ಎಲ್ಲ ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆ ಕಡ್ಡಾಯ ಆಗಬೇಕು: ಸಾಹಿತಿ ಎನ್.ಟಿ.ಯರ‍್ರಿಸ್ವಾಮಿ

KannadaprabhaNewsNetwork |  
Published : Nov 07, 2025, 02:15 AM IST
ಕ್ಯಾಪ್ಷನ1ಕೆಡಿವಿಜಿ39 ದಾವಣಗೆರೆಯಲ್ಲಿಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಧ್ವಜಾರೋಹಣವನ್ನು ಎನ್.ಟಿ ಯರ‍್ರಿ ಸ್ವಾಮಿ ನೆರವೇರಿಸಿದರು. ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ  ನಾಗರಾಜ ಬಡದಾಳ್, ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ, ಗಡಿಗುಡಾಳ ಮಂಜುನಾಥ ಇತರರು ಇದ್ದರು. | Kannada Prabha

ಸಾರಾಂಶ

ಪ್ರತಿಯೊಂದು ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆ ಕಡ್ಡಾಯ ಆಗಬೇಕು. ಗ್ರಾಮೀಣ ಜನರಿಗೆ ಬಹಳ ತೊಂದರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಕರವೇ ಸಾಕಷ್ಟು ಹೋರಾಟ ಮಾಡುತ್ತ ಬರುತ್ತಿದೆ. ನಮ್ಮ ರಾಜ್ಯದಲ್ಲಿ ಸುಮಾರು 12 ಸಾವಿರ ಬ್ಯಾಂಕ್‌ಗಳಿದ್ದು, ಎಲ್ಲಾ ಶಾಖೆಗಳಲ್ಲಿ ಕನ್ನಡ ಬಳಸುವಂತಾಗಬೇಕು ಎಂದು ನಿವೃತ್ತ ಬ್ಯಾಂಕ್ ಉದ್ಯೋಗಿ, ಸಾಹಿತಿ ಎನ್.ಟಿ. ಯರ‍್ರಿಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರತಿಯೊಂದು ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆ ಕಡ್ಡಾಯ ಆಗಬೇಕು. ಗ್ರಾಮೀಣ ಜನರಿಗೆ ಬಹಳ ತೊಂದರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಕರವೇ ಸಾಕಷ್ಟು ಹೋರಾಟ ಮಾಡುತ್ತ ಬರುತ್ತಿದೆ. ನಮ್ಮ ರಾಜ್ಯದಲ್ಲಿ ಸುಮಾರು 12 ಸಾವಿರ ಬ್ಯಾಂಕ್‌ಗಳಿದ್ದು, ಎಲ್ಲಾ ಶಾಖೆಗಳಲ್ಲಿ ಕನ್ನಡ ಬಳಸುವಂತಾಗಬೇಕು ಎಂದು ನಿವೃತ್ತ ಬ್ಯಾಂಕ್ ಉದ್ಯೋಗಿ, ಸಾಹಿತಿ ಎನ್.ಟಿ. ಯರ‍್ರಿಸ್ವಾಮಿ ಹೇಳಿದರು.

ದಾವಣಗೆರೆಯ ಡಾ.ಎಂ.ಸಿ.ಮೋದಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಹಮ್ಮಿಕೊಂಡ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಎಟಿಎಂಗಳಲ್ಲಿ ಸಹ ಕನ್ನಡ, ಇಂಗ್ಲಿಷ್, ಹಿಂದಿ ಮೂರು ಭಾಷೆಗಳು ಇರುತ್ತವೆ. ಆದರೆ ಅವುಗಳಲ್ಲಿ ಕನ್ನಡ ಬಿಟ್ಟು ಇನ್ನೆರಡು ಭಾಷೆ ಬಳಸಲು ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಜವಾಗಿಯೂ ಬೇಸರದ ಸಂಗತಿಯಾಗಿದೆ ಎಂದರು.

ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಬಡದಾಳ್ ಮಾತನಾಡಿ, ಎರಡೂವರೆ ಸಾವಿರ ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಗೆ ತನ್ನದೇ ಆದ ಒಂದು ಲಿಪಿ ಇದೆ, ಏನು ಬರೆಯುತ್ತೇವೆಯೋ ಅದನ್ನು ಓದುತ್ತೇವೆ, ಏನು ಓದುತ್ತೇವೆಯೋ ಅದನ್ನು ಬರೆಯುತ್ತೇವೆ. ನಾಡು ನುಡಿಗಾಗಿ ಹೋರಾಡಿದವರಲ್ಲಿ ನಮ್ಮ ದಾವಣಗೆರೆಯ ಮಹಾಲಿಂಗರು ಒಬ್ಬರು. ನಮ್ಮ ಹೆಮ್ಮೆಯ ಭಾಷೆಯ ಕವಿಗಳಿಗೆ 8 ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಷಯ ಎಂದರು.

ನಮ್ಮ ಭಾಷೆಯ ನಮ್ಮತನವನ್ನು ನಾವು ಇಂದು ಮರೆಯಬಾರದು. ಹಾಗೆಯೇ ನಾವು ನಮ್ಮ ಮನೆಯಿಂದಲೇ ಕನ್ನಡ ಬೆಳೆಸುವ ಕಾರ್ಯ ಮಾಡಬೇಕಿದೆ. ನಮ್ಮ ದಾವಣಗೆರೆಯ ಪ್ರಮುಖ ವೃತ್ತಗಳಿಗೆ ಮಹನೀಯರ ಹೆಸರಿದ್ದರೂ ಸಹ ಬೇರೆ ಹೆಸರಿನಿಂದ ಕರೆದು ರೂಢಿ ಮಾಡಿಕೊಂಡಿದ್ದಾರೆ. ಅದು ಬದಲಾವಣೆ ಆಗಬೇಕಿದೆ ಎಂದರು.

ಪಾಲಿಕೆ ಮಾಜಿ ಸದಸ್ಯ ಗಡಿಗುಡಾಳ ಮಂಜುನಾಥ ಮಾತನಾಡಿ, ನಮ್ಮ ಭಾಷೆ ಕನ್ನಡ ಉಳಿಸಿ ಬೆಳೆಸಲು 1947 ರಿಂದಲೂ ಕೂಡಾ ಅನೇಕ ಮಹನೀಯರು ಹೋರಾಟ ಮಾಡುತ್ತಾ ಬಂದಿದ್ದಾರೆ. 1956ರಲ್ಲಿ ಏಕೀಕರಣವಾಯಿತು. ಇದಕ್ಕೂ ಮೊದಲು ಸುಮಾರು 500ಕ್ಕೂ ಹೆಚ್ಚು ರಾಜ ವಂಶಸ್ಥರು ಆಡಳಿತ ಮಾಡಿಕೊಂಡು ಬಂದಿದ್ದರು. ಕನ್ನಡ ಏಕೀಕರಣವಾದ ಮೇಲೆ ಒಂದಾಗಿದೆ ಎಂದರು.

ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಕರವೇ ಹೋರಾಟದ ಹಾದಿಯನ್ನು ಸವಿವರವಾಗಿ ವಿವರಿಸಿದರು.

ಕರವೇ ಜಿಲ್ಲಾ ಗೌರವಾಧ್ಯಕ್ಷ ವಾಸುದೇವ ರಾಯ್ಕರ್, ಪತ್ರಕರ್ತ ಎಂ.ಎಸ್.ಚನ್ನಬಸವ ಶೀಲವಂತ್, ಜೆ.ಎಚ್.ಪಟೇಲ್ ಕಾಲೇಜು ಪ್ರಾಚಾರ್ಯ ಮುಸ್ತಫ, ಕರವೇ ವಿವಿಧ ಘಟಕಗಳ ಪದಾಧಿಕಾರಿಗಳಾದ ಮಹೇಶ್ವರಪ್ಪ, ಮಂಜುನಾಥ, ನಾಘರಾಜ, ಚಂದ್ರು, ಸುರೇಶ, ಮಂಜುಶ್ರೀಗೌಡ, ಕರಿಬಸಪ್ಪ, ತುಳಸಿರಾಮ್, ಸಂಜು, ಗಿರೀಶ ಕುಮಾರ, ಪರಮೇಶ್ವರ, ಗೋಪಾಲ ದೇವರಮನಿ, ಜಮೀವುಲ್ಲಾ, ಅನ್ವರ್, ದಾದಾಪೀರ್, ರಫೀಕ್, ಮಹಿಳಾ ಘಟಕದ ಬಸಮ್ಮ, ಆಲೂರು ನಾಗಮ್ಮ, ಮಂಜುಳಾ ಮಹಾಂತೇಶ, ಮಂಜುಳಾ ಗಣೇಶ, ಸಾವಿತ್ರಮ್ಮ ಅನೇಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ