ಬಸ್ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ

KannadaprabhaNewsNetwork | Published : Jan 17, 2024 1:48 AM

ಸಾರಾಂಶ

ಪಟ್ಟಣದ ಬಸ್‌ ನಿಲ್ದಾಣದಲ್ಲಿ ಪುರುಷ, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳಿದ್ದರೂ ಕಿಡಿಗೇಡಿಗಳು ಬಸ್ ನಿಲ್ದಾಣದ ಆವರಣದಲ್ಲಿ ಹಾಡಹಗಲೇ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ದೃಶ್ಯ ಕಂಡು ಬಂದಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪಟ್ಟಣದ ಬಸ್‌ ನಿಲ್ದಾಣದಲ್ಲಿ ಪುರುಷ, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳಿದ್ದರೂ ಕಿಡಿಗೇಡಿಗಳು ಬಸ್ ನಿಲ್ದಾಣದ ಆವರಣದಲ್ಲಿ ಹಾಡಹಗಲೇ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ದೃಶ್ಯ ಕಂಡು ಬಂದಿದೆ. ಸಾರಿಗೆ ಬಸ್ ನಿಲ್ದಾಣದ ಪಶ್ಚಿಮ ಭಾಗದಲ್ಲಿ ಪುರುಷ/ಮಹಿಳೆಯರ ಸಾರ್ವಜನಿಕ ಶೌಚಾಲಯಗಳಿವೆ ಆದರೂ ಕೆಲ ಪುರುಷರು ಚಾಮರಾಜನಗರಕ್ಕೆ ತೆರಳುವ ಬಸ್ ನಿಲ್ಲುವ ಮುಂದಿನ ಆವರಣದಲ್ಲಿ ಮಹಿಳೆಯರು, ವಿದ್ಯಾರ್ಥಿಗಳು ಇದ್ದರೂ ಮೂತ್ರ ವಿಸರ್ಜನೆ ಮಾಡುವುದನ್ನು ಕಂಡು ಕೆಲ‌ ಮಹಿಳೆಯರು ಹಾಗೂ ಮಕ್ಕಳು ಕೆಎಸ್‌ಆರ್‌ಟಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಂಡ್ಲುಪೇಟೆ ಬಸ್ ಘಟಕದ ವ್ಯವಸ್ಥಾಪಕರು ಕೂಡ ಮಹಿಳೆಯೆ ಆಗಿದ್ದಾರೆ. ಹಾಗಾಗಿ ಬಸ್ ನಿಲ್ದಾಣದ ಆವರಣದಲ್ಲಿ ಮೂತ್ರ ವಿಸರ್ಜನೆಗೆ ಬ್ರೇಕ್ ಹಾಕಬೇಕು ಎಂದು ಮಹಿಳೆಯೊಬ್ಬರು ಆಗ್ರಹಿಸಿದ್ದಾರೆ. ಪೊಲೀಸರ ಬದಲು ಹೋಂ ಗಾರ್ಡ್ ಗಳು ಆಗೊಮ್ಮೆ ಈಗೊಮ್ಮೆ ಬಸ್ ನಿಲ್ದಾಣದಲ್ಲಿ ಕಾಣಿಸಿಕೊಂಡರೂ ಹಗಲು ವೇಳೆಯಲ್ಲಿ ಬಹಿರಂಗವಾಗಿಯೇ ನೂರಾರು ಜನರು ಇರುವಾಗಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದರೂ ಕೇಳುವ ಕೆಲಸ ಆಗುತ್ತಿಲ್ಲ ಎಂದು ವಿದ್ಯಾರ್ಥಿನಿಯೊಬ್ಬಳು ಆರೋಪಿಸಿದ್ದಾರೆ.

ಬಸ್ ನಿಲ್ದಾಣದಲ್ಲಿ ಸಾಮಾಜಿಕ ಕಳಕಳಿಯುಳ್ಳ ಕೆಎಸ್‌ಆರ್‌ಟಿಸಿಯ ನಿರ್ವಾಹಕರು ಹಾಗೂ ಚಾಲಕರು ಗದರಿಸಿದರೂ ಕಿಡಿಗೇಡಿ ಪುರುಷರು ಮೂತ್ರ ವಿಸರ್ಜನೆ ಮಾಡುವುದನ್ನು ನಿಲ್ಲಿಸುತ್ತಿಲ್ಲ. ಇದನ್ನು ನಿಲ್ಲಿಸಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕ ಮಹಿಳೆ ನಾಗಮ್ಮ ಆಗ್ರಹಿಸಿದರು. ಪೊಲೀಸರು ಸಹ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗಸ್ತು ಮಾಡುವ ಮೂತ್ರ ವಿಸರ್ಜನೆ ಹಾಗೂ ಕೀಟಲೆ ಮಾಡುವುದು ಕಂಡರೆ ಪಿಟಿ ಕೇಸಾದರೂ ಹಾಕಿದರೆ ಬಹಿರಂಗ ಮೂತ್ರ ವಿಸರ್ಜನೆ ತಡೆಗಟ್ಟಲು ಸಾಧ್ಯ ಎಂದು ಯುವಕನೋರ್ವ ಸಲಹೆ ನೀಡಿದ್ದಾನೆ.ಸಾರ್ವಜನಿಕ ಸ್ಥಳದಲ್ಲಿ ಕೆಲ ಪುರುಷರು ಮೂತ್ರ ವಿಸರ್ಜನೆ ಮಾಡಬೇಡಿ ಎಂದು ಹೇಳುವ ಪರಿಸ್ಥಿತಿ ಬಂದಿದೆ ಇದು ದುರಂತದ ವಿಷಯ. ಚಾಮರಾಜನಗರ ಬಸ್ ನಿಲ್ಲುವ ಬಳಿ ಖಾಲಿ ಜಾಗದಲ್ಲಿ ತಂತಿ ಬೇಲಿ ಹಾಕಿಸಲು ಕ್ರಮ ಕೈಗೊಳ್ಳಲಾಗುವುದು.ಪುಷ್ಪ, ಘಟಕ ವ್ಯವಸ್ಥಾಪಕಿ, ಗುಂಡ್ಲುಪೇಟೆ

Share this article