ಉರೂಸ್: ನಾಗಲಾವಿ ನಿಲ್ದಾಣದಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ

KannadaprabhaNewsNetwork | Published : Sep 20, 2024 1:31 AM

ಸಾರಾಂಶ

ನಾಗಲಾವಿಯ ದರ್ಗಾ ಹಜರತ್ ಷರೀಫ್ ಉರೂಸ್ ಕಾರ್ಯಕ್ರಮ ಆಗಮಿಸುವ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ನೈಋತ್ಯ ರೈಲ್ವೆ ಮೂರು ದಿನ ತಾತ್ಕಾಲಿಕ ರೈಲು ನಿಲುಗಡೆಗೆ ಅವಕಾಶ ಕಲ್ಪಿಸಿದೆ.

ಹುಬ್ಬಳ್ಳಿ:

ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಲಾವಿಯ ದರ್ಗಾ ಹಜರತ್ ಷರೀಫ್ ಉರೂಸ್ ಕಾರ್ಯಕ್ರಮ ಅ. 14ರಿಂದ 16ರ ವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿವಿಧ ಸ್ಥಳಗಳಿಂದ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ನಾಗಲಾವಿ ಹಾಲ್ಟ್ ನಿಲ್ದಾಣದಲ್ಲಿ ಹಾದು ಹೋಗುವ 8 ರೈಲುಗಳಿಗೆ 2 ನಿಮಿಷ ತಾತ್ಕಾಲಿಕ ನಿಲುಗಡೆಗೆ ನೈಋತ್ಯ ರೈಲ್ವೆ ವ್ಯವಸ್ಥೆ ಕಲ್ಪಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ, ರೈಲು ಸಂಖ್ಯೆ 17415 ತಿರುಪತಿ-ಕೊಲ್ಹಾಪುರ ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಬೆಳಗ್ಗೆ 9.14ಕ್ಕೆ ಆಗಮಿಸಿ 9.16ಕ್ಕೆ ಹೊರಡಲಿದೆ. ರೈಲು ಸಂಖ್ಯೆ 17332 ಎಸ್ಎಸ್ಎಸ್ ಹುಬ್ಬಳ್ಳಿ-ಮಿರಜ್ ಎಕ್ಸ್‌ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಬೆಳಗ್ಗೆ 11.40ಕ್ಕೆ ಆಗಮಿಸಿ 11.42ಕ್ಕೆ ಹೊರಡಲಿದೆ. ರೈಲು ಸಂಖ್ಯೆ 17317 ಎಸ್ಎಸ್ಎಸ್ ಹುಬ್ಬಳ್ಳಿ-ದಾದರ್ ಎಕ್ಸ್‌ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಸಂಜೆ 4.18ಕ್ಕೆ ಆಗಮಿಸಿ 4.20ಕ್ಕೆ ಹೊರಡಲಿದೆ. ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ ಎಕ್ಸ್‌ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಸಂಜೆ 6.40ಕ್ಕೆ ಆಗಮಿಸಿ 6.42ಕ್ಕೆ ಹೊರಡಲಿದೆ. ರೈಲು ಸಂಖ್ಯೆ 17416 ಕೊಲ್ಹಾಪುರ- ತಿರುಪತಿ ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಸಂಜೆ 5.55ಕ್ಕೆ ಆಗಮಿಸಿ 5.57ಕ್ಕೆ ಹೊರಡಲಿದೆ. ರೈಲು ಸಂಖ್ಯೆ 17331 ಮಿರಜ್- ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಮಧ್ಯಾಹ್ನ 12.25ಕ್ಕೆ ಆಗಮಿಸಿ, 12.27ಕ್ಕೆ ಹೊರಡಲಿದೆ. ರೈಲು ಸಂಖ್ಯೆ 17318 ದಾದರ್- ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಬೆಳಗ್ಗೆ 10.13ಕ್ಕೆ ಆಗಮಿಸಿ 10.15ಕ್ಕೆ ಹೊರಡಲಿದೆ. ರೈಲು ಸಂಖ್ಯೆ 17325 ಬೆಳಗಾವಿ- ಮೈಸೂರು ಎಕ್ಸ್‌ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಬೆಳಗ್ಗೆ 7.40ಕ್ಕೆ ಬಂದು 7.42ಕ್ಕೆ ಹೊರಡಲಿದೆ.

ಈ ರೈಲುಗಳು ತಮ್ಮ ಮೂಲ ನಿಲ್ದಾಣದಿಂದ ಪ್ರಾರಂಭಿಸುವ ಪ್ರಯಾಣದಿಂದ (ಅ. 14ರಿಂದ 16ರ ವರೆಗೆ) ಈ ತಾತ್ಕಾಲಿಕ ನಿಲುಗಡೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

Share this article