ಬೆಂಗಳೂರು ಧಗಧಗ: ಏರುತ್ತಲೇ ಇದೆ ಉಷ್ಣಾಂಶ

KannadaprabhaNewsNetwork |  
Published : Apr 29, 2024, 01:40 AM ISTUpdated : Apr 29, 2024, 09:09 AM IST
ಉಷ್ಣಾಂಶ | Kannada Prabha

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲ ತಾಪ ಹೆಚ್ಚಾಗುತ್ತಿದ್ದು, ಭಾನುವಾರ 38.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇದು ಪ್ರಸಕ್ತ ವರ್ಷ ಹಾಗೂ ಏಪ್ರಿಲ್‌ನಲ್ಲಿ ನಗರದ ದಾಖಲಾದ ಗರಿಷ್ಠ ಉಷ್ಣಾಂಶವಾಗಿದೆ.

  ಬೆಂಗಳೂರು :  ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲ ತಾಪ ಹೆಚ್ಚಾಗುತ್ತಿದ್ದು, ಭಾನುವಾರ 38.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇದು ಪ್ರಸಕ್ತ ವರ್ಷ ಹಾಗೂ ಏಪ್ರಿಲ್‌ನಲ್ಲಿ ನಗರದ ದಾಖಲಾದ ಗರಿಷ್ಠ ಉಷ್ಣಾಂಶವಾಗಿದೆ.

ಶನಿವಾರ 38 ಡಿಗ್ರಿ ಸೆಲ್ಶಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ಭಾನುವಾರ 38.5 ಡಿ. ಸೆ. ದಾಖಲಾಗಿದೆ. ಬೆಂಗಳೂರಿನ ಏಪ್ರಿಲ್‌ ವಾಡಿಕೆ ಗರಿಷ್ಠ ಉಷ್ಣಾಂಶ 34 ಡಿ.ಸೆ.ಆಗಿದ್ದು, ವಾಡಿಕೆಗಿಂತ 4.5 ಡಿ.ಸೆ.ಹೆಚ್ಚಿನ ಉಷ್ಣಾಂಶ ದಾಖಲಾಗಿದೆ. ಈ ಮೂಲಕ ಕಳೆದ 13 ವರ್ಷದ ಏಪ್ರಿಲ್‌ನಲ್ಲಿ ನಗರದಲ್ಲಿ ದಾಖಲಾದ ಎರಡನೇ ಗರಿಷ್ಠ ಉಷ್ಣಾಂಶದ ಪಟ್ಟಿಗೆ ಭಾನುವಾರ ಬಿಸಿಲು ಸೇರ್ಪಡೆಗೊಂಡಿದೆ.

ಸಾರ್ವಕಾಲಿಕ ದಾಖಲೆಯತ್ತ ಬಿಸಿಲು

2016 ಹೊರತುಪಡಿಸಿದರೆ, 2012 ರಿಂದ ಈವರೆಗೆ ಇಷ್ಟೊಂದು ಪ್ರಮಾಣದ ಗರಿಷ್ಠ ಉಷ್ಣಾಂಶ ನಗರದಲ್ಲಿ ದಾಖಲಾಗಿಲ್ಲ. 2016ರ ಏಪ್ರಿಲ್‌ 25 ರಂದು 39.2 ಡಿ.ಸೆ. ದಾಖಲಾಗಿತ್ತು. ಇದು ಬೆಂಗಳೂರಿನ ಸಾರ್ವಕಾಲಿಕ ದಾಖಲಾಗಿದೆ. ಈ ಬಾರಿ ಈಗಾಗಲೇ 38.5 ಡಿ.ಸೆ. ತಲುಪಿದ್ದು, ಎಂಟು ವರ್ಷದ ದಾಖಲೆ ಮೀರಿಸುವ ಬಿಸಿಲು ದಾಖಲಾಗುವ ಸಾಧ್ಯತೆ ಕಾಣುತ್ತಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ 38.2 ಡಿ.ಸೆ. ಗರಿಷ್ಠ ಉಷ್ಣಾಂಶ, ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ 37.6 ಹಾಗೂ ಜಿಕೆವಿಕೆಯಲ್ಲಿ 36 ಡಿ.ಸೆ. ದಾಖಲಾಗಿದೆ.

ಮೂರನೇ ಬಾರಿ 38 ಡಿಗ್ರಿ

ನಗರದಲ್ಲಿ ಪ್ರಸಕ್ತ ಏಪ್ರಿಲ್‌ ನಲ್ಲಿ ಭಾನುವಾರ ಸೇರಿದಂತೆ ಒಟ್ಟು ಮೂರು ಬಾರಿ 38 ಹಾಗೂ ಅದಕ್ಕಿಂತ ಹೆಚ್ಚು ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಏ.19 ರಂದು ಮೊದಲ ಬಾರಿಗೆ 38 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಆ ಬಳಿಕ ಏ.27 ರಂದು 38 ಡಿಗ್ರಿ ಸೆಲ್ಸಿಯಸ್‌ ಹಾಗೂ ಏ.28ರ ಭಾನುವಾರ 38.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.ಕಳೆದ 8 ದಿನಗಳ ನಗರದ ಗರಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)ದಿನ ಗರಿಷ್ಠ ಉಷ್ಣಾಂಶ

ಏ.2838.5

ಏ.27  38 

ಏ.26 37.4

ಏ.25 37.4

ಏ.24 37.0

ಏ.23 37.6

ಏ.22 37.2

ಏ.21 37.4

 

ಹಿಂದಿನ ವರ್ಷಗಳ ಏಪ್ರಿಲ್‌ ತಿಂಗಳಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶವರ್ಷ ಗರಿಷ್ಠ ಉಷ್ಣಾಂಶ2021 ಏ.1 37.2  2020 ಏ.6   36.4  2019 ಏ.28 37.0  2018 ಏ.30 34.9  2017 ಏ.26 37.0  2016 ಏ.25 39.2  2015 ಏ.6 36.5  2014 ಏ.29 36.7  2013 ಏ.8 36.82012 ಏ.25 37.5

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮರೋಪಾದಿಯಲ್ಲಿ ವಿಜಯೇಂದ್ರ ಪಕ್ಷ ಸಂಘಟನೆ
ಜಿ ರಾಮ್ ಜಿ ಪರ 15ರಿಂದ ಅಭಿಯಾನ: ವಿಜಯೇಂದ್ರ