ನಾಲಫಲಕದಲ್ಲಿ ಕನ್ನಡ ಬಳಕೆ ಕಡ್ಡಾಯ

KannadaprabhaNewsNetwork |  
Published : Oct 08, 2024, 01:03 AM IST
ಮಾಲೂರಿನ ಪುರಸಭೆಗೆ ಮುತ್ತಿಗೆ ಹಾಕಿದ ಕರವೇ ಜಿಲ್ಲಾಧ್ಯಕ್ಷ ರಾಘವೇಂದ್ರ ನೇತೃತ್ವದಲ್ಲಿ ಕರವೇ  ಕಾರ್ಯಕರ್ತರು ತಾಲೂಕಿನಲ್ಲಿ ಸರ್ಕಾರದ ಆದೇಶದಂತೆ ನಾಮಫಲಕಗಳಲ್ಲಿ ಶೇ.೬೦ ರಷ್ಟು ಕನ್ನಡ ಭಾಷೆ ಇರುವುದನ್ನು ಕಡ್ಡಾಯವಾಗಿಸಬೇಕೆಂದು ತಾಲೂಕು ಆಡಳಿತವನ್ನು ಒತ್ತಾಯಿಸಿದರು. | Kannada Prabha

ಸಾರಾಂಶ

ನಾಮಫಲಕಗಳಲ್ಲಿ ಶೇ.60 ರಷ್ಟು ಕಡ್ಡಾಯವಾಗಿ ಇರಬೇಕೆಂಬ ಆದೇಶವಿದ್ದರೂ ಪರಭಾಷಿಕ ವ್ಯಾಪಾರಿಗಳು ಆದೇಶ ಪಾಲಿಸದೆ ಅನ್ಯಭಾಷೆಯ ನಾಲಫಲಕ ಆಳವಡಿಸಿ ಉದ್ದಟನ ಪ್ರದರ್ಶಿಸುತ್ತಿದ್ದಾರೆ. ಅಂಗಡಿ ಮುಗ್ಗಟುಗಳು,ಖಾಸಗಿ ಶಾಲೆ,ಮಾಲ್‌ ,ಆಸ್ವತ್ರೆಗಳು ಕನ್ನಡ ಕಡೆಗಾಣಿಸಿ ಅನ್ಯಭಾಷಾ ಪ್ರೇಮ ಮೆರೆಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಾಲೂರು

ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳು ಹಾಗೂ ಕೈಗಾರಿಕೆ,ಅಂಗಡಿ ವ್ಯಾಪಾರ ಸ್ಥಳಗಳ ನಾಮಫಲಕ ಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆಯಲ್ಲಿರಬೇಕು ಎಂಬ ಸರ್ಕಾರದ ಆದೇಶ ಇದ್ದರೂ ಜಾರಿ ಮಾಡುವಲ್ಲಿ ನಿರ್ಲಕ್ಷ ತೋರುವುದನ್ನು ಖಂಡಿಸಿ ಇಲ್ಲಿನ ಕರವೇ ಕಾರ್ಯಕರ್ತರು ಇಲ್ಲಿನ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್‌ ಉದ್ಯಾನವನದಿಂದ ಪುರಸಭೆ ವೆರೆಗೆ ಮೆರವಣಿಗೆಯಲ್ಲಿ ಬಂದ ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಮೇ.ರಾಘವೇಂದ್ರ, ಮೂರು ಸಾವಿರ ಇತಿಹಾಸ ಇರುವ ಕನ್ನಡ ನುಡಿ ಅಧಿಕಾರಿಗಳಿಂದಲೇ ಸೂರಗಿಹೋಗುವಂತಾಗಿದೆ. ಬದುಕು ಕಟ್ಟಿಕೊಳ್ಳಲು ಅನ್ಯ ರಾಜ್ಯದಿಂದ ಬರುವ ಅನ್ಯ ಭಾಷಿಕರು,ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಎಲ್ಲಾ ನಗರಗಳು,ಪಟ್ಟಣಗಳು,ಹೋಬಳಿ ಕೇಂದ್ರಗಳಲ್ಲಿ ಈಗ ಪರಭಾಷಿತ ವ್ಯಾಪಾರಿಗಳದ್ದೇ ಅರ್ಭಟವಾಗಿದೆ ಎಂದರು.

ಮಸಿ ಬಳಿಯುವ ಎಚ್ಚರಿಕೆ

ಉದ್ದಮಗಳಲ್ಲಿನ ನಾಮಫಲಕಗಳಲ್ಲಿ ಶೇ.60 ರಷ್ಟು ಕಡ್ಡಾಯವಾಗಿ ಇರಬೇಕೆಂಬ ಆದೇಶವಿದ್ದರೂ ಪರಭಾಷಿಕ ವ್ಯಾಪಾರಿಗಳು ಆದೇಶ ಪಾಲಿಸದೆ ಅನ್ಯಭಾಷೆಯ ನಾಲಫಲಕ ಆಳವಡಿಸಿ ಉದ್ದಟನ ಪ್ರದರ್ಶಿಸುತ್ತಿದ್ದಾರೆ. ಮಾಲೂರು ಪಟ್ಟಣದಲ್ಲಿ ಅಂಗಡಿ ಮುಗ್ಗಟುಗಳು,ಖಾಸಗಿ ಶಾಲೆ,ಮಾಲ್‌ ,ಆಸ್ವತ್ರೆಗಳು ಕನ್ನಡ ವನ್ನು ಕಡೆಗಾಣಿಸಿ ಅನ್ಯಭಾಷ ಪ್ರೇಮ ಮೆರೆಯುತ್ತಿದ್ದಾರೆ, ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಬಳಸದಿದ್ದರೆ ನಾಮಫಲಕಗಳಿಗೆ ಕಪ್ಪು ಮಸಿ ಬಳಿಯುವುದಾಗಿ ಎಚ್ಚರಿಸಿದರು.

ಕ್ರಮ ಕೈಗೊಳ್ಳುವ ಭರವಸೆ

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್‌ ರಮೇಶ್‌ ಅವರು ಸರ್ಕಾರದ ಆದೇಶ ಜಾರಿಗೆ ತರಲಾಗುವುದು. ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ತಾಲೂಕಿನಾದ್ಯಂತ ಶೇ.೬೦ ರಷ್ಟು ಕನ್ನಡ ಭಾಷೆಯ ನಾಮಫಲಕ ಇರುವಂತೆ ಮಾಡಲಾಗುವುದು ಎಂದರು. ಮುಖ್ಯಾಧಿಕಾರಿ ಪ್ರದೀಪ್‌ ಕುಮಾರ್‌,ಪುರಸಭೆ ಅಧ್ಯಕ್ಷೆ ಕೋಮಲ ನಾರಾಯಣ್‌,ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿರಾಜು,ತಾಲೂಕು ಅಧ್ಯಕ್ಷ ಶ್ರೀನಿವಾಸ್‌ ,ಮಹಿಳಾ ಜಿಲ್ಲಾಧ್ಯಕ್ಷೆ ಲತಾಬಾಯಿ,ಜಿಲ್ಲಾ ಉಪಾಧ್ಯಕ್ಷ ಮುರಳಿಧರ್‌,ಶಂಕರ್‌, ಯುವ ಘಟಕ ಅಧ್ಯಕ್ಷ ಸಂತೋಷ್‌ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!