ಮದಗ ಮಾಸೂರು ಕೆರೆ ಒತ್ತುವರಿ ತೆರವು ಮಾಡಲು ಆಗ್ರಹ

KannadaprabhaNewsNetwork |  
Published : Jul 26, 2025, 01:30 AM IST
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಜಿ ಮುಖ್ಯ ಸಚೇತಕ ಡಿ.ಎಂ ಸಾಲಿ ಸುದ್ದಗೋಷ್ಟಿ ನಡೆಸಿದರು. | Kannada Prabha

ಸಾರಾಂಶ

ಕೆರೆಯ ಎಡದಂಡೆ ಮತ್ತು ಬಲದಂಡೆ ಅಭಿವೃದ್ಧಿಸಿದರೆ ಸಾಲದು, ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಬೇಕು. ಕೆರೆಯ ಪ್ರಸ್ತುತ ಸಂಗ್ರಹಣಾ ಸಾಮರ್ಥ್ಯ 0.056 ಟಿಎಂಸಿ ಇದ್ದು, 715 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗುತ್ತಿದೆ.

ರಟ್ಟೀಹಳ್ಳಿ: ತಾಲೂಕಿನ ಐತಿಹಾಸಿಕ ಮದಗ ಮಾಸೂರಿನ ಕೆರೆ ಒತ್ತುವರಿಯಾಗಿದ್ದು, ಹದ್ದುಬಸ್ತ್ ಮಾಡಿಸಿ ಹೂಳು ತೆಗೆಸಬೇಕು ಎಂದು ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಯು.ಬಿ. ಬಣಕಾರ ಅವರು ಅನೇಕ ವರ್ಷಗಳ ಹೋರಾಟದ ಫಲವಾಗಿ ಸಚಿವ ಸಂಪುಟದಲ್ಲಿ ಮದಗ ಮಾಸೂರಿನ ಕೆರೆಯ ಎಡದಂಡೆ ಮತ್ತು ಬಲದಂಡೆ ಅಭಿವೃದ್ಧಿಗೆ ₹52.20 ಕೋಟಿ ಅನುದಾನ ನೀಡಲಾಗಿದೆ. ಆದರೆ 480 ಎಕರೆ ಕೆರೆಯನ್ನು ಮೊದಲು ಹದ್ದುಬಸ್ತ್‌ ಮಾಡಬೇಕು. ಸಾಧ್ಯವಾದಷ್ಟು ಹೂಳು ತೆಗೆಸಿ, ಕೋಡಿ ಬೀಳುವ ಎತ್ತರ ಹೆಚ್ಚಿಸಿದರೆ ಮಾತ್ರ ಜನರಿಗೆ ಪ್ರಯೋಜನವಾಗುವುದು ಮತ್ತು ಅನುದಾನ ಸದ್ಬಳಕೆ ಆಗುವುದು ಎಂದರು.

ಕೆರೆಯ ಎಡದಂಡೆ ಮತ್ತು ಬಲದಂಡೆ ಅಭಿವೃದ್ಧಿಸಿದರೆ ಸಾಲದು, ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಬೇಕು. ಕೆರೆಯ ಪ್ರಸ್ತುತ ಸಂಗ್ರಹಣಾ ಸಾಮರ್ಥ್ಯ 0.056 ಟಿಎಂಸಿ ಇದ್ದು, 715 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗುತ್ತಿದೆ. ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚಾದರೆ ಅಂತರ್ಜಲ ಹೆಚ್ಚಿ, ರೈತರಿಗೆ ಅನುಕೂಲವಾಗಲಿದೆ ಎಂದರು.

ಪಪಂ ಚುನಾವಣೆ: ಪಟ್ಟಣ ಪಂಚಾಯಿತಿ ಚುನಾವಣೆಗೆ ಬಿಜೆಪಿಯಿಂದ ಈಗಾಗಲೇ ಪ್ರತಿ ವಾರ್ಡ್‌ನಿಂದ 3-4 ಅರ್ಜಿಗಳು ಬಂದಿದ್ದು, 2-3 ವಾರ್ಡ್‌ ಹೊರತುಪಡಿಸಿದರೆ ಅಭ್ಯರ್ಥಿಗಳ ಆಯ್ಕೆ ಯಾವುದೇ ಕಂಗಂಟಿಲ್ಲದೆ ಆಗಲಿದೆ. 2-3 ವಾರ್ಡ್‌ಗಳ ಅಭ್ಯರ್ಥಿ ಆಯ್ಕೆಗೆ ಸ್ಕ್ರೀನಿಂಗ್‌ ಕಮಿಟಿ ರಚನೆ ಮಾಡಲಾಗಿದೆ. ಆ ವಾರ್ಡ್‌ ಮತದಾರರ ಒಲವು ಹಾಗೂ ಮುಖಂಡರ ಸಲಹೆ ಮೇರೆಗೆ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದರು.

ಬಿಜೆಪಿ ತಾಲೂಕಾಧ್ಯಕ್ಷ ದೇವರಾಜ ನಾಗಣ್ಣನವರ, ಶಂಭಣ್ಣ ಗೂಳಪ್ಪನವರ, ಬಸವರಾಜ ಆಡಿನವರ, ಸುಶೀಲ್ ನಾಡಿಗೇರ, ರವಿ ಹದಡೇರ, ಸಿದ್ದು ಸಾವಕ್ಕನವರ, ಸಿದ್ದು ಹಲಗೇರಿ, ಮಂಜು ತಳವಾರ ಮುಂತಾದವರು ಇದ್ದರು.ಇಂದು ಹಾನಗಲ್ಲ ತಾಲೂಕಲ್ಲಿ ವಿದ್ಯುತ್ ವ್ಯತ್ಯಯ

ಹಾನಗಲ್ಲ: ಪಟ್ಟಣದಲ್ಲಿರುವ 110,33,11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಹಾನಗಲ್ಲ ಪಟ್ಟಣ, ನವೋದಯ, ಅಕ್ಕಿಆಲೂರು ವಾಟರ್ ಸಪ್ಲಾಯ್, ಮಹಾರಾಜಪೇಟೆ ಎನ್‌ಜಿವೈ ಮಾರ್ಗಗಳ ನಿರ್ವಹಣಾ ಕಾರ್ಯ ಇರುವುದರಿಂದ ಜು. 26ರಂದು ಬೆಳಗಿನ 9.30ರಿಂದ ಸಂಜೆ 5.30ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮರಿಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ