಯವದನರಾವ್, ಕಾವಲ್ಲಿ ಶಿವಪ್ಪ ನಾಯಕ, ಉದಯಜನ್ನು, ಶೆಟ್ರು ಬಸವರಾಜ, ಬಂಗಾರು ಸೋಮಪ್ಪ, ಜಿಂಕಲ್ ನಾಗಮಣಿ, ಲಕ್ಷ್ಮಿದೇವಿ, ಎಸ್.ದುರುಗೇಶ್, ಗಂಟಿ ರಾಘವೇಂದ್ರ ಶೆಟ್ಟಿ, ಸಿರಿಬಿ ಮಂಜುನಾಥ, ನಾಗರಾಜ ಭರಮಪ್ಪನವರ್, ಬಾಣದ ಮೂರ್ತಿ, ಕೆ.ಈಶಪ್ಪ, ದೇವಸ್ಥಾನದ ಅರ್ಚಕ ನಾಗರಾಜ ಬಡಿಗೇರ, ಎಸ್.ಸುರೇಶ್, ಟಿ.ಜಿ.ಮಲ್ಲಿಕಾರ್ಜುನಗೌಡ, ಬಾಣದ ಶಿವಶಂಕರ, ಡಾಣಿ ರಾಘವೇಂದ್ರ, ದುರುಗಪ್ಪ, ಚೌಡಪ್ಪ ಸೇರಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ