ಕನ್ನಡಪ್ರಭ ವಾರ್ತೆ ಸಂಚಿ ಹೊನ್ನಮ್ಮ ಮತ್ತು ತ್ರಿವೇಣಿ ವೇದಿಕೆ(ಮಂಡ್ಯ)
ನಗರದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಸಂಚಿ ಹೊನ್ನಮ್ಮ ಮತ್ತು ತ್ರಿವೇಣಿ ವೇದಿಕೆ(ಸಮಾನಂತರ ವೇದಿಕೆ-2)ಯಲ್ಲಿ ನಡೆದ ಕೃಷಿ ಮತ್ತು ಕೃಷಿಕರ ಸಂಕಷ್ಟ: ಸವಾಲುಗಳು ಮತ್ತು ಪರಿಹಾರಗಳು ಗೋಷ್ಠಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಈಗ
ಕೃಷಿಯಲ್ಲಿ ಹಲವು ಮಜಲಿದೆ. ಭಾರತವನ್ನು ಕೃಷಿ ಪ್ರಧಾನ ರಾಷ್ಟ್ರ ಎಂದು ಕರೆಯುತ್ತೇವೆ. ಆದರೆ ರೈತನಿಗೆ ಕೃಷಿಯಿಂದ ಹೆಚ್ಚಿನ ಲಾಭವಾಗಿಲ್ಲ. ಭೂ ಹಿಡುವಳಿ ಮತ್ತು ದುಡಿಯುವ ಕೈಗಳು ಕಡಿಮೆಯಾಗುತ್ತಿವೆ. ಯುವಕರು ನಗರ ಸೇರುತ್ತಿದ್ದಾರೆ. ಹಳ್ಳಿಗಳು ವೃದ್ಧಾಶ್ರಮ ಆಗುತ್ತಿವೆ. ಈಗ ಕೃಷಿ ಮಾಡುವವರು 60 ವರ್ಷ ಮೇಲಿನವರು ಎಂದು ಹೇಳಿದರು.ರಾಸಾಯನಿಕ ಬಳಸದೆ ಕೃಷಿ ಮಾಡುತ್ತಿದ್ದ ರೈತರ ಮನವೊಲಿಸಿ ರಾಸಾಯನಿಕ ಗೂಬ್ಬರ ಬಳಕೆ ಆರಂಭಿಸಿದೆವು. ಆದರೆ ಈಗ ಇಡೀ ದೇಶವೇ ಸಾವಯವ ಕೃಷಿ, ಶೂನ್ಯ ಕೃಷಿ ನಡೆಸಬೇಕು ಎಂದು ಹೇಳುತ್ತಿರುವ ಹೊತ್ತಿನಲ್ಲಿ ನಾವು ಮತ್ತೆ ಹಳೆ ಹೊಸ ವಿಚಾರ ಮಂಡನೆ ಮೂಲಕ ರೈತರಲ್ಲಿ ಗೊಂದಲ ಮೂಡಿಸುತ್ತಿದ್ದೇವೆ. ಇದರ ಬದಲಿಗೆ ರೈತರಲ್ಲಿ ಅರಿವು ಮೂಡಿಸುವ ಕೆಲಸ ನಾವು ಮಾಡಬೇಕು ಎಂದು ಅವರು ತಿಳಿಸಿದರು.
ಕೃಷಿ ಮತ್ತು ಕೃಷಿಕರ ಸಂಕಷ್ಟ: ಪರಿಹಾರಗಳು ಕುರಿತು ಆರ್ಥಿಕ ತಜ್ಞ
ಮೊದಲಿಗೆ ಕೃಷಿ ಪಾರಂಪರಿಕವಾಗಿತ್ತು. ನಮ್ಮ ಹಳ್ಳಿ, ಕೃಷಿ ಬದುಕಾಗಿತ್ತು. ಸುಸ್ಥಿರ ಕೃಷಿ ನಮ್ಮದಾಗಿತ್ತು. ಜಾಗತೀಕರಣದ ಪ್ರಭಾವದಿಂದ ಮುಕ್ತ ಮಾರುಕಟ್ಟೆ ಪ್ರವೇಶವಾಗಿ ಬೀಜ, ಗೊಬ್ಬರ, ಔಷಧಗಳ ಬೆಲೆ ಹೆಚ್ಚಾಗಿ ಉತ್ಪಾದನಾ ವೆಚ್ಚವೂ ಹೆಚ್ಚಾಗಿದೆ. ಈ ಎಲ್ಲಾ ಸವಾಲನ್ನು ಗೆದ್ದರೂ ಮಾರುಕಟ್ಟೆಯಲ್ಲಿ ರೈತ ಸೋಲುತ್ತಾನೆ ಎಂದು ರೈತರ ಸಮಸ್ಯೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಕೃಷಿ ತಜ್ಞ ಡಾ.ಎ.ಪಿ. ಮಲ್ಲಿಕಾರ್ಜುನ ಗೌಡ ಆಶಯ ನುಡಿಗಳನ್ನಾಡಿದರು. ಬಸವೇಗೌಡ ಖರಡ್ಯ ನಿರ್ವಹಿಸಿದರು. ಎನ್.ಬಿ. ಗೋಪಾಲಗೌಡ ನಿರೂಪಿಸಿದರು. ವಿ.ಎನ್. ಶಿವಕುಮಾರ್ ವಂದಿಸಿದರು. ಕೆ.ಎಂ. ಶಿವಸ್ವಾಮಿ ಸ್ವಾಗತಿಸಿದರು.
-ಕೃಷಿ ತಜ್ಞ ಸುನಿಲ್ ಶಿರವಾಳಕೀಟ ನಾಶಕಗಳು ಪೀಡನಾಶಕಗಳಾಗಿವೆ. ಅಧಿಕ ಇಳುವರಿಗಾಗಿ ರಾಸಾಯನಿಕ ಬಳಕೆ ಹೆಚ್ಚಾಗಿದೆ. ಕೀಟ ನಾಶಕವನ್ನು ಕಡಿಮೆ ಬಳಸಿದರೂ ತೊಂದರೆ ಎನ್ನುವ ಸ್ಥಿತಿ ಇದೆ. ಮಣ್ಣು, ನೀರು, ಗಾಳಿ ಎಲ್ಲವೂ ಮಲಿನವಾಗುತ್ತಿದೆ.