ಹೊಸಪೇಟೆ: ನಗರದ ಬಳ್ಳಾರಿ ರಸ್ತೆಯಲ್ಲಿರುವ ಹಜರತ್ ಸೈಯದ್ ಮೀರ್ ಆಲಮ್ ನವಾಜ್ ಖಾದ್ರಿ ಅಜ್ಜನವರ 92ನೇ ಉರೂಸ್ ಶುಕ್ರವಾರ ರಾತ್ರಿ ಸಂಭ್ರಮದಿಂದ ನಡೆಯಿತು.
ಈ ಸಂದರ್ಭದಲ್ಲಿ ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಭಗವಂತನ ಕೃಪ ಆಶೀರ್ವಾದದಿಂದ ಉತ್ತಮ ಮಳೆಯಾಗಿ ರಾಜ್ಯದಲ್ಲಿ ಸಮೃದ್ಧಿ ನೆಲೆಸಲಿ ಎಂದು ಆಶಿಸಿದರು.
ದರ್ಗಾದ ಪದಾಧಿಕಾರಿಗಳಾದ ಅನ್ಸರ್, ಇರ್ಫಾನ್, ಸಮೀರ್, ಶಬ್ಬೀರ್, ಫಾರೂಕ್, ಅಂಜುಮನ್ ಕಮಿಟಿಯ ಉಪಾಧ್ಯಕ್ಷ ಎಂ. ಫಿರೋಜ್ ಖಾನ್, ಕಾರ್ಯದರ್ಶಿ ಎಂ.ಡಿ. ಅಬೂಬಕ್ಕರ್, ಖಜಾಂಚಿ ಜಿ.ಅನ್ಸರ್ ಬಾಷಾ, ಸಹಕಾರ್ಯದರ್ಶಿ ಡಾ.ಎಂ.ಡಿ. ದುರ್ವೇಶ್, ಮೈನುದ್ದಿನ್, ಸದಸ್ಯರಾದ ಕೊತ್ವಾಲ್ ಮುಹಮ್ಮದ್ ಮೊಹಿಸಿನ್, ವಕೀಲ ಸದ್ದಾಂ ಮತ್ತು ಎಲ್.ಗುಲಾಮ್ ರಸೂಲ್ ಮತ್ತಿತರರು ಭಾಗವಹಿಸಿದ್ದರು.