ಬೆಂಗಳೂರಿನಲ್ಲಿ 12ಕ್ಕೆ ಯುಎಸ್‌ ಉನ್ನತ ಶಿಕ್ಷಣ ಮೇಳ

KannadaprabhaNewsNetwork |  
Published : Feb 10, 2024, 01:45 AM ISTUpdated : Feb 10, 2024, 11:54 AM IST
indian students

ಸಾರಾಂಶ

ಅಮೆರಿಕದ ವಿವಿಧ ವಿಶ್ವವಿದ್ಯಾಲಯಗಳು ಚೆನ್ನೈನ ಅಮೆರಿಕ ರಾಯಭಾರಿ ಕಚೇರಿಯ ಸಹಯೋಗದಲ್ಲಿ ಫೆ.12ರಂದು ರಾಜಧಾನಿ ಬೆಂಗಳೂರಿನಲ್ಲಿ ‘ಯುಎಸ್‌ ಉನ್ನತ ಶಿಕ್ಷಣ ಮೇಳ’ ಆಯೋಜಿಸಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಮೆರಿಕದ ವಿವಿಧ ವಿಶ್ವವಿದ್ಯಾಲಯಗಳು ಚೆನ್ನೈನ ಅಮೆರಿಕ ರಾಯಭಾರಿ ಕಚೇರಿಯ ಸಹಯೋಗದಲ್ಲಿ ಫೆ.12ರಂದು ರಾಜಧಾನಿ ಬೆಂಗಳೂರಿನಲ್ಲಿ ‘ಯುಎಸ್‌ ಉನ್ನತ ಶಿಕ್ಷಣ ಮೇಳ’ ಆಯೋಜಿಸಿವೆ.

ಯುಎಸ್‌ನಲ್ಲಿ ಉನ್ನತ ವ್ಯಾಸಂಗ ಮಾಡಲಿಚ್ಚಿಸುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಂಗಳೂರು, ಮಣಿಪಾಲ್, ಮಂಗಳೂರು, ಕೊಚ್ಚಿ ಮತ್ತು ಕೊಯಮತ್ತೂರಿನಲ್ಲಿ ಫೆ.12ರಿಂದ 20ರವರೆಗೆ ಉನ್ನತ ಶಿಕ್ಷಣ ಮೇಳ ಆಯೋಜಿಸಲಾಗುತ್ತಿದೆ. 

ಈ ಪೈಕಿ ಬೆಂಗಳೂರಿನಲ್ಲಿ ಫೆ.12ರಂದು ಸಂಜೆ 4ರಿಂದ 7ರವರೆಗೆ ನಗರದ ವಿಠ್ಠಲ್‌ ಮಲ್ಯ ರಸ್ತೆಯ ಜೆಡಬ್ಲ್ಯು ಮ್ಯಾರಿಯಟ್‌ ಹೋಟೆಲ್‌ನಲ್ಲಿ ಮೇಳ ನಡೆಯಲಿದೆ. 

ಯುಎಸ್‌ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ, ಡಾಕ್ಟರೇಟ್‌ ಕೋರ್ಸುಗಳ ಪ್ರವೇಶ ಬಯಸುವ ಕರ್ನಾಟಕದ ರಾಜ್ಯಗಳ ವಿದ್ಯಾರ್ಥಿಗಳು ಭಾಗವಹಿಸಬಹುದು ಎಂದು ಚೆನ್ನೈನ ಯುಎಸ್ ಕಾನ್ಸುಲ್ ಜನರಲ್ ಕ್ರಿಸ್ಟೋಫರ್ ಹಾಡ್ಜಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುಎಸ್‌ನ ಒಟ್ಟು 18 ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಈ ಮೇಳದಲ್ಲಿ ಭಾಗವಹಿಸಲಿದ್ದಾರೆ. ಅಮೆರಿಕನ್ ಉನ್ನತ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ, ವೈವಿಧ್ಯತೆ ಮತ್ತು ನಾವೀನ್ಯತೆಯ ಪ್ರತಿಬಿಂಬವಾಗಿದೆ. 

ಆಧುನಿಕ ತಂತ್ರಜ್ಞಾನದಡಿ ಉನ್ನತ ಶಿಕ್ಷಣದಲ್ಲಿ ಯುಎಸ್‌-ಭಾರತದ ಉಪಕ್ರಮವು ವಾಣಿಜ್ಯ ಬಾಹ್ಯಾಕಾಶ, ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಮತ್ತು ಹಸಿರು ಹೈಡ್ರೋಜನ್‌ನಂತಹ ಕ್ಷೇತ್ರಗಳಲ್ಲಿ ವ್ಯಾಸಂಗಕ್ಕೆ ಉತ್ತಮ ಅವಕಾಶ ಕಲ್ಪಿಸಲಾಗುತ್ತಿದೆ. ಇದು ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ವೃದ್ಧಿಯಾಗಲು ಸಹಕಾರಿಯಾಗಲಿದೆ ಎಂದರು.

ಮೇಳದಲ್ಲಿ ಭಾಗವಹಿಸುವ ಯುಎಸ್‌ ಅಧಿಕಾರಿಗಳು ಯುಎಸ್‌ನಲ್ಲಿ ಉನ್ನತ ಶಿಕ್ಷಣಕ್ಕೆ ಇರುವ ಅವಕಾಶಗಳು ಹಾಗೂ ವೀಸಾ ಕುರಿತ ಮಾಹಿತಿ ನೀಡಲಿದ್ದಾರೆ. 

ಆಸಕ್ತರು https://yocket.com/events/graduate-student-fair-a-world-class-education-awaits-you-in-the-us-3533 ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯ ಎಂದು ತಿಳಿಸಲಾಗಿದೆ.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?