ಬೀರೂರು ರೈಲ್ವೆ ನಿಲ್ದಾಣದಲ್ಲಿ ಸ್ವಚ್ಚತೆ, ಸೌಲಭ್ಉ ಸುಧಾರಣೆಗೆ ಶೀಘ್ರ ಕ್ರಮ: ಮುದಿತ್ ಮಿಥಲ್

KannadaprabhaNewsNetwork | Published : May 9, 2025 12:30 AM
Follow Us

ಸಾರಾಂಶ

ಬೀರೂರು, ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತೆ ಹಾಗೂ ಸೌಲಭ್ಯ ಸುಧಾರಣೆಗೆ ಕ್ರಮ ಕೈಗೊಳ್ಳುವುದಾಗಿ ನೈರುತ್ಯ ವಲಯ ವ್ಯವಸ್ಥಾಪಕ ಮುದಿತ್ ಮಿಥಲ್ ಭರವಸೆ ನೀಡಿದರು.

ನೈರುತ್ಯ ವಲಯ ವ್ಯವಸ್ಥಾಪಕ ಭೇಟಿ

ಕನ್ನಡಪ್ರಭ ವಾರ್ತೆ, ಬೀರೂರು.ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತೆ ಹಾಗೂ ಸೌಲಭ್ಯ ಸುಧಾರಣೆಗೆ ಕ್ರಮ ಕೈಗೊಳ್ಳುವುದಾಗಿ ನೈರುತ್ಯ ವಲಯ ವ್ಯವಸ್ಥಾಪಕ ಮುದಿತ್ ಮಿಥಲ್ ಭರವಸೆ ನೀಡಿದರು.ಚಿಕ್ಕಮಗಳೂರಿಗೆ ತೆರಳುವಾಗ ಬೀರೂರು ರೈಲ್ವೆ ನಿಲ್ದಾಣಕ್ಕೆ ಬುಧವಾರ ಭೇಟಿ ನೀಡಿ, ಪ್ರಯಾಣಿಕರ ವಿಶ್ರಾಂತಿ ಗೃಹ, ನಿಲ್ದಾಣ ನಿಯಂಯತ್ರಣಾ ಕೊಠಡಿ, ಆರ್.ಪಿ.ಎಫ್ ಕಚೇರಿ ಪರಿಶೀಲಿಸಿದರು.ಈ ನಿಲ್ದಾಣದ ಸಮಸ್ಯೆಗಳ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ವಲಯದ 84 ನಿಲ್ದಾಣಗಳಲ್ಲಿ 3 ನಿಲ್ದಾಣಗಳನ್ನು ಖಾಸಗಿ ಗುತ್ತಿಗೆದಾರರಿಗೆ ಸ್ವಚ್ಛತೆ ನಿರ್ವಹಣೆಗೆ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ಕೆಲವೇ ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣ ಗೊಳ್ಳಲಿದ್ದು, ಬೀರೂರು-ಕಡೂರು ಎರಡು ನಿಲ್ದಾಣಗಳ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎಂದರು.ಪ್ರಯಾಣಿಕರು 3-4ವರ್ಷಗಳಿಂದ ಇಲ್ಲಿನ ನಿಲ್ದಾಣದಲ್ಲಿನ ಕುಡಿಯುವ ನೀರಿನ ಸಮಸ್ಯೆ, ಶೌಚಾಗೃಹ ಸ್ವಚ್ಛವಿಲ್ಲದಿರುವುದು, ಪ್ಲಾಟ್ ಫಾರಂಗಳು ಮತ್ತು ಮೇಲ್ಚಾವಣಿ ಸೋರುವಿಕೆ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು ಇಲ್ಲಿಯವರೆಗೂ ಯಾವುದೇ ಕ್ರಮವಹಿಸದಿರುವ ಬಗ್ಗೆ ಸಾರ್ವಜನಿಕರು ವಲಯ ವ್ಯವಸ್ಥಾಪಕರ ಗಮನಕ್ಕೆ ತಂದರು.ಹಲವು ರೈಲುಗಳು ವೇಳಾಪಟ್ಟಿ ಅನುಸಾರ ಸಂಚರಿಸದೆ ವಿಳಂಬವಾಗುತ್ತಿದ್ದು, ಕೆಲವು ರೈಲುಗಳಲ್ಲಿ ಆಹಾರ ಇತರ ಸೌಕರ್ಯವಿಲ್ಲದೆ ಮಧುಮೇಹಿಗಳು, ವೃದ್ಧರು ತೊಂದರೆ ಅನುಭವಿಸುತ್ತಿದ್ದಾರೆ. ಸಂಚಾರ ವೇಳೆ ವ್ಯವಸ್ಥಿತಗೊಳಿಸುವಂತೆ ಕೋರಿದರು.ಪ್ರಯಾಣಿಕರ ಪರವಾಗಿ ಮಾತನಾಡಿದ ನಾಗರಾಜ್, ಬೀರೂರು ರೈಲ್ವೆ ಜಣಕ್ಷನ್ ಜಿಲ್ಲೆಯಲ್ಲಿಯೇ ಪ್ರಮುಖ ನಿಲ್ದಾಣವಾಗಿದ್ದು, ಇಲ್ಲಿಂದ ನಾಲ್ಕಾರು ಜಿಲ್ಲೆ ಹಾಗೂ ಅಂತರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುತ್ತಿರುವ ನಿಲ್ದಾಣವಾಗಿದೆ. ಇಲ್ಲಿಂದ ಹೆಚ್ಚಿನ ಪ್ರಯಾಣಿಕರು ಹಾಗೂ ಇಲಾಖೆಗೆ ಆದಾಯ ಬರುತ್ತಿದ್ದರೂ ಸ್ವಚ್ಛತೆ ಕೊರತೆ ಸೇರಿದಂತೆ ಮೂಲಭೂತ ಸೌಲಬ್ಯ ಕಲ್ಪಿಸುತ್ತಿಲ್ಲ ಎಂದು ದೂರಿದರು.ಸಮಸ್ಯೆ ಬಗ್ಗೆ ತಿಳಿಸಲು ಸ್ಟೇಷನ್ ಮಾಸ್ಟರ್ ಸ್ಥಳೀಯವಾಗಿ ವಾಸವಿಲ್ಲದ ಕಾರಣ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತಿದೆ. 4-5 ವರ್ಷಗಳ ಹಿಂದೆ ಉತ್ತಮ ಪರಿಸರ ಹೊಂದಿರುವ ನಿಲ್ದಾಣ ಎಂಬ ಹೆಗ್ಗಳಿಕೆಗೆ ಮತ್ತು ಪ್ರಶಸ್ತಿಗೆ ಭಾಜನವಾಗಿದ್ದ ನಿಲ್ದಾಣ ಇಂದು ದುರ್ನಾತದಿಂದ ಕೂಡಿರುವುದು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಉನ್ನತಮಟ್ಟದ ಅಧಿಕಾರಿಗಳು ಬರುವಾಗ ಮಾತ್ರ ನಿಲ್ದಾಣದ ಸ್ವಚ್ಛತೆ ಬಗ್ಗೆ ಗಮನಹರಿಸುವ ಅಧಿಕಾರಿಗಳು ಇನ್ನುಳಿದ ದಿನಗಳಲ್ಲಿ ಸಿಬ್ಬಂದಿ ಕೊರತೆ ನೆಪ ಹೇಳುತ್ತಿ ದ್ದಾರೆ ಎಂಬುದನ್ನು ವಲಯ ವ್ಯವಸ್ಥಾಪಕರ ಗಮನಕ್ಕೆ ತಂದು ಶೀಘ್ರ ಬಗೆಹರಿಸುವಂತೆ ಒತ್ತಾಹಿಸಿದರು.ನಿಲ್ದಾಣದ ಸ್ಟೇಷನ್ ಮಾಸ್ಟರ್ ಪ್ರಭಾತ್ ಕುಮಾರ್ ಸಿಂಗ್, ಇಲಾಖೆ ಅಧಿಕಾರಿಗಳು, ರೈಲ್ವೆ ರಕ್ಷಣಾ ಸಿಬ್ಬಂದಿ ಮತ್ತು ಪ್ರಯಾಣಿಕರು ಇದ್ದರು.8 ಬೀರೂರು 1ಬೀರೂರು ರೈಲು ನಿಲ್ದಾಣಕ್ಕೆ ನೈರುತ್ಯ ರೈಲ್ವೆ ವಲಯ ವ್ಯವಸ್ಥಾಪಕ ಮುದಿತ್ ಮಿಥಲ್ ಭೇಟಿ ನೀಡಿ ನಿಲ್ದಾಣದ ಸ್ವಚ್ಚತೆ ಮತ್ತು ಸೌಲಬ್ಯ ಗಳನ್ನು ಪರಿಶೀಲಿಸಿದರು. ಸ್ಟೇಷನ್ ಮಾಸ್ಟರ್ ಪ್ರಭಾತ್ ಕುಮಾರ್ ಸಿಂಗ್ ಇದ್ದರು.