
- ಜಿಲ್ಲೆಯಲ್ಲಿ ಇನ್ಯಾವ ತಾಲೂಕಲ್ಲೂ ಯೂರಿಯಾ ಕೊರತೆಯಾಗಿಲ್ಲ: ಕೃಷಿ ಜಂಟಿ ನಿರ್ದೇಶಕ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮೆಕ್ಕೆಜೋಳ ಹೆಚ್ಚಾಗಿ ಬೆಳೆಯುವ ಜಗಳೂರು ತಾಲೂಕು ಹಾಗೂ ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿ ವ್ಯಾಪ್ತಿಯಲ್ಲಿ ಯೂರಿಯಾ ಗೊಬ್ಬರದ ಕೊರತೆಯಾಗಿದೆ. ಇದನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿ ಯೂರಿಯಾ ಕೊರತೆಯಾಗಿಲ್ಲ ಎಂದು ಕೃಷಿ ಇಲಾಖೆ ಸ್ಪಷ್ಪಪಡಿಸಿದೆ.ಮಳೆಯಾಶ್ರಿತ ಜಗಳೂರು ತಾಲೂಕು ಹಾಗೂ ದಾವಣಗೆರೆ ತಾ. ಮಾಯಕೊಂಡ ಹೋಬಳಿಯಲ್ಲಿ 2 ದಿನಗಳಿಂದ ಯೂರಿಯಾ ಗೊಬ್ಬರ ಕೊರತೆಯಾಗಿದೆ. 3 ದಿನಗಳ ಹಿಂದೆ ಕೊರತೆ ಇರಲಿಲ್ಲ. ಮೆಕ್ಕೆಜೋಳ ಹೆಚ್ಚಾಗಿ ಬೆಳೆಯುತ್ತಿರುವ ಭಾಗದಲ್ಲಿ ಯೂರಿಯಾಗೆ ಹೆಚ್ಚಿನ ಬೇಡಿಕೆ ಇದೆ. ಈ ಕಾರಣಕ್ಕೆ ಕೊರತೆ ಆದಂತಾಗಿದೆ ಎಂದು ತಿಳಿಸಿದ್ದಾರೆ.
ಇಲಾಖೆ ಕಾಪು ದಾಸ್ತಾನು ಖಾಲಿಯಾಗಿದೆ. ಬಫರ್ ಸ್ಟಾಕ್ ಸರ್ಕಾರದಿಂದ ಫೆಡರೇಷನ್, ಕೆಎಸ್‌ಸಿನಲ್ಲಿ ಇದ್ದುದು ಖಾಲಿಯಾಗಿದೆ. 4 ದಿನದಲ್ಲೇ ಸ್ಪಿಕ್ ರೇಟ್ ಬರಲಿದ್ದು, ಬಳಿ ಜಗಳೂರು ತಾಲೂಕು, ಮಾಯಕೊಂಡ ಗ್ರಾಮದಲ್ಲಿ ರಸಗೊಬ್ಬರ ಕೊರತೆ ನಿವಾರಣೆಯಾಗಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.
- - -(ಸಾಂದರ್ಭಿಕ ಚಿತ್ರ)