ಲೋಕಾಪುರ-ಧಾರವಾಡ ರೈಲ್ವೆ ಮಾರ್ಗಕ್ಕೆ ಆಗ್ರಹ

KannadaprabhaNewsNetwork |  
Published : Jan 24, 2026, 04:00 AM IST
ಧರಣಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ರಾಮದುರ್ಗ ಮುಂಬರುವ 2026-27 ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರಾಮದುರ್ಗದ ರೈಲ್ವೆ ಮಾರ್ಗಕ್ಕೆ ಅನುದಾನ ಕಾಯ್ದಿರಿಸಬೇಕು ಎಂದು ಆಗ್ರಹಿಸಿ ರಾಮದುರ್ಗ ತಾಲೂಕು ರೈಲ್ವೆ ಹೋರಾಟ ಕ್ರಿಯಾ ಸಮಿತಿಯಿಂದಹುತಾತ್ಮ ಚೌಕ್‌ನಲ್ಲಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ಶುಕ್ರವಾರದಿಂದ ಆರಂಭಿಸಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಮುಂಬರುವ 2026-27 ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರಾಮದುರ್ಗದ ರೈಲ್ವೆ ಮಾರ್ಗಕ್ಕೆ ಅನುದಾನ ಕಾಯ್ದಿರಿಸಬೇಕು ಎಂದು ಆಗ್ರಹಿಸಿ ರಾಮದುರ್ಗ ತಾಲೂಕು ರೈಲ್ವೆ ಹೋರಾಟ ಕ್ರಿಯಾ ಸಮಿತಿಯಿಂದಹುತಾತ್ಮ ಚೌಕ್‌ನಲ್ಲಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ಶುಕ್ರವಾರದಿಂದ ಆರಂಭಿಸಿದರು.ರೋಟರಿ ಇನ್ನರ್‌ ವೀಲ್‌ ಕ್ಲಬ್‌ನ ಅಧ್ಯಕ್ಷೆ ಸುಲೋಚನಾ ಯಾದವಾಡ, ಲಯನ್ಸ್‌ ಕ್ಲಬ್‌ ಅಧ್ಯಕ್ಷೆ ಸರಳಾ ಪತ್ತೇಪೂರ ತಮ್ಮ ಸಹದ್ಯೋಗಿಳೊಂದಿಗೆ ಧರಣಿ ಸ್ಥಳಕ್ಕೆ ಆಗಮಿಸಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು.

ಲೋಕಾಪೂರದಿಂದ ರಾಮದುರ್ಗ, ಸವದತ್ತಿ ಮಾರ್ಗವಾಗಿ ಧಾರವಾಡದವರೆಗೆ ನೂತನ ರೈಲ್ವೆ ಮಾರ್ಗ ಅನುಷ್ಟಾನಗೊಳಿಸಬೇಕು ಎಂದು ಕಳೆದ 20 ವರ್ಷಗಳಿಂದಲೂ ಹೋರಾಟಗಳು ನಡೆಯುತ್ತಿವೆ. ಆದರೆ, ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಯೋಜನೆಯ ಸಮೀಕ್ಷೆ- 2019ರಲ್ಲಿ ನೆನೆಗುದಿಗೆ ಬಿದ್ದಿತ್ತು. ಈಗೀಗ ಮತ್ತೆ ತಲೆ ಎತ್ತಿರುವ ಹೋರಾಟವು ಚುರುಕು ಪಡೆದಿದ್ದು, ಧರಣಿ ಸತ್ಯಾಗ್ರಹಕ್ಕೆ ಮುಂದಾಗಿದೆ.ಈ ಸಂದರ್ಭದಲ್ಲಿ ಗೈಬು ಜೈನೆಖಾನ, ಜಗದೀಶ ದೇವರೆಡ್ಡಿ, ಮಹ್ಮದ್‌ಶಫಿ ಬೆಣ್ಣಿ, ವಿಜಯ ನಾಯಕ್, ವಿಜಯ ಗುಡದಾರಿ ಮಾತನಾಡಿ, ಲೋಕಾಪೂರದಿಂದ ರಾಮದುರ್ಗ, ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ನೂತನ ರೈಲ್ವೆ ಮಾರ್ಗಕ್ಕಾಗಿ 2019 ರಲ್ಲೇ ಸಮೀಕ್ಷೆ ಮಾಡಲಾಗಿತ್ತು. ಆದರೆ ಅಂದಿನ ಅಧಿಕಾರಿಗಳು ನೀಡಿದ ತಪ್ಪು ವರದಿಯಿಂದ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು. ಯೋಜನೆಯನ್ನು ಮರುಸಮೀಕ್ಷೆ ನಡೆಸಿ ಈ ಭಾಗದ ಜನರಿಗೆ ರೈಲು ಹತ್ತುವ ಕನಸು ನನಸಾಗಿಸಬೇಕು ಎಂದು ಒತ್ತಾಯಿಸಿದರು.

ಲೋಕಾಪೂರದಿಂದ ಧಾರವಾಡ ರೈಲ್ವೆ ಮಾರ್ಗ ನಿರ್ಮಾಣದಿಂದ ಈ ಭಾಗದ ಕೋಟ್ಯಂತರ ಭಕ್ತರು ಬರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಯಲ್ಲಮ್ಮ ದೇವಸ್ಥಾನ, ಶಿರಸಂಗಿ ಕಾಳಮ್ಮ, ಶಬರಿ ಕೊಳ್ಳ, ಗೊಡಚಿ ವೀರಭದ್ರೇಶ್ವರ, ರಾಮದುರ್ಗ ಶಿವನ ಮೂರ್ತಿ ದೇವಸ್ಥಾನಗಳ ದರ್ಶನ ಮತ್ತು ಪ್ರವಾಸಿ ತಾಣಗಳ ಭೇಟಿಗೆ ಸುಗಮವಾಗಲಿದೆ ಎಂದು ವಿವರಿಸಿದರು.ಈ ಬಾರಿಯ ಕೇಂದ್ರದ ಬಜೆಟ್‌ನಲ್ಲಿ ಹೊಸ ರೈಲು ಮಾರ್ಗ ಸ್ಥಾಪನೆಗೆ ಅನುದಾನವನ್ನು ಮೀಸಲಿಡದಿದ್ದರೆ ಉಗ್ರ ಹೋರಾಟಗಳು ನಡೆಯಲಿವೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆ್ಯಸಿಡ್‌ ದಾಳಿ ಸಂತ್ರಸ್ತರಿಗೆ ಮಾಸಿಕ 50 ಸಾವಿರ ಪಿಂಚಣಿ : ಪರಂ ಭರವಸೆ
5 ಪಾಲಿಕೆಗೆ ಜಿಎಸ್‌ಟಿಯಲ್ಲಿ ಪಾಲು ಕೊಡಲು ಆಯೋಗ ಶಿಫಾರಸು