ನ್ಯಾನೋ ಗೊಬ್ಬರ ಬಳಕೆ ಅತ್ಯಂತ ಪರಿಣಾಮಕಾರಿ: ಮಾರುತಿ ಅಂಗರಗಟ್ಟಿ

KannadaprabhaNewsNetwork |  
Published : Jul 31, 2025, 12:46 AM IST
ಫೋಟೋ : 30ಎಚ್‌ಎನ್‌ಎಲ್2 | Kannada Prabha

ಸಾರಾಂಶ

ನ್ಯಾನೋ ಗೊಬ್ಬರ ಸಿಂಪರಣೆ ಅತ್ಯಂತ ಪರಿಣಾಮಕಾರಿಯಾದುದು. ಅಲ್ಲದೆ ಅತ್ಯಲ್ಪ ಅವಧಿಯಲ್ಲಿ ಸುಲಭವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಬೆಳೆಗೆ ನೀಡುವ ಗೊಬ್ಬರ ಇದಾಗಿದೆ.

ಹಾನಗಲ್ಲ: ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ಭತ್ತದ ಬೆಳೆಗೆ ಯೂರಿಯಾವನ್ನು ಡ್ರೋನ್ ಮೂಲಕ ಸಿಂಪರಣೆ ಮಾಡುವ ಮೂಲಕ ಪ್ರಾತ್ಯಕ್ಷಿಕೆ ನಡೆಸಲಾಯಿತು. ಬುಧವಾರ ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದ ಭತ್ತದ ಜಮೀನೊಂದರಲ್ಲಿ ಡ್ರೋನ್ ಮೂಲಕ ಅತ್ಯಂತ ಸರಳ ಹಾಗೂ ಕಡಿಮೆ ಸಮಯದಲ್ಲಿ ರಾಸಾಯನಿಕ ಗೊಬ್ಬರ ಸಿಂಪರಣೆ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದ ಕೃಷಿ ಅಧಿಕಾರಿ ಮಾರುತಿ ಅಂಗರಗಟ್ಟಿ, ನ್ಯಾನೋ ಗೊಬ್ಬರ ಸಿಂಪರಣೆ ಅತ್ಯಂತ ಪರಿಣಾಮಕಾರಿಯಾದುದು. ಅಲ್ಲದೆ ಅತ್ಯಲ್ಪ ಅವಧಿಯಲ್ಲಿ ಸುಲಭವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಬೆಳೆಗೆ ನೀಡುವ ಗೊಬ್ಬರ ಇದಾಗಿದೆ ಎಂದರು.

ಭೂಮಿಗೆ ಯೂರಿಯಾ ಹೆಚ್ಚು ಬಳಸುವುದರಿಂದ ಆಹಾರ ಪದಾರ್ಥಗಳ ಮೂಲಕ ಆರೋಗ್ಯಕ್ಕೂ ಹಾನಿಕಾರಕ. ಮಣ್ಣಿನ ಆರೋಗ್ಯವನ್ನೂ ಹಾಳು ಮಾಡುತ್ತದೆ. ತಾತ್ಕಾಲಿಕವಾಗಿ ಇಳುವರಿ ಹೆಚ್ಚಾದಂತೆ ಕಂಡುಬಂದರೂ ಭೂಮಿ ಹಾಳಾಗಿ ಮುಂದೆ ಪೈರು ಬಾರದೇ ನಿರಾಶೆಗೆ ಕಾರಣವಾಗುತ್ತದೆ ಎಂದರು. ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ ಮಾತನಾಡಿ, ಯೂರಿಯಾ ಭೂಮಿಗೆ ಬಳಸುವುರಿಂದ ಮಣ್ಣಿನ ಆಮ್ಲೀಯತೆ ಹಾಳಾಗಿ, ನೀರಿನ ಮಾಲಿನ್ಯ ಸಾಧ್ಯತೆಯೇ ಹೆಚ್ಚು. ಪೈರಿಗೆ ಕೀಟಬಾಧೆ ಹೆಚ್ಚಾಗುತ್ತದೆ. ಪರಿಸರದ ಮೇಲೆಯೂ ದುಷ್ಟರಿಣಾಮವಾಗುತ್ತದೆ. ನ್ಯಾನೋ ಯೂರಿಯಾ ಸಾಂಪ್ರದಾಯಿಕ ಯೂರಿಯಾಗಿಂತಲೂ 8- 10 ಪಟ್ಟು ಭೂಮಿ ಹಾಗೂ ಪೈರಿಗೆ ಸಹಕಾರಿ ಎಂದರು.ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಕಾಲಕಾಲಕ್ಕೆ ಬದಲಾದ ತಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ರೈತರಿಗೆ ಸರ್ಕಾರಿ ಕೃಷಿ ಇಲಾಖೆ ಹಾಗೂ ಹಲವು ಸಂಘ ಸಂಸ್ಥೆಗಳು ನಡೆಸುವ ಮಾರ್ಗದರ್ಶನ ಶಿಬಿರಗಳಲ್ಲಿ ಪಾಲ್ಗೊಂಡು ಕೃಷಿ ಜಾಗೃತಿಗೆ ಮುಂದಾಗುವ ಅಗತ್ಯವಿದೆ ಎಂದರು.ರೈತರಾದ ಶಿವಾಜಿ ಸಾಳುಂಕೆ, ಸಿದ್ದಲಿಂಗೇಶ ವಳಸಂಗದ, ಮೃತ್ಯುಂಜಯ ಲೂತಿಮಠ, ಶೇಖರಪ್ಪ ಅಪ್ಪಾಜಿ, ಪ್ರಕಾಶ ಚೋಳಪ್ಪನವರ, ಐ.ಎಸ್. ನಾಗೋಜಿ, ಸುರೇಶಗೌಡ ಪಾಟೀಲ, ಮಜೀದಅಹಮ್ಮದ ಇಂಗಳಗಿ, ಶಿವಕುಮಾರ ದೊಡ್ಡಮನಿ, ಹಯಾತ್ ಚಿನ್ನಳ್ಳಿ, ಷಣ್ಮುಖಪ್ಪ ಅಂದಲಗಿ, ಸೋಮಣ್ಣ ಜಡೆಗೊಂಡರ, ಬಸವರಾಜ ಚಲ್ಲಾಳ, ಕೃಷಿ ಅಧಿಕಾರಿಗಳಾದ ಸಂಗಮೇಶ ಹಕ್ಲಪ್ಪನವರ, ಬಸವರಾಜ ಮಣಕೂರ, ಮೌನೇಶ ಚನ್ನಾಪೂರ, ಅಣ್ಣಪ್ಪ ನಾಗೋಜಿ ಮೊದಲಾದವರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...