ಕನ್ನಡಪ್ರಭ ವಾರ್ತೆ ಮಾಲೂರುತಾಲೂಕಿನಲ್ಲಿರುವ ಉದ್ದಿಮೆಗಳು ಹಾಗೂ ಕೈಗಾರಿಕಾ ಸಂಸ್ಥೆಗಳು ಸಿ.ಎಸ್.ಆರ್ ಅನುದಾನ ಸ್ಥಳೀಯ ಸರ್ಕಾರಿ ಶಾಲಾ ಕಟ್ಟಡಕ್ಕೆ ಬಳಕೆ ಮಾಡುವ ಮೂಲಕ ಹೆಚ್ಚಿನ ರೀತಿಯಲ್ಲಿ ಶೈಕ್ಷಣಿಕ ಪ್ರಗತಿಗೆ ಉದ್ದಿಮೆದಾರರು ಸಹಕರಿಸಬೇಕೆಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ತಾಲೂಕಿನ ಮಡಿವಾಳ ಗ್ರಾಪಂ ವ್ಯಾಪ್ತಿಯ ಕಾಡದೇನಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಘಟಕ, ಮತ್ತು ಹನುಮನಾಯಕನಹಳ್ಳಿ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡ ಮತ್ತು ಮಡಿವಾಳ ಗ್ರಾಮದಲ್ಲಿ ಡಿಜಿಟೆಲ್ ಗ್ರಂಥಾಲಯ ಹಾಗೂ ಶಾಲಾ ಕಟ್ಟಡ ಉದ್ಘಾಟನೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು, ಅನುದಾನ ಸದ್ಬಳಕೆಯಾಗಲಿ
ಆರೋಗ್ಯ ತಪಾಸಣಾ ಶಿಬಿರ
ಇದುವರೆಗೂ ೨೪ ಗ್ರಾಮ ಪಂಚಾಯ್ತಿಗಳಲ್ಲಿ ಎಂ.ವಿ.ಜೆ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರಗಳಲ್ಲಿ ೧೧ ಸಾವಿರಕ್ಕೂ ಹೆಚ್ಚು ಮಂದಿ ಸದುಪಯೋಗ ಪಡಿಸಿಕೊಂಡಿದ್ದಾರೆ. ೧೦೦ಕ್ಕೂ ಹೆಚ್ಚು ಜನಕ್ಕೆ ಉಚಿತವಾಗಿ ಶಸ್ತ್ರಚಿಕಿತೆಯನ್ನು ಮಾಡಲಾಗಿದೆ, ಅಲ್ಲದೆ ಕೆಲ ರಾಜಕಾರಣಿಗಳು ಪ್ರಚಾರ ಪಡೆದುಕೊಳ್ಳಲು ಮಹನೀಯರ ಹೆಸರಿನಲ್ಲಿ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ ಶಾಸಕ ಕೆ ವೈ ವೈ ನಂಜೇಗೌಡ ಲೇವಡಿ ಮಾಡಿದರು.ಎಂ.ಸಿ.ಹಳ್ಳಿ ಶಾಲೆಗೆ ಶಿಕ್ಷಕರ, ವಿದ್ಯಾರ್ಥಿಗಳ ಬೇಡಿಕೆಗಳಿಗೆ ಶಾಸಕ ನಂಜೇಗೌಡರು ಸ್ಪಂದಿಸಿ ರಂಗಮಂದಿರ ನಿರ್ಮಿಸಿಕೊಡಲಾಗಿವುದು. ಇನ್ನೂಳಿದ ೨ ಬೇಡಿಕೆಗಳನ್ನು ಸ್ಥಳಿಯ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ, ಅಧ್ಯಕ್ಷೆಗೆ ಜವಾಬ್ದಾರಿ ವಹಿಸಿದರು.24 ಗ್ರಾಪಂಗಳಲ್ಲಿ ಆರೋಗ್ಯ ಶಿಬಿರಡಾ.ಪ್ರಮೋದ್ ಮಾತನಾಡಿ ಮಾಲೂರು ತಾಲೂಕಿನಲ್ಲಿ ಶಾಸಕ ಸಹಕಾರದಿಂದ ೨೪ ಪಂಚಾಯಿತಿಯಲ್ಲಿ ಎಂವಿಜೆ ಕಾಲೇಜು ವತಿಯಿಂದ ಸಾರ್ವಜನಿಕರ ಉಪಯೋಗಕ್ಕೆ ಉಚಿತವಾಗಿ ಆರೋಗ್ಯ ಶಿಭಿರಗಳನ್ನು ಆಯೋಜಿಸಲಾಗಿದ್ದು ಶಿಬಿರಗಳಲ್ಲಿ ಗ್ರಾಮೀಣ ಭಾಗದ ಜನತೆಗೆ ಉಪಯೋಗವಾಗಿದ್ದು ಉಳಿದ ಪಂಚಾಯಿತಿಗಳಲ್ಲಿ ಉಚಿತ ಶಿಬಿರಗಳನ್ನು ನಡೆಸಲಾಗುವುದು ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ್, ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯನರಸಿಂಹ, ಹಿರಿಯ ಮುಖಂಡ ಚಂದ್ರೇಗೌಡ, ಗ್ರಾ.ಪಂ. ಅಧ್ಯಕ್ಷೆ ಪದ್ಮಾವತಿ ಸುರೇಶ್, ಉಪಾಧ್ಯಕ್ಷೆ ಲಾವಣ್ಯ, ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಕುಮಾರಿ ಜಯರಾಮೇಗೌಡ, ಪದ್ಮಶ್ರೀರಾಮ್, ಐಟಿಸಿ ಆಹಾರ ಉತ್ಪಾದನ ಘಟಕದ ನೋಯಿಲ್ ಫನಾಂಡಿಸ್, ಚಿತ್ತರಂಜನ್ ಇನ್ನಿತರರು ಹಾಜರಿದ್ದರು.