ಕನ್ನಡಪ್ರಭ ವಾರ್ತೆ ಮಾಲೂರುಮಾರಿಕಾಂಬ ದೇವಾಲಯ ಟ್ರಸ್ಟಿನವರು ಭಕ್ತರು ಹುಂಡಿಗೆ ಹಾಕಿದ ಹಣದಿಂದ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.ಶ್ರೀ ಕ್ಷೇತ್ರ ಮಾರಿಕಾಂಬ ದೇವಾಲಯ, ಮಾಲೂರು ಮಾಲೂರು ಪ್ರರಸಭಾ ಕಾರ್ಯಾಲಯಕ್ಕೆ ೫ ಸ್ವಚ್ಛತಾ ವಾಹನಗಳನ್ನು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಶಾಸಕ ಕೆ.ವೈನಂಜೇಗೌಡ ಅವರು ಪುರಸಭೆ ಅಧ್ಯಕ್ಷರು ಹಾಗೂ ಮುಖ್ಯಧಿಕಾರಿಗಳಿಗೆ ಸ್ವಚ್ಛತಾ ವಾಹನಗಳ ಕೀಗಳನ್ನು ಹಸ್ತಾಂತರಿಸಿ ಮಾತನಾಡಿದರು.ಸ್ವಚ್ಛತಾ ವಾಹನ ಕೊಡುಗೆ
ಮುಖ್ಯಮಂತ್ರಿಗಳನ್ನು ವಿಶ್ವಾಸಕ್ಕೆ ಪಡೆದು ತಾಲೂಕಿಗೆ ಇಂಡಸ್ಟ್ರಿಯಲ್ ಕಾರಿಡಾರ್ ರಸ್ತೆಯನ್ನು ಮಂಜೂರು ಮಾಡಿಸಿದ್ದು ತಾಲೂಕಿನಲ್ಲಿ ೨,೧೦೦ ಕೋಟಿ ರೂಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಯಾಗಲಿದೆ. ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳು ಹಾಗೂ ಯೋಚನೆಗಳು ಕಾರ್ಯರೂಪಕ್ಕೆ ತರಲು ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡಿದರೆ ರಾಜಕಾರಣಿಗಳಿಗೂ ಹೆಸರು ಬರುತ್ತದೆ ಎಂದರು.
ತಹಸೀಲ್ದಾರ್ ಎಂ.ವಿ.ರೂಪ, ಪುರಸಭೆ ಅಧ್ಯಕ್ಷೆ ಕೋಮಲ ನಾರಾಯಣ, ಉಪಾಧ್ಯಕ್ಷ ವಿಜಯಲಕ್ಷ್ಮಿ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಮಹಮ್ಮದ್ ನಹಿಮ್ ಉಲ್ಲಾ, ಸ್ಥಾಯಿ ಸಮಿತಿಯ ಅಧ್ಯಕ್ಷ ಎ.ರಾಜಪ್ಪ, ಮಾರಿಕಾಂಬ ಟ್ರಸ್ಟ್ ಅಧ್ಯಕ್ಷ ಪಿ.ವೆಂಕಟೇಶ್, ಪುರಸಭೆ ಸದಸ್ಯರುಗಳಾದ ಆರ್.ವೆಂಕಟೇಶ್, ಮುರಳಿಧರ್, ಪರಮೇಶ್, ಇಮ್ತಿಯಾಜ್ ಖಾನ್, ವಿಜಯಲಕ್ಷ್ಮಿ ಮತ್ತಿತರರು ಇದ್ದರು.