ಕನ್ನಡಪ್ರಭ ವಾರ್ತೆ ಔರಾದ್
ಕನ್ನಡ ಭಾಷೆಯ ಕುರಿತಾದ ಚಿಂತನ ಮಂಥನ, ಕನ್ನಡ ಬೆಳವಣಿಗೆಗೆ ಪ್ರಸ್ತುತ ಅವಶ್ಯಕತೆಗಳ ಕುರಿತು ಚರ್ಚೆ, ಐತಿಹಾಸಿಕ ಹಿನ್ನೆಲೆ ಸೇರಿದಂತೆ ಅನೇಕ ವಿಚಾರಗಳು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆಯಾಗುತ್ತವೆ. ಈ ಸಮ್ಮೇಳನ ಪ್ರಪಂಚದಲ್ಲಿರುವ ಸಮಸ್ತ ಕನ್ನಡಿಗರ ಹಬ್ಬವಾಗಿದ್ದು, ಗಡಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನ ಯಶಸ್ವಿಗೊಳಿಸಬೇಕು. ಕನ್ನಡ ಅನ್ನ ನೀಡುವ ಭಾಷೆಯಾಗುವಂತೆ ವಿನೂತನ ಪ್ರಯೋಗಗಳನ್ನು ಹಾಕಿಕೊಳ್ಳಬೇಕು. ಈ ಸಂಭ್ರಮ ಉಲ್ಲಾಸ ದಿನವೊಂದಕ್ಕೆ ಸೀಮಿತವಾಗದೆ ನಿತ್ಯ ನಿರಂತರ ಜ್ಯೋತಿಯಾಗಿ ಕನ್ನಡಿಗರ ಹೃದಯದಲ್ಲಿ ಉರಿಯುತ್ತಿರಬೇಕು ಎಂದರು.ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿ ಮಾತನಾಡಿ, ಔರಾದ್ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕು. ಮಂಡ್ಯದಲ್ಲಿ ನಡೆಯುವ ಸಮ್ಮೇಳನ ತುಂಬಾ ವಿಶೇಷವಾಗಿರಲಿದೆ ಎಂದರು.ಪಟ್ಟಣ ಪಂಚಾಯತ್ ಅಧ್ಯಕ್ಷೆ ಸರುಬಾಯಿ ಘುಳೆ, ತಹಸೀಲ್ದಾರ್ ಸಂಗಯ್ಯ ಸ್ವಾಮಿ, ಸಿಪಿಐ ರಘುವೀರಸಿಂಗ್ ಠಾಕೂರ್, ಟಿಎಚ್‌ಒ ಡಾ. ಗಾಯತ್ರಿ, ಪಿಎಸ್‌ಐ ವಾಸೀಮ್ ಪಟೇಲ್, ರೇಣುಕಾ ಭಾಲೇಕರ್, ಮಾಣಿಕ ನೇಳಗಿ, ರವೀಂದ್ರ ಮೇತ್ರೆ, ಅನೀಲಕುಮಾರ ಮೆಲ್ದೊಡ್ಡಿ, ಕಸಾಪ ಅಧ್ಯಕ್ಷ ಶಾಲಿವಾನ ಉದಗಿರೆ, ಜಗನ್ನಾಥ ಮೂಲಗೆ, ಬಿಎಂ ಅಮರವಾಡಿ, ಗಜಾನನ ಮಳ್ಳಾ, ಜಗನ್ನಾಥ ದೇಶಮುಖ, ಮಹಾನಂದಾ ಎಂಡೆ, ಅಂಬಾದಾಸ ನಳಗೆ, ಅಮೃತರಾವ್ ಬಿರಾದಾರ, ಮಲ್ಲಿಕಾರ್ಜುನ ಟಂಕಸಾಲೆ ಸೇರಿದಂತೆ ಇನ್ನಿತರರಿದ್ದರು.