ಅರಸು ಹಿಂದುಳಿದವರ, ಶೋಷಿತರ, ಬಡಜನರ ಆಶಾಕಿರಣ

KannadaprabhaNewsNetwork |  
Published : Aug 25, 2025, 01:00 AM IST
ಅರಸುರವರು ಹಿಂದುಳಿದವರ, ಶೋಷಿತರ, ಬಡಜನರ ಆಶಾ ಕಿರಣ : ಕೆ. ?ಡಕ್ಷರಿ | Kannada Prabha

ಸಾರಾಂಶ

ಹಿಂದುಳಿದ ವರ್ಗಗಳ ಹರಿಕಾರ ಡಿ. ದೇವರಾಜ ಅರಸುರವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನೇಕ ಸುಧಾರಣಾ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಹಿಂದುಳಿದವರ, ಶೋಷಿತರ, ಬಡಜನರ ಆಶಾ ಕಿರಣವಾಗಿದ್ದರು ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಹಿಂದುಳಿದ ವರ್ಗಗಳ ಹರಿಕಾರ ಡಿ. ದೇವರಾಜ ಅರಸುರವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನೇಕ ಸುಧಾರಣಾ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಹಿಂದುಳಿದವರ, ಶೋಷಿತರ, ಬಡಜನರ ಆಶಾ ಕಿರಣವಾಗಿದ್ದರು ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು. ನಗರದ ಡಿ. ದೇವರಾಜ ಅರಸು ಭವನದಲ್ಲಿ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ 110ನೇ ಜನ್ಮದಿನಾಚರಣೆಯಲ್ಲಿ ಅರಸುರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಸಂವಿಧಾನದ ಮೂಲ ಆಶಯವಾಗಿರುವ ಸಾಮಾಜಿಕ ನ್ಯಾಯ ರಾಜ್ಯದಲ್ಲಿ ಚಾಚು ತಪ್ಪದೆ ಅನುಷ್ಠಾನಕ್ಕೆ ತಂದವರು ಅರಸು. ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅವರು ರಾಜ್ಯದಲ್ಲಿ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನನ್ನು ಜಾರಿಗೊಳಿಸಿ ಬಡವರಿಗೆ ಜಮೀನು ನೀಡುವ ಮೂಲಕ ಶಕ್ತಿ ತುಂಬಿದ್ದರು. ಮೀಸಲಾತಿ ಸೌಲಭ್ಯ ಕಲ್ಪಿಸಿ ಶೋಷಿತ ಸಮುದಾಯಗಳಿಗೆ ಆಸ್ಮಿತೆ ತಂದುಕೊಟ್ಟಿದ್ದರು. ಜೀತ ಪದ್ಧತಿ, ಮಲಹೋರುವ ಪದ್ಧತಿ ನಿರ್ಮೂಲನೆ ಮೂಲಕ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದರು. ಅರಸು ರೂಪಿಸಿದ ಮಾರ್ಗದಲ್ಲಿಯೇ ರಾಜ್ಯ ಸರ್ಕಾರ ಸಾಗುತ್ತಿದ್ದು ಅಭಿವೃದ್ಧಿ ನಿಗಮದ ಮೂಲಕ ಅಶಕ್ತರಿಗೆ ಸಾಲ ಸೌಲಭ್ಯ, ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ತಾಲೂಕಿನ ಭಾಗದಲ್ಲಿ ಮೂರು ವಸತಿ ಶಾಲೆಗಳಿದ್ದು ಹೆಚ್ಚಿನ ವಸತಿ ಶಾಲೆಗಳನ್ನು ನಿರ್ಮಾಣ ಮಾಡಲಾಗುವುದು ಎಂದ ಅವರು ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲಾಗುವುದು ಎಂದರು. ತಹಸೀಲ್ದಾರ್ ಮೋಹನ್‌ಕುಮಾರ್ ಮಾತನಾಡಿ ದೇವರಾಜ ಅರಸುರವರು ರಾಜ್ಯಕ್ಕೆ ಹಲವಾರು ಕೊಡುಗೆಗಳನ್ನು ನೀಡುವ ಮೂಲಕ ಹಲವು ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅವರ ತತ್ವಾ ಆದರ್ಶಗಳನ್ನು ನಾವೆಲ್ಲರೂ ಚಾಚು ತಪ್ಪದೇ ಪಾಲಿಸಬೇಕು ಎಂದರು. ಎಸ್‌ವಿಪಿ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ಉಪನ್ಯಾಸ ನೀಡುತ್ತಾ, ಡಿ ದೇವರಾಜ ಅರಸು ರವರು ಕಲೆ, ಸಾಹಿತ್ಯ ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು ರಾಜಕೀಯ ರಂಗದಲ್ಲಿ ವಿಶೇಷವಾದ ಸಾಧನೆ ಮಾಡಿ, ಸಮುದಾಯ ಅಭಿವೃದ್ಧಿಗೆ ದುಡಿದರು. ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ವಿಧಾನಸಭಾ ಅಧಿವೇಶನಗಳಲ್ಲಿ ಅನವಶ್ಯಕ ಮಾತುಗಳನ್ನು ಮಾತನಾಡಲು ಬಿಡುತ್ತಿರಲಿಲ್ಲ ಶಿಷ್ಠಾಚಾರ ಎಂಬುದು ಅವರಲ್ಲಿ ಇತ್ತು. ಶೈಕ್ಷಣಿಕ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪ್ರಾರಂಭಿಸಿ ಕ್ರಾಂತಿಯನ್ನೇ ಮಾಡಿದರು. ವಿದ್ಯಾರ್ಥಿಗಳು ಅರಸುರವರ ಮಾರ್ಗದಲ್ಲಿಯೇ ಸಾಗಬೇಕು ಎಂದರು. ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಯಮುನಾ ಧರಣೇಶ್, ತಾ. ಪಂ. ಇಓ ಸುದರ್ಶನ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಜಲಜಾಕ್ಷಮ್ಮ, ಗ್ರೇಡ್-೨ ತಹಸೀಲ್ದಾರ್ ಜಗನ್ನಾಥ್, ನಗರಸಭೆ ಆಯುಕ್ತ ವಿಶ್ವೇಶ್ವರ ಬದರಗಡೆ, ನಗರಸಭಾ ಸದಸ್ಯರಾದ ಲೋಕನಾಥ ಸಿಂಗ್, ಅಶ್ವಿನಿ ದೇವರಾಜ್, ಗ್ಯಾರಂಟಿ ಯೋಜನೆಯ ತಾ ಅಧ್ಯಕ್ಷ ಕಾಂತರಾಜು, ನಿಗಮದ ಅಧಿಕಾರಿ ಉಮಾದೇವಿ, ಮಹೇಶ್, ಮಮತ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ