ಸಿಎಸ್‌ಆರ್ ಅನುದಾನ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಬಳಸಿ

KannadaprabhaNewsNetwork | Published : Jan 12, 2025 11:45 PM

ಸಾರಾಂಶ

ಕೆಲವು ಕಂಪನಿಗಳು ತಮಗೂ ಸಮಾಜ ಸೇವೆಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿವೆ. ಅವರು ಸ್ಥಳೀಯರಿಗೆ ಒಳ್ಳೆಯದು ಮಾಡಿದರೆ ನಾವುಗಳು ಸಹ ಅವರ ಪರವಾಗಿ ಸಹಾಯಕ್ಕೆ ನಿಲ್ಲುತ್ತೇವೆ. ಇಲ್ಲದೇ ಹೋದರೆ ತೊಂದರೆ ಕೊಡುವುದು ನಮಗೆ ಗೊತ್ತಿದೆ. ಅವರು ಅದನ್ನೆಲ್ಲ ಅನುಭವಿಸಬೇಕಾಗುತ್ತದೆ ಎಂದು ಶಾಸಕ ಕೊತ್ತೂರು ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರಕಂಪನಿಗಳಿಂದ ವಸೂಲಿ ಮಾಡುವ ಜಾಯಮಾನ ನಮ್ಮದಲ್ಲ. ನಿಮಗೆ ಬೇಕಾದರೆ ಹಣ ನಾವೇ ಕೊಡತ್ತೇವೆ, ಸ್ಥಳೀಯರಿಗೆ ಒಳ್ಳೆಯದು ಮಾಡಲಿ ಇಲ್ಲದೇ ಹೋದರೆ ಕಂಪನಿಗಳಿಗೆ ತೊಂದರೆ ಕೊಡುವುದು ಗ್ಯಾರಂಟಿ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.ತಾಲೂಕಿನ ವಕ್ಕಲೇರಿ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ಹೊಂಡಾ ಕಂಪನಿಯಿಂದ ನಡೆದ ಉಚಿತ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿ, ಕೆಲವು ಕಂಪನಿಗಳು ನಿರಂತರವಾಗಿ ಇಂತಹ ಸಾಮಾಜಿಕ ಚಟುವಟಿಕೆಗಳನ್ನು ಮಾಡಿಕೊಂಡು ಬಂದಿರುವ ಬಗ್ಗೆ ಶ್ಲಾಘಿಸಿದರಿ.

ಸ್ಥಳಿಯರಿಗೆ ಒಳ್ಳೆಯದು ಮಾಡಿ

ಆದರೆ ಕೆಲವು ಕಂಪನಿಗಳು ತಮಗೂ ಸಮಾಜ ಸೇವೆಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿವೆ. ಅವರು ಸ್ಥಳೀಯರಿಗೆ ಒಳ್ಳೆಯದು ಮಾಡಿದರೆ ನಾವುಗಳು ಸಹ ಅವರ ಪರವಾಗಿ ಸಹಾಯಕ್ಕೆ ನಿಲ್ಲುತ್ತೇವೆ. ಇಲ್ಲದೇ ಹೋದರೆ ತೊಂದರೆ ಕೊಡುವುದು ನಮಗೆ ಗೊತ್ತಿದೆ. ಅವರು ಅದನ್ನೆಲ್ಲ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಕೈಗಾರಿಕೆಗಳ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅನುದಾನವನ್ನು ಶಿಕ್ಷಣ ಹಾಗೂ ಆರೋಗ್ಯಕ್ಕೆ ಮೊದಲ ಅಧ್ಯತೆ ನೀಡಬೇಕು ನಂತರದಲ್ಲಿ ಪರಿಸರ ಸ್ನೇಹಿ ಚಟುವಟಿಕೆಗಳಿಗೆ ಬಳಕೆಯಾಗಬೇಕು, ಬಡವರು ಮತ್ತು ವೃದ್ಧರು ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಬೇಕು ಗ್ರಾಮೀಣ ಪ್ರದೇಶದ ಜನರಿಗಾಗಿ ಇಂತಹ ದೊಡ್ಡ ಮಟ್ಟದಲ್ಲಿ ಆರೋಗ್ಯ ಮೇಳವನ್ನು ಆಯೋಜಿಸಿರುವುದು ನಿಜಕ್ಕೂ ಸಂತೋಷ ತಂದಿದೆ. ತಜ್ಞ ವೈದ್ಯರು ಬಂದಿದ್ದು, ಪ್ರತಿಯೊಬ್ಬರೂ ಈ ಆರೋಗ್ಯ ಮೇಳವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಸಾಮಾಜಿಕ ಕಾರ್ಯಾಕ್ಕೆ ಕೊಡುಗೆ

ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ೨೦೧೩ ರಲ್ಲಿ ನರಸಾಪುರ ಕೈಗಾರಿಕಾ ಪ್ರದೇಶವು ಪ್ರಾರಂಭಕ್ಕೂ ಮುಂಚೆ ಸ್ಥಳೀಯವಾಗಿ ಶುದ್ದವಾದ ಕುಡಿಯುವ ನೀರಿಗೆ ಹಾಗೂ ಉದ್ಯೋಗಕ್ಕೆ ಸಮಸ್ಯೆಯಾಗಿತ್ತು. ಇವತ್ತು ಸಾಕಷ್ಟು ಉದ್ಯೋಗ ನೀಡಿದೆ ಜೊತೆಗೆ ಕೈಗಾರಿಕೆಗಳ ಸಿಎಸ್‌ಆರ್ ಅನುದಾನದಿಂದ ಶುದ್ಧ ನೀರಿನ ಘಟಕಗಳು, ಸರ್ಕಾರಿ ಶಾಲೆಗಳ ದುರಸ್ತಿ, ಹೈ ಮಾಸ್ಟ್‌ ದೀಪಸ್ತಂಭಗಳು ಸೇರಿದಂತೆ ಸಾಮಾಜಿಕ ಚಟುವಟಿಕೆಗಳಿಗೆ ಅದ್ಯತೆ ನೀಡಿದ್ದಾರೆ ಎಂದರು.ಆರೋಗ್ಯ ರಕ್ಷಣೆಗೆ ಒತ್ತು ನೀಡಿ

ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಿಕೊಳ್ಳುವುದು ಅತೀ ಅಗತ್ಯವಿದೆ ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಕೈಗಾರಿಕಗಳು ಇಂತಹ ಆರೋಗ್ಯ ಮೇಳಗಳನ್ನು ನಡೆಸಿವೆ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಇಂತಹ ಶಿಬಿರಗಳನ್ನು ಮುಂದಿನ ದಿನಗಳಲ್ಲಿ ಪ್ರತಿ ಹೋಬಳಿ ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ನಡೆಸಿದರೆ ಇನ್ನಷ್ಟು ಅನುಕೂಲವನ್ನು ಪಡೆಯಬಹುದು ಎಂದರು.ಸಮಾರಂಭದಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್, ಹೊಂಡಾ ಕಂಪನಿಯ ವಿಭಾಗೀಯ ಮುಖ್ಯಸ್ಥ ಸುನಿಲ್ ಕುಮಾರ್ ವಿಠ್ಠಲ್, ಆಡ್ಮೀನ್ ಜಯಂತ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರಳಿ, ಲೋಕೇಶ್, ರಾಜಣ್ಣ, ಸದಸ್ಯರಾದ ಚಿನ್ನಮ್ಮ, ಬೊಟ್ಟುರಾಜಪ್ಪ, ಮಂಜುನಾಥ್, ಜ್ಯೋತಿ ಮುನಿಯಪ್ಪ, ಮುಖಂಡರಾದ ಹಿನಾಯತ್, ರಘು, ಹನುಮಂತಣ್ಣ, ರಾಮಯ್ಯ, ಪಿಡಿಒ ಭಾರತಿ ಮುಂತಾದವರು ಇದ್ದರು.

೧೨ಕೆಎಲ್‌ಆರ್-೫,,,,,,,,ಕೋಲಾರ ತಾಲೂಕಿನ ವಕ್ಕಲೇರಿ ಪ್ರೌಢಶಾಲಾ ಆವರಣದಲ್ಲಿ ಹೊಂಡಾ ಕಂಪನಿಯಿಂದ ಏರ್ಪಡಿಸಿದ್ದ ಉಚಿತ ಆರೋಗ್ಯ ಮೇಳವನ್ನು ಶಾಸಕ ಕೊತ್ತೂರು ಮಂಜುನಾಥ್ ಉದ್ಘಾಟಿಸಿದರು.

Share this article