ವಿವೇಚನೆಯಿಂದ ನೈಸರ್ಗಿಕ ಸಂಪನ್ಮೂಲ ಬಳಸಿ: ವಿಶ್ವನಾಥಗೌಡ

KannadaprabhaNewsNetwork |  
Published : Jun 06, 2024, 12:32 AM IST
೫ ಬೀರೂರು ೨ಬೀರೂರಿನ ಬ್ರೈಟ್ ಫ್ಯೂಚರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಕನ್ನಡ ಸಂಘದ ಅಧ್ಯಕ್ಷ ಹೆಚ್.ಸಿ.ವಿಶ್ವನಾಥಗೌಡ ಮಕ್ಕಳೊಂದಿಗೆ ಸಸಿ ನೆಡುವ ಮೂಲಕ ಆಚರಿಸಿದರು. | Kannada Prabha

ಸಾರಾಂಶ

ಬೀರೂರು, ಪರಿಸರ ಎಂದರೆ ಜನಜೀವನ, ಕೃಷಿ, ಪ್ರಾಣಿ ಸಂಕುಲ, ಎಲ್ಲವೂ ಒಂದಕ್ಕೊಂದು ಕೊಂಡಿಯಂತೆ ಬೆಸೆದು ಕೊಂಡಿದೆ ಎಂದು ಕನ್ನಡ ಸಂಘದ ಅಧ್ಯಕ್ಷ ಎಚ್.ಸಿ.ವಿಶ್ವನಾಥಗೌಡ ತಿಳಿಸಿದರು.

- ಬ್ರೈಟ್ ಫ್ಯೂಚರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಕನ್ನಡಪ್ರಭ ವಾರ್ತೆ ಬೀರೂರು

ಪರಿಸರ ಎಂದರೆ ಜನಜೀವನ, ಕೃಷಿ, ಪ್ರಾಣಿ ಸಂಕುಲ, ಎಲ್ಲವೂ ಒಂದಕ್ಕೊಂದು ಕೊಂಡಿಯಂತೆ ಬೆಸೆದು ಕೊಂಡಿದೆ ಎಂದು ಕನ್ನಡ ಸಂಘದ ಅಧ್ಯಕ್ಷ ಎಚ್.ಸಿ.ವಿಶ್ವನಾಥಗೌಡ ತಿಳಿಸಿದರು.ಬ್ರೈಟ್ ಫ್ಯೂಚರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಿಸರದಲ್ಲಿ ಇಂತಹ ಒಂದು ಕೊಂಡಿ ಹದಗೆಟ್ಟರು ಎಲ್ಲವೂ ಹಾಳಾಗುತ್ತದೆ. ಇಂತಹ ವಿಷಯಗಳನ್ನು ನಾವು ವಿವೇಚನೆಯಿಂದ ಅರ್ಥಮಾಡಿಕೊಂಡು ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡರೆ ಕೃಷಿ ಸೇರಿದಂತೆ ಎಲ್ಲವೂ ಸುವ್ಯವಸ್ಥಿತವಾಗಿ ಪರಸ್ಪರ ಬೆಸೆದು ಕೊಂಡಿರುತ್ತವೆ ಎಂಬುದನ್ನು ಮರೆಯಬಾರದು ಎಂದು ನೆನಪಿಸಿದರು.

ಪರಿಸರ ರಕ್ಷಿಸುವ ಸಲುವಾಗಿ ಈ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವದಲ್ಲಿ ದಾಖಲಾಗುವ ಪ್ರತಿ ಮಗುವಿ ನೊಂದಿಗೆ ಶಾಲೆಗಳಲ್ಲಿ ಒಂದು ಗಿಡ ನೆಟ್ಟು, ಮಗುವಿಗೊಂದು ಗಿಡ, ಶಾಲೆಗೊಂದು ವನ ಎನ್ನುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಕೃತಿ ಕ್ಷೇತ್ರವನ್ನು ಶಾಲೆಗಳಲ್ಲಿಯೇ ನಿರ್ಮಾಣ ಮಾಡಲು ಶಿಕ್ಷಕರು ಮುಂದಾಗಬೇಕು ಎಂದು ತಿಳಿಸಿದರು.ನಂತರ ಮಾತನಾಡಿದ ಕ್ರಮುಖ ಪ್ರೌಢಶಾಲೆ ಮುಖ್ಯ ಶಿಕ್ಷಕ ತಮ್ಮಣಪ್ಪ, ಪರಿಸರದಲ್ಲಿನ ಅರಣ್ಯ ಕಡಿದು ಹಾಕಿದ್ದರಿಂದ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಈ ನಮ್ಮ ಭೂಮಿ ಮರು ಚೇತರಿಕೆಗೆ ಎಡೆಯಿಲ್ಲದೆ ಅವನತಿಯೆಡೆಗೆ ಪಯಣ ಬೆಳೆಸಿದೆ. ತಾಪಮಾನ ಏರಿಕೆಯಿಂದ ಮಾನವ ಸಂಪನ್ಮೂಲ ಅಭಿವೃದ್ಧಿಗಷ್ಟೆ ಅಲ್ಲದೆ ಇದೀಗ ಕೈಗೆತ್ತಿಕೊಳ್ಳುತ್ತಿರುವ ಹಲವಾರು ಅಭಿವೃದ್ಧಿ ಯೋಜನೆಗಳು ವಿಫಲವಾಗುವ ಆಂತಕವಿದೆ.ಮಕ್ಕಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಪರಿಸರ ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಪೋಷಕರು ಇದ್ದಕ್ಕೆ ಸಹಕರಿಸಬೇಕು. ಒಂದು ಎಕರೆ ಪ್ರದೇಶದಲ್ಲಿರುವ ಮರಗಳು ಪ್ರತಿ ವರ್ಷ ೧೮ ಜನರಿ ಗಾಗುವಷ್ಟು ಆಮ್ಲಜನಕ ಉತ್ಪಾದಿಸುತ್ತವೆ. ಅದನ್ನ ಮರೆಯಬಾರದು ಉಸಿರಾಡಲು ಅನುಕೂಲವಾಗುವ ಈ ಆಮ್ಲಜನಕ ನೀಡುವ ಗಿಡಮರಗಳನ್ನು ನಗರಿಕರಣದ ನೆಪದಲ್ಲಿ ಕಡಿದು ಹಾಕಲಾಗುತ್ತದೆ ಎಂದರು. ಬ್ರೈಟ್ ಫ್ಯೂಚರ್ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಸಬೀನಮೇರಿ, ಹಿಂದಿನ ದಿನಗಳಲ್ಲಿ ಪ್ರಕೃತಿಗೆ ದೈವತ್ವ ಸ್ಥಾನವನ್ನು ಖುಷಿಮುನಿಗಳು ನೀಡಿದ್ದಾರೆ. ಆದರಿಂದ ಪ್ರತಿಯೊಬ್ಬರು ಸಸಿಗಳನ್ನು ನೆಡುವ ಮೂಲಕ ಪರಿಸರದ ಬಗ್ಗೆ ಕಾಳಜಿಯನ್ನು ಮಕ್ಕಳಿಗೆ ತೋರಿಸಬೇಕು. ನಮ್ಮ ಸುತ್ತ ಮುತ್ತಲಿನ ಪರಿಸರ ಸಂರಕ್ಷಣೆಗೂ ಮುಂದಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಾಘವೇಂದ್ರ, ಫಯಾಜ್, ಪ್ರೇಮಾ, ಉಮೇಶ್, ಸೇರಿದಂತೆ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.-- ಬಾಕ್ಸ್---:ಎಸ್ಎಸ್‌ಎಲ್ ಸಿಯಲ್ಲಿ ಬೀರೂರು ಶೈಕ್ಷಣಿಕ ವಲಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪವಿತ್ರಾ, ಎನ್ನುವ ವಿದ್ಯಾರ್ಥಿ ೮ನೇ ತರಗತಿಯಿಂದಾ ತನ್ನ ಜೊತೆ ಓದುತ್ತಿದ್ದ ಸಹಪಾಠಿ ಹರ್ಷಿತಾ ಸ್ನೇಹಿತೆಗೆ ಶ್ರವಣ ದೋಷವಿತ್ತು. ಪವಿತ್ರಾ ಅವಳಿಗೆ ಅರ್ಥವಾಗುವಂತೆ ತನ್ನ ಜೊತೆ ಗೂಡಿಸಿಕೊಂಡು ಅಭ್ಯಾಸ ಮಾಡಿ ಎಸ್ಎಸ್‌ಎಲ್ ಸಿ ಪರೀಕ್ಷೆ ತೇರ್ಗಡೆಯಾಗಲು ಸಹಕಾರ ನೀಡಿದ್ದಕ್ಕಾಗಿ ಪವಿತ್ರಾ ಮಾನವಿತೆ ಇತರರಿಗೆ ಮಾದರಿಯಾಗಲಿ ಎನ್ನುವ ನಿಟ್ಟಿನಲ್ಲಿ ಆಡಳಿತ ಮಂಡಳಿ ೨೫ಸಾವಿರ ರು. ನಗದು ಬಹುಮಾನ ನೀಡಿ ಇಂದು ಗೌರವಿಸಿರುವುದು ಸ್ವಾಗತಾರ್ಹ

ಎಚ್.ಸಿ ವಿಶ್ವನಾಥಗೌಡ

ಕನ್ನಡ ಸಂಘದ ಅಧ್ಯಕ್ಷ.

೫ ಬೀರೂರು ೨ಬೀರೂರಿನ ಬ್ರೈಟ್ ಫ್ಯೂಚರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಕನ್ನಡ ಸಂಘದ ಅಧ್ಯಕ್ಷ ಎಚ್.ಸಿ.ವಿಶ್ವನಾಥಗೌಡ ಮಕ್ಕಳೊಂದಿಗೆ ಸಸಿ ನೆಡುವ ಮೂಲಕ ಆಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತರಕಾರಿಯಲ್ಲಿ ಹಾನಿಕಾರಕ ಅಂಶ ಪತ್ತೆ: ಶೀಘ್ರ ಸೂಕ್ತ ಮಾರ್ಗಸೂಚಿ
ಸಿಲಿಂಡರ್‌ಗೆ ಹಾಹಾಕಾರ: ಊಟ, ತಿಂಡಿ ಹರೋಹರ!